spot_img
spot_img

ರಾಯಚೂರಿನಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ವಿವಿಧ ಕಾರ್ಯಾಗಾರ

Must Read

spot_img
- Advertisement -

ರಾಯಚೂರು – ಜಿಲ್ಲೆಯ ಲಿಂಗಸೂರಿನ ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಪರಿಸರ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ, ಹಾಗೂ ಹಸಿರು ಇಂಧನ ಉತ್ಪಾದನೆ ಕುರಿತು ಕಾರ್ಯಾಗಾರ ಜರುಗಿತು.

ಡಾ.ಸರ್ವಪಲ್ಲಿ ರಾಧಾಕೃಷ್ಣರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಆರಂಭಗೊಂಡ ಸಮಾರಂಭದಲ್ಲಿ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ಡಾ. ರಾಧಾಕೃಷ್ಣನ್ ರವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳು ಉನ್ನತ ಸಾಧನೆಗೈಯ್ಯಲು ಸಾಧ್ಯವೆಂದು ನುಡಿದರು.

ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಚಾರ್ಯ ಮಲ್ಲಪ್ಪ ಸರ್ಜಾಪೂರ ರವರು ವಿದ್ಯಾರ್ಥಿಗಳು ಓದಿನತ್ತ ಗಮನಹರಿಸಿ ಗುರಿ ತಲುಪಲು ಹಗಲಿರುಳು ಶ್ರಮಿಸಲು ಕರೆ ನೀಡಿದರು.

- Advertisement -

ಕಾರ್ಯಾಗಾರದ ಪ್ರಧಾನ ಸಂಪನ್ಮೂಲ ವ್ಯಕ್ತಿ ಶಕ್ತಿನಗರದ ಕ್ಯಾಷುಟೆಕ್ ನಿರ್ಮಿತಿ ಕೇಂದ್ರದ ತರಬೇತಿ ಸಲಹೆಗಾರ ಬಾಲಚಂದ್ರ ಜಾಬಶೆಟ್ಟಿಯವರು, ಪರಿಸರ ಸಂರಕ್ಷಣೆಗಾಗಿ ಇಂಗಾಲದ ಹೆಜ್ಜೆಗಳನ್ನು ಅಳಿಸಲು ಮಾನವ ಸೂಕ್ತ ತ್ಯಾಜ್ಯ ನಿರ್ವಹಣಾ ತಂತ್ರಗಳನ್ನು ಪ್ರತಿ ಮನೆ ಮನೆ ಗಳಲ್ಲಿ ಅಳವಡಿಕೊಳ್ಳುವ ಅವಶ್ಯಕತೆ ಬಗ್ಗೆ ವಿವರವಾಗಿ ಮಾತನಾಡಿದರು. ತ್ಯಾಜ್ಯವನ್ನು ಮೂಲದಲ್ಲಿ ವಿಂಗಡಿಸುವ ಅವಶ್ಯಕತೆಯ ಜೊತೆಗೆ ಮೂಲದಲ್ಲಿಯೇ ತ್ಯಾಜ್ಯವನ್ನು ಗೃಹಮಟ್ಟದಲ್ಲಿ ಸಂಸ್ಕರಿಸುವ ಸುಲಭ ಹಾಗೂ ಪರಿಸರ ಪೂರಕ ತಂತ್ರಜ್ಞಾನಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಗೃಹ ತ್ಯಾಜ್ಯದಿಂದ ಶೂನ್ಯ ವೆಚ್ಚದಲ್ಲಿ ಎರೆಗೊಬ್ಬರ ಹಾಗೂ ಜೈವಿಕ ಗೊಬ್ಬರ ತಯಾರಿಸಿ, ಮನೆ ಮೇಲ್ಛಾವಣಿಯಲ್ಲಿ ಉತ್ಕೃಷ್ಟ ತರಕಾರಿಗಳನ್ನು ಬೆಳೆದು ಆರೋಗ್ಯ ಭಾಗ್ಯದೊಂದಿಗೆ ಆರ್ಥಿಕ ಲಾಭವನ್ನು ಮಾಡುವ ಕುರಿತು ಕಿವಿಮಾತು ಹೇಳಿದರು.

ಮುಂದುವರೆದು ಪರಿಸರ ಸಂರಕ್ಷಣೆಯನ್ನು ನೈಜ ಅರ್ಥದಲ್ಲಿ ಮಾಡಲು ಹಸಿರು ಇಂಧನ ಬಳಕೆ ಅತ್ಯವಶ್ಯಕ ವಾಗಿದ್ದು ಮನೆ ಮೇಲ್ಛಾವಣಿ ಮೇಲೆ ಸೋಲಾರ ವಿದ್ಯುಚ್ಛಕ್ತಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿ ಪಳೆಯುಳಿಕೆಗಳಾಧಾರಿತ ಇಂಧನದ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವುದಲ್ಲದೆ ಬರುವ ದಿನಗಳಲ್ಲಿ ಹಸಿರು ಜಲಜನಕದ ಉತ್ಫಾದನೆ ಮತ್ತು ಬಳಕೆಯಿಂದ ಇಂಧನ ಸ್ವಾವಲಂಬನೆ ಹೊಂದಲು ಪ್ರತಿಯೊಬ್ಬರು ಕೈ ಜೋಡಿಸಲು ಕರೆ ನೀಡಿದರು.
ಕ್ಯಾಷುಟೆಕ್ ನ ಸಹಾಯಕ ಅಭಿಯಂತರ ಹಾಗೂ ಸಂಶೋಧನಾ ವಿಭಾಗದ ಮುಖ್ಯಸ್ಥ ಸುರೇಂದ್ರ ಪಾಟೀಲ ವೇದಿಕೆಯಲ್ಲಿದ್ದರು.

ಬಸಲಿಂಗಪ್ಪ, ಶರಣಪ್ಪ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

- Advertisement -
- Advertisement -

Latest News

ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಗ್ರಾಮ ಆಂದೋಲನಕ್ಕೆ ಚಾಲನೆ

ಮೂಡಲಗಿ : ಕಳೆದ ಶನಿವಾರದಂದು ಗೋಸಬಾಳದ ಸರಕಾರಿ ಕೆ.ಹೆಚ್.ಪಿ.ಎಸ್ ಮತ್ತು ಉನ್ನತೀಕರಿಸಿದ ಪ್ರೌಢ ಶಾಲೆಯಲ್ಲಿ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ವತಿಯಿಂದ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group