ಡಾ.ಅಶೋಕ್ ನರೋಡೆ ಅವರಿಗೆ “ರಾಷ್ಟ್ರಕೂಟ ಸಾಹಿತ್ಯಶ್ರೀ” ಪ್ರಶಸ್ತಿ ಪ್ರದಾನ.

Must Read

“ಹೊಂಬೆಳಕು ಸಾಂಸ್ಕೃತಿಕ ಸಂಘ”(ರಿ), ಬೆಳಗಾವಿ ವತಿಯಿಂದ ಪ್ರತಿ ವರ್ಷ ಕೊಡ ಮಾಡುವ “ರಾಷ್ಟ್ರಕೂಟ ಸಾಹಿತ್ಯಶ್ರೀ” ಪ್ರಶಸ್ತಿಯನ್ನು ೨೦೨೩ ಸಾಲಿನಲ್ಲಿ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರದ ಕೆ.ಎಲ್.ಇ‌. ಸಂಸ್ಥೆಯ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಅಶೋಕ ನರೋಡೆ ಅವರ ಕೃತಿಗಳಾದ ” ಮತ್ತಷ್ಟು ಮಹಾಕಾವ್ಯಗಳು” ಹಾಗೂ ” ಸೂರ್ಯೋದಯದ ನಾಡು ಜಪಾನ” ಕೃತಿಗಳಿಗೆ ನೀಡಲಾಗಿದೆ.

ದಿನಾಂಕ: ೨೪-೦೮-೨೦೨೪ ರಂದು ಬೆಳಗಾವಿ ಕನ್ನಡ ಭವನದಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಪ್ರಶಸ್ತಿ ವಿಜೇತ ಸಾಹಿತಿ ಡಾ. ಅಶೋಕ ನರೋಡೆ ಅವರಿಗೆ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಮಂಗಲಾ ಮೆಟಗುಡ್ಡ ಅವರು “ರಾಷ್ಟ್ರಕೂಟ ಸಾಹಿತ್ಯಶ್ರೀ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಸಮಾರಂಭದಲ್ಲಿ ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ) ಬೆಳಗಾವಿ ಅಧ್ಯಕ್ಷ ಸ.ರಾ. ಸುಳಕೂಡೆ, ಕಾರ್ಯದರ್ಶಿ ಆರ್. ಬಿ. ಬನಶಂಕರಿ, ಕೃತಿ ಮೌಲ್ಯಮಾಪಕರಾದ ಡಾ.ಅನುಪಮಾ ಖೋತ(ಉತ್ನಾಳ ) ಸಾಹಿತಿಗಳಾದ ಲೀಲಾವತಿ ರಜಪೂತ, ಶೈಲಜಾ ಭಿಂಗೆ, ಜೈಶೀಲಾ ಬ್ಯಾಕೂಡ, ಕ.ಸಾ.ಪ. ಕಾರ್ಯದರ್ಶಿ ಎಮ್. ವ್ಹಾಯ್. ಮೆಣಸಿನಕಾಯಿ, ವಿ. ಎಮ್. ಅಂಗಡಿ, ಕಿರಣ ಬಡಕಲಿ ಉಪಸ್ಥಿತರಿದ್ದರು.

Latest News

ಮನಕ್ಕೆ ಮುದ ನೀಡಿದ ಕಾಮನಬಿಲ್ಲು

ಮೂಡಲಗಿ : ಕಾಮನಬಿಲ್ಲು ಕಮಾನು ಕಟ್ಟಿದೆ ಮೋಡದ ನಾಡಿನ ಬಾಗಿಲಿಗೆ !ಬಣ್ಣಗಳೇಳನು ತೋರಣ ಮಾಡಿದೆ ಕಂದನ ಕಣ್ಣಿಗೆ ಚೆಂದವನೂಡಿದೆ !ಎಂಬ ಕುವೆಂಪುರವರ ಕವಿತೆಯನ್ನು ನೆನಪಿಸುವಂತೆ ಮೂಡಲಗಿಯಲ್ಲಿ ಮೂಡಣದ ಆಗಸದಲ್ಲಿ ಸುಂದರವಾದ...

More Articles Like This

error: Content is protected !!
Join WhatsApp Group