ಸಿಂದಗಿ; ಪ್ರತಿಯೊಂದು ಕ್ಷೇತ್ರದಲ್ಲಿ ಗುರುವಿಲ್ಲದಿದ್ದರೆ ಸಾಧನೆ ಶೂನ್ಯ ಕಾರಣ ಮನುಷ್ಯನ ಅಸ್ತಿತ್ವಕ್ಕೆ ಶಿಕ್ಷಕ, ಕೃಷಿಕ, ಸೈನಿಕ ಈ ಮೂವರು ಸಮಾಜಕ್ಕೆ ಬಹುಮುಖ್ಯವಾಗಿದ್ದಾರೆ ಅಂತೆಯೇ ಗುರುವಿಗೆ ಬ್ರಹ್ಮ, ವಿಷ್ಣು, ಮಹೇಶ್ವರಗೆ ಹೊಲಿಸಿದ್ದಾರೆ ಬ್ರಹ್ಮ ಅಂದಾಗ ಹಾಗೆ ಬ್ರಹ್ಮನಿಗೆ ಗುರು ಅಂದಿಲ್ಲ ಅದಕ್ಕೆ ಪರಮೇಶನಿಗೂ ಮಿರಿದ ಶಕ್ತಿ ಗುರುವಿನ ಸ್ಥಾನದಲ್ಲಿದೆ ಅಲ್ಲದೆ ಶಿಕ್ಷಣ ಕ್ಷೇತ್ರಕ್ಕೆ ಸಾವಿತ್ರಿಬಾಯಿ ಪುಲೆ ಅವರು ಕೊಡುಗೆಯು ಅಪಾರವಾಗಿದ್ದು ಕಾರಣ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸುವದು ಅತ್ಯವಶ್ಯಕವಾಗಿದೆ ಎಂದು ಆಲಮೇಲ ವೀರಕ್ತಮಠದ ಪೂಜ್ಯಶ್ರೀ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಗುಂದಗಿ ಪಂಕ್ಷನ್ ಹಾಲ್‌ನಲ್ಲಿ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ವಿಜಯಪುರ ಹಾಗೂ ತಾಲೂಕು ಆಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯಾಲಯ ಹಾಗೂ ಶಿಕ್ಷಕರ ದಿನೋತ್ಸವ ಸಮಿತಿ ಹಮ್ಮಿಕೊಂಡ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನೋತ್ಸವದ ಸಾನ್ನಿಧ್ಯ ವಹಿಸಿ ವಿಶೇಷ ಉಪನ್ಯಾಸ ನೀಡಿ, ಸುಭದ್ರವಾದ ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಬಹುದೊಡ್ಡದ್ದಾಗಿದ್ದು ಶಿಕ್ಷಕರಿಗೆ ಯಾವುದೇ ಜಾತಿಯಿಲ್ಲ. ಟೀಚರ ಪುಸ್ತಕ ಓದಿಸುತ್ತಾರೆ ಆದರೆ ಮಾಸ್ತರ ಜಿವನದಲ್ಲಿ ಬದುಕಿನ ಕಲೆ ಕಲಿಸುತ್ತಾನೆ ಅದಕ್ಕೆ ಬರೀ ಟೀಚರ ಆಗದೇ ಮಾಸ್ತರಗಳಾಗಿ ಮಕ್ಕಳಿಗೆ ಒಳ್ಳೆಯ ಬೋಧನೆ ಮಾಡುವ ಮೂಲಕ ಸಂಸ್ಕಾರ ನೀಡಬೇಕು ಎಂದು ಸಲಹೆ ನೀಡಿದ ಅವರು ಶಿಕ್ಷಕರ ವೃತ್ತಿ ಪವಿತ್ರವಾದದ್ದು ಅದನ್ನು ನೌಕರಿಯಂದು ಬಾವಿಸದೇ ಸಮರ್ಥವಾಗಿ ನಿಬಾಯಿಸಿ ಮಕ್ಕಳನ್ನು ಸಮಾಜದ ನಿರ್ಮಾಣ ಕರ್ತರನ್ನಾಗಿ ಮಾಡಿ ಪ್ರತಿಯೊಬ್ಬ ಶಿಕ್ಷಕರು ತಮ್ಮ ಕರ್ತವ್ಯವನ್ನು ಭಕ್ತಿ, ಶ್ರದ್ದೆ ಹಾಗೂ ಶಿಸ್ತಿನಿಂದ ಕಾರ್ಯನಿರ್ವಹಿಸಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಅಶೋಕ ಮನಗೂಳಿ ಮಾತನಾಡಿ, ಪ್ರಾಥಮಿಕ ಶಿಕ್ಷಣ ಎನ್ನುವುದು ಜೀವನದ ಬುನಾದಿ ಇಂತಹ ವ್ಯಕ್ತಿತ್ವ ರೂಪಿಸುವದು ಶಿಕ್ಷಕರ ಪಾತ್ರ ಹಿರಿದ್ದಾದದ್ದು ಶಿಕ್ಷಕರು ನೀಡುವ ಶಿಕ್ಷಣ ಜೀವನುದ್ದಕ್ಕೂ ಮರೆಯದಂತಹ ಸಂಬಂಧ ಬೆಳೆಸುತ್ತಾರೆ. ನಮ್ಮ ಜೀವನದ ರೂಪರೇಶೆಗಳನ್ನು ರೂಪಿಸಿದ ಶಿಕ್ಷಕರಿಗೆ ಗೌರವಿಸುವ ಕಾರ್ಯ ಶ್ಲಾಘನೀಯ. ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕಾದರೆ ಅವರಿಗೆ ಮೂಲಭೂತ ಸೌಕರ್ಯಗಳನ್ನು ನೀಡಿದ್ದಾಗ ಮಾತ್ರ ಶಿಕ್ಷಣ ಮಟ್ಟ ಸುಧಾರಣೆ ಕಾಣಲು ಸಾಧ್ಯ ಕಾರಣ ನಮ್ಮ ಅವಧಿಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿ ಆಡಳಿತ ನಡೆಸುತ್ತೇನೆ ಎಂದು ತಿಳಿಸಿದ ಅವರು ನಿವೃತ್ತ ಶಿಕ್ಷಕರಿಗೆ ಪಿಂಚಣಿ ನೀಡುವ ಯೋಜನೆಗೆ ಸರಕಾರ ಮಟ್ಟದಲ್ಲಿ ೫ ಜನರ ಸಮಿತಿ ರಚಿಸಲಾಗಿದ್ದು ಆ ವರದಿ ಬಂದ ನಂತರ ಕ್ರಮ ಜರುಗಿಸುತ್ತಾರೆ. ಶಿಕ್ಷಣದಲ್ಲಿ ಹೊಸ ಹೊಸ ಆಯಾಮಗಳನ್ನು ರೂಪಿಸಲಾಗುತ್ತಿದ್ದು ಅದರ ಅನುಗುಣವಾಗಿ ಕಾರ್ಯೋನ್ಮುಖರಾಗೋಣ ಎಂದು ಹೇಳಿದರು.
ಶಿಕ್ಷಕರ ದಿನೋತ್ಸವ ಸಮಿತಿ ಅಧ್ಯಕ್ಷ ಹಾಗೂ ತಾಪಂ ಅಧಿಕಾರಿ ರಾಮು ಅಗ್ನಿ, ತಹಸೀಲ್ದಾರ ಪ್ರದೀಪಕುಮಾರ ಹಿರೇಮಠ, ಆಲಮೇಲ ತಾಪಂ ಅಧಿಕಾರಿ ಪರೀದಾ ಪಠಾಣ, ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಆನಂದ ಭೂಸನುರ, ದೇವರ ಹಿಪ್ಪರಗಿ ಅದ್ಯಕ್ಷ ಎ.ಎಚ್.ವಾಲೀಕಾರ, ಪ್ರೌಡಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಆರ್.ಎಚ್.ಬಿರಾದಾರ, ನೌಕರರ ಸಂಘದ ಅದ್ಯಕ್ಷ ಅಶೋಕ ತೆಲ್ಲೂರ, ದೇವರ ಹಿಪ್ಪರಗಿ ಪ್ರೌಡಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಎಸ್.ಎನ್ ಯಾಳವಾರ, ಶಿಕ್ಷಣ ಸಂಯೋಜಕ ಐ.ಎಫ್ ಬಾಲ್ಕಿ, ಅಕ್ಷರ ದಾಸೋಹ ಅಧಿಕಾರಿ ಎ.ಎಸ್.ಡೋಣೂರ, ದೈಹಿಕ ಶಿಕ್ಷಣ ರ‍್ವಿಕ್ಷಕ ನಾಮದೇವ ಚವ್ಹಾಣ, ಶಿಕ್ಷಕಿ ಶೋಭಾ ಚಿಗರಿ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.
ಈ ಸಂಧರ್ಭದಲ್ಲಿ ಶಾಸಕ ಅಶೋಕ ಮನಗೂಳಿ ಅವರು ದಿನೋತ್ಸವ ಸಮಿತಿಗೆ ರೂ ೫೦ ಸಾವಿರ ದೇಣಿಗೆ ನೀಡಿದರು. ನಿವೃತ್ತ ಶಿಕ್ಷಕರಿಗೆ ಗೌರವಿಸಲಾಯಿತು.
ಕ್ಷೇತ್ರ ಸಮನ್ವಯಾಧಿಕಾರಿ ಐ.ಎಸ್.ಟಕ್ಕೆ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ರಾಯಪ್ಪ ಇವಣಗಿ, ಬಸವರಾಜ ಸೋಂಪೂರ ನಿರೂಪಿಸಿ ವಂದಿಸಿದರು.