ನಮ್ಮ ಸಾಧನೆಗಳನ್ನು ಪರಿಗಣಿಸಿ ಮತ ನೀಡಿ – ಸತೀಶ ಜಾರಕಿಹೊಳಿ

Must Read

ಮೂಡಲಗಿ – ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಸ್ತೆಗಳು, ಕೃಷಿ ಹೊಂಡ ಮುಂತಾದ ಜನಪ್ರಿಯ ಕಾರ್ಯಗಳನ್ನು ಮಾಡಿದ್ದಾರೆ ಅವುಗಳನ್ನು ಪರಿಗಣಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ಕೊಡಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಮಂಗಳವಾರ ಸ್ಥಳೀಯ ಶ್ರೀ ಶಿವಬೋಧರಂಗ ಸೊಸಾಯಿಟಿಯಲ್ಲಿ ವಿಧಾನ ಪರಿಷತ್ ಚುನಾವಣಾ ಪ್ರಚಾರಾರ್ಥ ಅವರು ಮಾತನಾಡಿದರು.

ಈ ಭಾಗದಲ್ಲಿ ನೀರಾವರಿ ವಿಷಯದಲ್ಲಿ ಅನೇಕ ಕೆಲಸ ಮಾಡಿದ್ದೇವೆ ಅದು ತಮಗೂ ಗೊತ್ತಿದೆ. ಮಳೆಗಾಲದಲ್ಲಿ ಹರಿದು ಹೋಗುತ್ತಿದ್ದ ನೀರನ್ನು ರಕ್ಷಿಸಿ ಬೇಸಿಗೆ ಕಾಲದಲ್ಲಿ ನೀಡಿದ್ದೇವೆ ಹಾಗಾಗಿ ಈಗ್ಗೆ ಕೆಲವು ವರ್ಷಗಳಿಂದ ಬೇಸಿಗೆ ಅನುಭವ ಆಗಿಲ್ಲ.

ಚನ್ನರಾಜ ಹಟ್ಟಿಹೊಳಿ ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಯವಕರಾಗಿದ್ದು ಜನಸೇವೆ ಮಾಡಲು ಉತ್ಸುಕರಾಗಿದ್ದಾರೆ ನಿಮ್ಮ ಯಾವುದೇ ಸಮಸ್ಯೆಗಳ ಪರಿಹಾರಕ್ಕಾಗಿ ಅವರು ಕಟಿಬದ್ಧರಾಗಿ ನಿಲ್ಲುತ್ತಾರೆ. ಬೆಳಗಾವಿ ಜಿಲ್ಲೆಯಲ್ಲಿ ತಮಗೆ ಎರಡು ಮತ ನೀಡುವ ಅವಕಾಶಗಳಿವೆ ಅದರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಂದು ಮತ ನೀಡಬೇಕು ಎಂದು ಸತೀಶ ಅವರು ನುಡಿದರು.

ಕಾಂಗ್ರೆಸ್ ನಾಯಕ ಎಸ್ ಆರ್ ಸೋನವಾಲ್ಕರ ಮಾತನಾಡಿದರು.

ವೇದಿಕೆಯ ಮೇಲೆ ಕಲ್ಲಪ್ಪ ಗಾಣಿಗೇರ, ಶಿವನಗೌಡಾ ಪಾಟೀಲ, ಲಕ್ಷ್ಮಣ ಹುಚರಡ್ಡಿ, ರವೀಂದ್ರ ಸೋನವಾಲ್ಕರ, ಮಲ್ಲಿಕಾರ್ಜುನ ಕಬ್ಬೂರ ಇದ್ದರು.

ಉಮೇಶ ಬೆಳಕೂಡ ಕಾರ್ಯಕ್ರಮ ನಿರೂಪಿಸಿದರು.

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...

More Articles Like This

error: Content is protected !!
Join WhatsApp Group