ಪಕ್ಷ ಸಂಘಟನೆಯಲ್ಲಿ ಮತಗಟ್ಟೆ ಕಾರ್ಯಕರ್ತರ ಪಾತ್ರ ತುಂಬಾ ಮಹತ್ವದ್ದಾಗಿದೆ- ದಯಾನಂದ ಪಾಟೀಲ

Must Read

ಮೂಡಲಗಿ- ಪಕ್ಷ ಸಂಘಟನೆಯಲ್ಲಿ ಮತಗಟ್ಟೆ ಕಾರ್ಯಕರ್ತರ ಪಾತ್ರ ತುಂಬಾ ಮಹತ್ವದ್ದಾಗಿದೆ. ನಂಬಿಕೆಗೆ ಅರ್ಹರಾದವರನ್ನೇ ಮತಗಟ್ಟೆ ಕಾರ್ಯಕರ್ತರನ್ನಾಗಿ ಹಾಗೂ ಬೂತ್ ಕಮಿಟಿ ಸದಸ್ಯರು ಮತ್ತು ಅಧ್ಯಕ್ಷರನ್ನಾಗಿ ನೇಮಿಸಬೇಕು. ವ್ಯಕ್ತಿ ಪೂಜೆ ಬದಲಿಗೆ, ಕಾಂಗ್ರೆಸ್ ಪಕ್ಷದ ಪರವಾಗಿ ಬದ್ಧತೆ, ಶ್ರದ್ಧೆ ಮತ್ತು ಗೌರವ ಬೆಳೆಸಿಕೊಳ್ಳಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಅರಭಾವಿ ಕ್ಷೇತ್ರದ ಉಸ್ತುವಾರಿ ದಯಾನಂದ ಪಾಟೀಲ ಹೇಳಿದರು.

ಅವರು ಕೌಜಲಗಿಯ ಅಂಬೇಡ್ಕರ್ ಭವನದಲ್ಲಿ ನಡೆದ ಅರಬಾವಿ ಮತ್ತು ಕೌಜಲಗಿ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಪದಾಧಿಕಾರಿಗಳ ಸಭೆಯನ್ನು ಸಸಿಗೆ ನೀರು ಉಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಅರಬಾವಿ ಕ್ಷೇತ್ರದ ಮುಖಂಡ ಮತ್ತು ಕೆಪಿಸಿಸಿ ಸದಸ್ಯ ಅರವಿಂದ ದಳವಾಯಿ ಮಾತನಾಡಿ, ಅರಬಾವಿ ಕ್ಷೇತ್ರ ಒಂದು ಕಾಲಕ್ಕೆ ಕಾಂಗ್ರೆಸ್ ಪಕ್ಷದ ಭದ್ರ ಕೋಟೆಯಾಗಿತ್ತು, ಮೊದಲ ಚುನಾವಣೆ ೧೯೫೨ ರಿಂದ ೨೦೦೬ ರವರೆಗೆ ಅರಬಾವಿಯಿಂದ ಕಾಂಗ್ರೆಸ್ ನವರೇ ಶಾಸಕರಾಗಿದ್ದರು, ಆದರೆ, ಇಂದು ಅರಬಾವಿ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯವರು ಕೋಟಿಗಟ್ಟಲೆ ಹಣ ಹರಿಸುತ್ತಿದ್ದು, ಚುನಾವಣೆ ಮಾಡುವದೇ ಕಷ್ಟಸಾಧ್ಯವಾಗಿದೆ. ಅಲ್ಲದೇ ಕೆಲವರು ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸಿಗರು ಎಂದು ಹೇಳಿಕೊಳ್ಳುವವರು ಟಿಕೇಟ್ ದೊರೆಯದೇ ಹೋದಾಗ ಕಾಂಗ್ರೆಸ್ ಪಕ್ಷಕ್ಕೆ ಚೂರಿ ಹಾಕುತ್ತಾರೆ. ಇಂತಹವರಿಂದಲೇ ಕಳೆದ ಎರಡು ಚುನಾವಣೆಗಳಲ್ಲಿ ಪಕ್ಷಕ್ಕೆ ಹಾನಿಯಾಗಿದ್ದು ಕಾರ್ಯಕರ್ತರು ಇಂತಹ ಮೀರ್ ಸಾದಿಕರಿಂದ ಎಚ್ಚರದಿಂದಿರಬೇಕು. ಅರಬಾವಿಯಲ್ಲಿ ನಾವು ಹಣದಿಂದ ಚುನಾವಣೆ ಗೆಲ್ಲುವದು ಸಾಧ್ಯವಿಲ್ಲ, ಕಾಂಗ್ರೆಸ್ ಕಾರ್ಯಕರ್ತರು ಸೈದ್ಧಾಂತಿಕ ಬದ್ಧತೆ ಬೆಳೆಸಿಕೊಂಡರೆ ಮಾತ್ರ ಚುಣಾವಣೆ ಗೆಲ್ಲಲು ಸಾಧ್ಯವೆಂದು ಹೇಳಿದರು.

ಹಿರಿಯ ಕಾಂಗ್ರೆಸ್ ಮುಖಂಡ ವಿ.ಪಿ ನಾಯಕ ಮಾತನಾಡಿ, ಕಾಂಗ್ರೆಸ್ ಪಕ್ಷದ ವರಿಷ್ಠರೇ ಅರಬಾವಿ ಮತಕ್ಷೇತ್ರವನ್ನು ನಿರ್ಲಕ್ಷಿಸಿದ್ದು ಕಾರ್ಯಕರ್ತರಿಗೆ ಯಾವುದೇ ಪ್ರತಿಫಲ ಸಿಗುತ್ತಿಲ್ಲವೆಂದು ವಿಷಾದಿಸಿದರು. ೨೦೨೪ ರಲ್ಲೂ ಅರಬಾವಿಯಲ್ಲಿ ಕೆಲ ಸಮಿತಿಗಳಿಗೆ ಬಿಜೆಪಿಯವರೇ ನಾಮ ನಿರ್ದೇಶನವಾಗಿರುವದು ವಿಶಾದನೀಯವೆಂದು ಹೇಳಿದ ಅವರು ಈ ರೀತಿ ಪಕ್ಷ ಬೆಳೆಸುವುದು ಅಸಾಧ್ಯ ಎಂದು ಪ್ರಧಾನ ಕಾರ್ಯದರ್ಶಿಗಳ ಗಮನಕ್ಕೆ ತಂದರು.

ಸಭೆಯಲ್ಲಿ ಪಕ್ಷದ ಹಿರಿಯರಾದ ಸುಭಾಸ ಸೋನವಾಲಕರ, ಮೂಡಲಗಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅನಿಲ ದಳವಾಯಿ, ಕೆ. ಟಿ ಗಾಣಿಗೇರ, ಮಾಳಪ್ಪ ಬಿದರಿ, ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಾಜೇಶ್, ಸೇವಾದಳದ ಸಂಚಾಲಕ ಮೀರಾಸಾಬ ಅನ್ಸಾರಿ, ರೇವಣ್ಣ ಮುನ್ಯಾಳ, ಇಮಾಮಸಾಬ ಹುನ್ನೂರ, ರಮೇಶ ಬೆಳಕೂಡ, ವಿರೂಪಾಕ್ಷ ಮುಗಳಖೋಡ, ಸಂಗಮೇಶ ಕೌಜಲಗಿ, ರವಿ ಮೂಡಲಗಿ, ಅಬ್ಬಾಸ ವನ್ನೂರ, ಬಾಳಪ್ಪ ಪಾಲಕಿ, ದುರ್ಗಪ್ಪ ಅಕ್ಕನ್ನವರ, ಕರೆಪ್ಪ ಗೌಡಿ, ಅರಬಾವಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸುರೇಶ ಮಗದುಮ್, ಮತ್ತು ಕೌಜಲಗಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಪ್ರಕಾಶ ಅರಳಿ, ಸೀಮಾ ಉಪ್ಪಾರ, ಸುಜಾತಾ ಹಿರೇಮಠ, ಅನಿತಾ ನಾಯಿಂಗ್ಲಜ ಮುಂತಾದವರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group