- Advertisement -
ಗಡಿನಾಡು ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಭವನ ಮತ್ತು ಗ್ರಂಥಾಲಯ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ,ವಿಸ್ಡಮ್ ಇನ್ಸ್ಟಿಟ್ಯೂಷನ್ ನೆಟ್ ವರ್ಕ್ ಕೇರಳ ಕರ್ನಾಟಕ ಸ್ಪಂದನ ಸಿರಿ ಕೃಷಿ ವತಿಯಿಂದ ಕನ್ನಡ ಶಿಕ್ಷಣ ಮತ್ತು ಸಮ್ಮೇಳನ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಬರಹಗಾರ ಸಂಘದ ಜಿಲ್ಲಾಧ್ಯಕ್ಷರು, ಚುಟುಕು ಸಾಹಿತ್ಯ ಪರಿಷತ್ತು ಅರಕಲಗೂಡು ತಾಲ್ಲೂಕು ಘಟಕದ ಅಧ್ಯಕ್ಷರು, ಸ್ಪಂದನ ಸಿರಿ ವೇದಿಕೆ ಹಾಸನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಂದರೇಶ್ ಡಿ ಉಡುವಾರೆ ಅವರಿಗೆ ‘ ಕನ್ನಡ ಪಯಸ್ವಿನಿ ಪ್ರಶಸ್ತಿ”ಪ್ರದಾನ ಮಾಡಿ ಗೌರವಿಸಲಾಯಿತು.
ಸುಂದರೇಶ್ ಡಿ ಉಡುವಾರೆ ಸಾಹಿತಿಯಾಗಿ ಇತ್ತೀಚಿನ ದಿನಗಳಲ್ಲಿ ಇವರು ರಾಜ್ಯಮಟ್ಟದ ಕೆಲವು ಕಾರ್ಯಕ್ರಮ ನಡೆಸಿಕೊಟ್ಟಿದ್ದು ಇವರ ಸಾಹಿತ್ಯ ಸೇವೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಡೆಯಲಿರುವ ಎಂದು ಆಶಿಸಿ ಸಾಹಿತಿಗಳಾದ ಗೊರೂರು ಅನಂತರಾಜು ಮತ್ತು ಕನಾ೯ಟಕ ರಾಜ್ಯ ಬರಹಗಾರರ ಸಂಘದ ರಾಜ್ಯಾಧ್ಯಕ್ಷರು ಮಧು ನಾಯ್ಕ ಲಂಬಾಣಿ ಶುಭಾಶಯ ಕೋರಿದ್ದಾರೆ.