spot_img
spot_img

ಕವನ: ಉತ್ತರ ಸೀಮೆಯ ಚೆಲ್ವರಾಶಿ

Must Read

- Advertisement -

ಉತ್ತರ ಸೀಮೆಯ ಚೆಲ್ವರಾಶಿ

ಕವಿ-ಪುಂಗವರು, ದಾಸ-ಶರಣರು
ಉದಿಸಿದ ಮಹಾ ಮಹಿಮೆಯ ನಾಡು
ಮಾರ್ಗಕಾರರು ತೋರಿದ ನೆಲೆವೀಡು

ಆರುಂಕುಸವಿಟ್ಟೊಡಂ ನೆನೆವುದೆನ್ನ ಮನಂ
ಎಂದಕವಿವರ್ಯ, ದಾಸ-ಶರಣರ ಹೆಮ್ಮೆಯ ನೆಲೆಬೀಡು
ದೇವನಾಂಪ್ರಿಯಂಗೆ ಪ್ರಿಯವಾದ ನಾಡು

ವರ್ಷಧಾರೆಗೆ ಮಲೆಗಳ ಸೃಷ್ಟಿ
ಶ್ರಾವಣದ ಮಾಸದ ಸೊಬಗಿನ ಪುಷ್ಠಿ
ಸೊಂಡೂರು ಸಿರಿ ಸವಿಯೋಣ ಬನ್ನಿ

- Advertisement -

ಐದು ಸುತ್ತಿನ ಕೋಟೆಯದು
ಐತಿಹ್ಶ ಹೊತ್ತ ಜಲದುರ್ಗ
ಕೃಷ್ಣೆ ತೋಳ್ಬಂದಿಯ ಬೃಹತ್ ದ್ವೀಪವದು.

ಗುಹಾಂತರ ಬಸದಿ ಮಂದಿರ
ಅಗಸ್ತ್ಶ ತೀರ್ಥ, ವಾತಾಪಿ ಇಲ್ವಲರು
ಚೆಲ್ವ ಚಾಲುಕ್ಶರ ನಾಡು ಮಿಂಚಿದ್ದು ಭಾರತಕ್ಕೆಲ್ಲ

ಬಾದಾಮಿ ಶ್ರೀಬನಶಂಕರಿ ಪ್ರಭಾವಳಿ
ಮರಳ್ಗಲ್ಲು ಬೆಟ್ಟದ ಸೋಜಿಗದ ಸರಪಳಿ
ಆಚೆ ಧುಮ್ಮಿಕ್ಕುವ ಕಪಿಲತೀರ್ಥ,
ನಯನ ಮನೋಹರ

- Advertisement -

ಅಮೋಘವರ್ಷ ವಿಕ್ರಮಾದಿತ್ಶ ಜಗದೇಕಮಲ್ಲರು;
ಕನ್ನಡ ಕಲಿ ಕಲೆ ಸಂಸ್ಕೃತಿ ಪೋಷಕರು
ಕನ್ನಡ ಸೇನಾಭಟರ ರಣ ಕಹಳೆಯು ಮಾರ್ದನಿಸಿತು ಹಿಮಾಲಯದೆತ್ತರಕೆ

ಐಹೊಳೆ ಪಟ್ಟದಕಲ್ಲು ಮಹಾಕೂಟ
ಶಿಲ್ಪಾಚಾರರ ತೊಟ್ಟಿಲು ತೋಟ
ಮಧ್ಶವಿದೆ ಸಿದ್ಧನಕೊಳ್ಳ, ಸಿದ್ಧರಮಠ
ನೋಡಲ್ಲಿ

ರಾಮಾಯಣದ ಕಿಷ್ಕಿಂಧೆ
ವಿಜಯನಗರವು ಬೇರೂಡಿ ಹಾಲುಂಡ, ಆನೆಗುಂದಿ ವಾಲಿ ಸುಗ್ರೀವರ ಗುಹೆಗಳು,
ಇವೆ ಅಲ್ಲೆಲ್ಲ

ರಾಮ ಭಂಟ, ಆಂಜನ ಪರ್ವತ
ಪುಣ್ಶಕ್ಷೇತ್ರ ಪಂಪಾ ಸರೋವರವಿದೆ ಅಲ್ಲಿ
ಕುಮಾರರಾಮನ ಕುಮ್ಮಟದುರ್ಗ ಎಲ್ಲ
ನೋಡಲ್ಲಿ

ಹಕ್ಕ-ಬುಕ್ಕ ವಿಜಯನಗರದೌನ್ಶತ್ಶ
ಜಗದ್ವಿಖ್ಶಾತ ಕೃಷ್ಣದೇವರಾಯರ
ಉತ್ತುಂಗ ಶಿಖರವು ವೈಭವದ ಹಂಪಿ ಆಗಸಕೆ

ದೇವಾಲಯಗಳ ಚಕ್ರವರ್ತಿ
ಸೌಂದರ್ಯದೊಳು ಪ್ರಸಿದ್ಧಿ
ಮಹದೇವ ದೇವಾಲಯ ಇಟಗಿ

ವಿಜಯನಗರ ಅಚ್ಚು-ಮೆಚ್ಚಿನ ಕನಕಗಿರಿ,
ನಾಲ್ವಡಿ ವೆಂಕಟಪ್ಪನ ಶೌರ್ಯದ ಸುರುಪುರ
ಸ್ವಾತಂತ್ರ್ಶದ ಕಿಚ್ಚು ಹಚ್ಚಿದ್ದು ನಾಡಿಗೆಲ್ಲ

ನವಿಲುತೀರ್ಥ-ಮಲಪಹಾರಿ ಪಹರೆಯೊಳು
ಏಳುಕೊಳ್ಳದ ಎಲ್ಲಮ್ಮ .
ತುಂಗಾವಿಹಾರಿ ಸುಮ್ಮನೇನಮ್ಮ
ಏಳುಗುಡ್ಡದ ಹುಲಿಗೆಮ್ಮ ಉದೋ ಉದೋ.

ಗಣಿತ-ಖಗೋಳ ಖ್ಶಾತ ವಿಜ್ಞಾನಿ ಭಾಸ್ಕರ
ಶ್ವೇತ ಸಂತ ಪೂಜ್ಶ ತತ್ವಜ್ಞಾನಿ ಸಿದ್ದೇಶ್ವರ
ಗುಮ್ಮಟ ನಗರಿಗೆ ಬಂತೊಂದಾನೆ
ಬಿರುಸಿನ ಮಾತು ಬಲುಗಟ್ಟಿ
ಸವಿ ಸವಿ ಹೃದಯ, ಬಿಳಿಜೋಳದ ರೊಟ್ಟಿ

ಸ್ವಾಭಿಮಾನಿ ನಾಡು ಕಿತ್ತೂರ ಕಲಿದ್ವಯರು
ರಾಣಿ ಚನ್ನಮ್ಮಾಜಿ, ಭಂಟ ರಾಯಣ್ಣರ ಕೆಚ್ಚು
ಬಿಡಿಸಿದರು ಬ್ರಿಟಿಷರಿಗಿಡಿದ ಹುಚ್ಚು.

ಅರವತ್ತು ಕಂಬಗಳ ಬಸದಿ ಬಂಕಾಪುರವು ಅಂದ
ತಿಮ್ಮಪ್ಪ ನಾಯಕ ಜನಿಸಿ , ಒಡನಾಡಿದ ಬಾಡ
ಆರಾಧ್ಶ ದೈವ ಆದಿಕೇಶವನ ಕಾಗಿನೆಲೆ
ಕಣ್ದುಂಬಿ ಕೊಳ್ಳಬೇಕೆಂಬ ಸೆಲೆ

ಮೈಲಾರ – ದೇವರಗುಡ್ಡ
ಉತ್ತರ ವಾಹಿನಿ ತುಂಗಭದ್ರೆ
ಬ್ಶಾಡಗಿ ಮೆಣಿಸಿನಕಾಯಿ ಎಲ್ರೂ ಬಾಯಿ, ಹಾಯ್ ಹಾಯ್

ದಾನ ಚಿಂತಾಮಣಿ ರಾಣಿ ಅತ್ತಿಮಬ್ಬೆಯ
ಲೊಕ್ಕಿಗುಂಡಿ
ಝಣ ಝಣ ಗದ್ಶಾಣಗಳ ಗುಂಡಿ
ನರಗುಂದ ಬಂಡಾಯ ಊದಿದ ಕಹಳೆ
ಪ್ರಚಂಡ, ನೂರನಲವತ್ತು ಮಾಸವಾಡಿ

ತುಂಗಭದ್ರ ಆಣೆಯು ಸಂಪದ ಸಾಗರ
ರಾಯಲ್ ಬಳ್ಳಾರಿ ದೋಆಬ್ ಮೈದಾನ
ಮಂತ್ರಾಲಯ ನವ ವೃಂದಾವನ,
ನೋಡಲ್ಲಿ

ಕೃಷ್ಣಾ ಮೇಲ್ಥಂಡೆ ಕಟ್ಟುಗಳೊಟ್ಟಿದ
ಜೀವ ಜಲಾಶಯಗಳಷ್ಟೂ
ಶರಣರೈಕ್ಶ ಸಂಗಮಸ್ಥಳ ಭಕ್ತಿಯ ಪರಕಾಷ್ಟೆ

ಬಯಲು-ಮಲೆನಾಡಿನ ಕೊಂಡಿ
ಕವಿಪುಂಗವರು ತಣಿಯುವ ಧಾಮ
ಹೆಮ್ಮೆಯ ಸಾಂಸ್ಕೃತಿಕ ಧಾರವಾಡ

ಎಪ್ಪತ್ತುಗಿರಿ ಸುತ್ತುವದ್ಶಾತಕೆ
ಉತ್ತರ ಸೀಮೆಯ ಹಸಿರು ನೆತ್ತಿ
ಕಪ್ಪತ್ತಗಿರಿ ನೋಡಲು ಬೇಕೊಮ್ಮ

ಗೋಕರ್ಣ ಕಿನಾರೆ ಓಂಕಾರ
ಕುಮಟಿ-ಹೊನ್ನಾವರ
ಅಂಬರಕ್ಕೇರಿದ ಹೆಮ್ಮರವು

ಕರಾವಳಿ-ಕಡಲು ಕಾರವಾರ
ನಲಿಯುವ ಬನ್ನಿ ಸುಂದರ ತೀರ
ಶಹ್ಶಾದ್ರಿ ಶ್ರೇಣಿ ಶಿರಿಸಿ-ದಂಡಾರಣ್ಶ

ಕಂನಾಡಿನ ಕಿರೀಟ ಪ್ರಾಯವೆನ್ನಿ
ಪಿಸುಗುಡುವ ಬಿದರಿ, ಬೀದರ.
ಕಲಬುರ್ಗಿ ಸೂಫಿ-ಸಂತ ಶ್ರೇಷ್ಠರು
ಕಲ್ಶಾಣದ ಬೆಳಕು ಹರಿದಿಹುದು ನಾಡಿನ
ನರನಾಡಿಗಳಲ್ಲಿ


ಅಮರ್ಜಾ
ಅಮರೇಗೌಡ ಪಾಟೀಲ ಜಾಲಿಹಾಳ
ನಿವೃತ್ತ ಬ್ಶಾಂಕ್ ವ್ಶವಸ್ಥಾಪಕರು,
ಬು.ಬ. ನಗರ, ಕುಷ್ಠಗಿ

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group