ಬೀದರ – ಬಿಜೆಪಿಗರು ತಿರುಕನ ಕನಸು ಕಾಣ್ತಾ ಇದ್ದಾರೆ. ನೇರ ದಾರಿಯಲ್ಲಿ ಬಂದು ಬಿಜೆಪಿ ಎಂದೂ ಅಧಿಕಾರ ನಡೆಸಿಲ್ಲ. ಜನರ ಆಶೀರ್ವಾದ ಬಿಜೆಪಿಗರಿಗೆ ಯಾವತ್ತೂ ಸಿಕ್ಕಿಲ್ಲ.ಹಿಂಬಾಗಿಲಿನಿಂದಲೇ ಬಂದು ಅಧಿಕಾರ ನಡೆಸೊದು, ಬಿಜೆಪಿಗರ ಚಾಳಿಯಾಗಿದೆ. ಮತ್ತೆ ಅದೇ ರೀತಿಯಲ್ಲಿ ಅಧಿಕಾರ ಮಾಡಬೇಕೆಂಬ ಭ್ರಮೆಯಲ್ಲಿದ್ದಾರೆ, ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಸಚಿವ ಈಶ್ವರ ಖಂಡ್ರೆ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಆಪರೇಶನ್ ಕಮಲ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಾ, ಬಿಜೆಪಿಯವರಿಗೆ ನೂರು ಕೋಟಿ ಎಲ್ಲಿಂದ ಬರ್ತಿದೆ.ಇಡಿ, ಐಟಿ ಅಧಿಕಾರಿಗಳು ಏನು ಮಾಡ್ತಾ ಇದ್ದಾರೆ.ಅವರ ಆಪರೇಷನ್ ಕಮಲ ಸಕ್ಸಸ್ ಆಗಲ್ಲ.ಐದು ವರ್ಷಗಳವರೆಗೆ ನಾವು ಸುಭದ್ರ ಸರ್ಕಾರ ನಡೆಸುತ್ತೇವೆ ಎಂದರು.
ಮುಡಾ ಹಗರಣದಲ್ಲಿ ಸಿಎಂ ಸಿದ್ರಾಮಯ್ಯ ವಿರುದ್ಧ ಅರೋಪ ವಿಚಾರ ಮಾತನಾಡಿದ ಅವರು, ಹಾದಿ ಬೀದಿಯಲ್ಲಿ ಹೋಗುವವರ ಕಡೆಯಿಂದ ದೂರು ಕೊಡಿಸಿದರೆ ಸರ್ಕಾರ ನಡೆಸೋಕೆ ಆಗುತ್ತಾ. ಹೋಗ್ತಾ ಹೋಗ್ತಾ ಯಾರ್ಯಾರೋ ಮೇಲೆ ದೂರು ಕೊಡ್ತಾರೆ ಅವರನ್ನೆಲ್ಲಾ ರಾಜೀನಾಮೆ ಕೊಡಿಸೋಕೆ ಆಗುತ್ತಾ..? ಎಂದು ಪ್ರಶ್ನೆ ಮಾಡಿದರು
ಎಲೆಕ್ಟ್ರೋಲ್ ಬಾಂಡ್ ಮೂಲಕ್ 2,400 ಕೋಟಿ ಲೂಟಿ ಆಗಿದೆ.ಈ ಪ್ರಕರಣಕ್ಕೆ ಪ್ರಧಾನಿ ಮೋದಿ ರಾಜೀನಾಮೆ ಕೊಡ್ತಾರಾ..?ಈ ವಿಚಾರಕ್ಕೆ ಅಮಿತ್ ಶಾ ಅವರ ರಾಜೀನಾಮೆ ಕೇಳಲಿ ಎಂದು ಬೀದರ್‌ನಲ್ಲಿ ಬಿಜೆಪಿ ವಿರುದ್ಧ ಸಚಿವ ಈಶ್ವರ್ ಖಂಡ್ರೆ ಕಿಡಿಕಾರಿದರು.
ವರದಿ : ನಂದಕುಮಾರ ಕರಂಜೆ, ಬೀದರ