spot_img
spot_img

ಮಹಿಳೆಯರು ಪ್ರಗತಿ ಸಾಧಿಸಲು ಮುಖ್ಯವಾಹಿನಿಗೆ ಬರಬೇಕು – ಬಾಲಚಂದ್ರ ಜಾರಕಿಹೊಳಿ

Must Read

- Advertisement -

ಮೂಡಲಗಿ- ಮಹಿಳೆಯರು ಆರ್ಥಿಕವಾಗಿ ಮುಂದೆ ಬರಬೇಕಾದರೆ ಸರ್ಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಎಲ್ಲ ಕ್ಷೇತ್ರಗಳಲ್ಲೂ ಆರ್ಥಿಕ ಪ್ರಗತಿ ಸಾಧಿಸಲು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕಾದ ಅಗತ್ಯವಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.

ತಾಲ್ಲೂಕಿನ ಹುಣಶ್ಯಾಳ ಪಿವೈ ಗ್ರಾಮದಲ್ಲಿ ಜರುಗಿದ ಗ್ರಾಮ ಪಂಚಾಯತಿ ಸಹಯೋಗದಲ್ಲಿ ನೂತನವಾಗಿ ನಿರ್ಮಿಸಿದ ಎನ್‌ಆರ್‌ಎಂ ಒಕ್ಕೂಟದ ಕೊಠಡಿ ಮತ್ತು ಬಲಭೀಮ ದೇವಸ್ಥಾನದ ಆವರಣದಲ್ಲಿ ನಿರ್ಮಿಸಿದ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಬದ್ಧವಿದೆ ಎಂದು ಅವರು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು
ಮಹಿಳೆಯರ ಅಭ್ಯುದಯಕ್ಕಾಗಿ ಹಲವಾರು ಕಲ್ಯಾಣಮಯ
ಕಾರ್ಯಕ್ರಮಗಳನ್ನು ರೂಪಿಸಿದೆ. ಜತೆಗೆ ಮಹಿಳಾ
ಮೀಸಲಾತಿಯನ್ನು ಕಲ್ಪಿಸಿದ್ದು, ಶೇ. 33 ರಷ್ಟು ಮೀಸಲಾತಿಯ
ಮಸೂದೆಯು ಈಗಾಗಲೇ ಅಂಗೀಕಾರವಾಗಿದೆ. ಇದು ಮುಂದಿನ ವಿಧಾನಸಭೆ, ಲೋಕಸಭೆ ಚುನಾವಣೆಯೊಳಗೆ ಮಹಿಳೆಯರಿಗೆ ಜಾಕ್ ಪಾಟ್ ಹೊಡೆಯಲಿದೆ. ಮಹಿಳೆಯರೂ ಸಹ ಪುರುಷರಂತೆ ಮುಂದೆ ಬರಲು ಪ್ರಧಾನಿ ಮೋದಿ ಅವರು ಅತೀ ಮಹತ್ವದ್ದು ಎನ್ನಲಾದ ಈ ಮಹಿಳಾ ಮಸೂದೆಯನ್ನು ರೂಪಿಸಿದ್ದಾರೆ. ನಮ್ಮ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ 224 ರ ಪೈಕಿ 74 ಜನ ವಿಧಾನಸಭಾ ಸದಸ್ಯರು ಮತ್ತು ಲೋಕಸಭೆಯಲ್ಲಿ 543 ಸ್ಥಾನಗಳ ಪೈಕಿ 180 ಜನ ಮಹಿಳೆಯರು ಸಂಸತ್ ಸದಸ್ಯರಾಗುವ ಯೋಗ ಇಡೀ ಮಹಿಳಾ ಸಮುದಾಯಕ್ಕೆ ಒಲಿದು ಬರಲಿದೆ. ಮಹಿಳೆಯರ ಕಲ್ಯಾಣ
ಅದು ನಮ್ಮ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಅವರು ಹೇಳಿದರು.

- Advertisement -

ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದೆ
ಬರಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ. ಈ ದಿಸೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಮಹಿಳಾ ಸ್ವ- ಸಹಾಯ ಸಂಘಗಳಿಗೆ ಸಾಲದ ರೂಪದಲ್ಲಿ ಪ್ರೊತ್ಸಾಹ ಧನವನ್ನು ನೀಡುತ್ತಿದ್ದು, ಇದನ್ನು ಪಡೆದುಕೊಂಡು ತಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಲಹೆ ಮಾಡಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಎನ್‌ಆರ್‌ಎಲ್‌ಎಂ ಯೋಜನೆಯಡಿ ಹುಣಶ್ಯಾಳ ಪಿವೈ ಗ್ರಾಮದ ಜಡಿ ಸಿದ್ಧೇಶ್ವರ ಮತ್ತು ಮಹಾಲಕ್ಷ್ಮಿ ಸ್ವ- ಸಹಾಯ ಸಂಘ ಮತ್ತು ಹೊಸಟ್ಟಿ ಗ್ರಾಮದ ಸರಸ್ವತಿ, ಮಹಾಲಕ್ಷ್ಮಿ, ಗಂಗಾಮಾತಾ ಮತ್ತು ಭುವನೇಶ್ವರಿ ಸ್ವ-ಸಹಾಯ ಸಂಘಗಳಿಗೆ ತಲಾ 1.50 ಲಕ್ಷ ರೂ. ಸೇರಿದಂತೆ ಒಟ್ಟು 6 ಲಕ್ಷ ರೂ ಮೊತ್ತದ ಪ್ರೋತ್ಸಾಹ ಧನದ ಚೆಕ್ಕಗಳನ್ನು ವಿತರಿಸಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ನಿಧಿ ಮತ್ತು ಮುಜರಾಯಿ ಇಲಾಖೆಯ ಅನುದಾನದಡಿ 15 ಲಕ್ಷ ರೂಪಾಯಿ ವೆಚ್ಚದ ಸಮುದಾಯ ಭವನ ಮತ್ತು ಗ್ರಾಮ ಪಂಚಾಯತಿ ಸಹಯೋಗದಲ್ಲಿ 16 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಸಂಜೀವಿನಿ ಮಹಿಳಾ ಒಕ್ಕೂಟದ ನೂತನ ಕಟ್ಟಡವನ್ನು ಉದ್ಘಾಟಿಸಿದರು.

ಗ್ರಾಮ ಪಂಚಾಯತಿ ಅಧ್ಯಕ್ಷ ಜಗದೀಶ ಡೊಳ್ಳಿ ಅಧ್ಯಕ್ಷತೆ
ವಹಿಸಿದ್ದರು. ಪಿಕೆಪಿಎಸ್ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ, ತಾ.ಪಂ. ಇಓ ಫಕೀರಪ್ಪ ಚಿನ್ನನವರ, ಗ್ರಾ.ಪಂ. ಉಪಾಧ್ಯಕ್ಷೆ ಕಾಳವ್ವ ಗೌಡನ್ನವರ, ಪ್ರಮುಖರಾದ ಗೋಪಾಲ ಬಿಳ್ಳೂರ, ರವಿ ದೇಶಪಾಂಡೆ, ವೆಂಕನಗೌಡ ಪಾಟೀಲ, ಗೋವಿಂದಪ್ಪ ಗಿರಡ್ಡಿ, ಮುತ್ತೆಪ್ಪ ನಿಡಗುಂದಿ, ಪ್ರಕಾಶ ಪಾಟೀಲ, ಹನಮಂತ ಬಿಳ್ಳೂರ, ಪರಪ್ಪ ಕುಂಬಾರ, ಜಂಬು ಚಿಕ್ಕೋಡಿ, ಪಾಯಪ್ಪ ಉಪ್ಪಿನ, ತಿಮ್ಮಣ್ಣ ದೊಡ್ಡುಗೋಳ, ಭದ್ರಯ್ಯ ಜಕಾತಿಮಠ, ಸಿದ್ರಾಮ ಉಪಾಸಿ,ಮಾರುತಿ ಮೇತ್ರಿ, ಪಿಡಿಓ ಉದಯಬೆಳ್ಳುಂಡಗಿ, ಸಂಜೀವಿನಿ ಒಕ್ಕೂಟದ
ವಲಯ ಮೇಲ್ವಿಚಾರಕ ಅಶೋಕ ಪೂಜೇರಿ, ಮಹಿಳಾ ಸ್ವ- ಸಹಾಯ ಸಂಘಗಳ ಪ್ರಮುಖರಾದ ರೇಣುಕಾ ಅಂಬಿ, ಸುವರ್ಣಾ ಕುಂಬಾರ,ಪಾರ್ವತಿ ಕುರಿ, ರುಕ್ಮವ್ವ ಹೊಸಮನಿ, ರೂಪಾ ಪಾಟೀಲ, ಪಾರ್ವತಿ ವಾಗ್ಮುಡೆ, ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

- Advertisement -
- Advertisement -

Latest News

ಹಿರಿಯರು ಕುಟುಂಬದ ಬಲವಾದ ಅಡಿಪಾಯ — ಸಿದ್ದಲಿಂಗ ಕಿಣಗಿ

    ಸಿಂದಗಿ - ಅಜ್ಜಿಯರು ಕುಟುಂಬದ ದೊಡ್ಡ ಸಂಪತ್ತು, ಪ್ರೀತಿಯ ಪರಂಪರೆಯ ಸ್ಥಾಪಕರು, ಶ್ರೇಷ್ಠ ಕಥೆಗಾರರು ಮತ್ತು ಸಂಪ್ರದಾಯದ ಪಾಲಕರು. ಅಜ್ಜ-ಅಜ್ಜಿಯರು ಕುಟುಂಬದ ಬಲವಾದ...
- Advertisement -

More Articles Like This

- Advertisement -
close
error: Content is protected !!
Join WhatsApp Group