ಖೋರಾ (QUORA) ಎನ್ನುವ ಆ್ಯಪ್ ಒಂದರಲ್ಲಿ ಕೇಳಲಾದ ಪ್ರಶ್ನೆ ಹಾಗೂ ಅದಕ್ಕೆ ಬಂದ ಉತ್ತರವನ್ನು ಮೊದಲು ನೋಡೋಣ ;
ರಾಹುಲ್ ಗಾಂಧಿ ಒಬ್ಬ ಮೂರ್ಖ ಆದರೆ ತೀರಾ ಸಣ್ಣ (ಅವರು ಇಲ್ಲಿ mean ಶಬ್ದ ಹಾಕಿದ್ದಾರೆ ) ಮೂರ್ಖ. ಹಾಗೆ ನಾನು ಹೇಳಿದ್ದು ಸರೀನಾ ? ಎಂಬ ಪ್ರಶ್ನೆಗೆ ಬಂದ ಉತ್ತರ ನೋಡಿ….
ನೋ….ನೀವು ತಪ್ಪು.ರಾಹುಲ್ ಗಾಂಧಿ ಒಬ್ಬ ಮೂರ್ಖನಷ್ಟೇ ಅಲ್ಲ ಈಗ ಆತ ಅಪಾಯಕಾರಿ ಕೂಡ ! ಕೇವಲ ಬಿಜೆಪಿಗಷ್ಟೇ ಅಲ್ಲ ಇಡೀ ದೇಶಕ್ಕೇ ಅಪಾಯಕಾರಿ !
ಇದನ್ನು ನಾನು ವಿವರಿಸುತ್ತೇನೆ. ೨೦೧೩ ರಿಂದ ೨೦ ವರೆಗೂ ಈ ವ್ಯಕ್ತಿಯನ್ನು ಪಪ್ಪು ಅಂತ ಚಿತ್ರಿಸುವುದು ತುಂಬ ಸುಲಭವಾಗಿತ್ತು. ಆದರೆ ಇಂದು ಆತನ ವಿಚಾರಗಳು ಅಂದರೆ, ಸೌಂದರ್ಯ ಸ್ಪರ್ಧೆಯಲ್ಲಿ ಮೀಸಲಾತಿ, ಏಕ ಪಿಂಚಣಿ ಯೋಜನೆ, ಜಾತಿ ಗಣತಿ ಹಾಗೂ ವಿವಿಧ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಅವರ ಮೈತ್ರಿ ಸರ್ಕಾರಗಳು ಘೋಷಿಸುವ ಪುಕ್ಕಟ್ಟೆ ಭಾಗ್ಯಗಳು….ಇವೆಲ್ಲ ಜಾರಿಯಲ್ಲಿ ಬಂದರೆ ಕೇವಲ ದೇಶದ ಆರ್ಥಕತೆಗಷ್ಟೇ ಅಲ್ಲದೆ ಇಡೀ ಸಮಾಜಕ್ಕೇ ಮಾರಕವಾಗಿ ಪರಿಣಮಿಸಲಿವೆ ! ಅರ್ಥವ್ಯವಸ್ಥೆ ಕೇವಲ ಹಣದ ಆವಕ ಜಾವಕಗಳನ್ನಷ್ಟೇ ನೋಡುತ್ತದೆ. ರಾಜಕೀಯ ಅದಕ್ಕೆ ಬೇಕಾಗಿಲ್ಲ. ರಾಹುಲ್ ಗಾಂಧಿಯ ಈ ಯೋಜನೆಗಳು ಮೋದಿಯವರನ್ನು ಸೋಲಿಸಲು ಯಶಸ್ವಿಯಾಗಬಹುದು ಆದರೆ ಉಚಿತ ಗಳನ್ನು ಕೊಟ್ಟು ದೇಶ ನಡೆಸಲು ಕಂದಾಯ ಎತ್ತಬೇಕಾಗುತ್ತದೆ. ಅದಕ್ಕೆ ಮೂರು ದಾರಿಗಳಿವೆ….
೧) ತೆರಿಗೆಯನ್ನು ಹೆಚ್ಚಿಸುವುದು
೨) ಶಿಕ್ಷಣ, ಪೊಲೀಸ್, ಸಂಬಳ, ಪಿಂಚಣಿಯಂಥವುಗಳ ಖರ್ಚುಗಳನ್ನು ತಗ್ಗಿಸಬೇಕಾಗುತ್ತದೆ.
೩) ವಿದೇಶಿ ಕಂಪನಿಗಳಿಗೆ ಸವಲತ್ತು ಕೊಟ್ಟು ಕರೆಯಬೇಕಾಗುವುದು.
ಹೀಗೆ ಈ ಉತ್ತರದಲ್ಲಿ ಅವರು ರಾಹುಲ್ ಗಾಂಧಿಗೆ ದೂರದೃಷ್ಟಿ ಇಲ್ಲದ್ದನ್ನು ವಿಶದವಾಗಿ ವಿವರಿಸುತ್ತಾರೆ. ಮೋದಿಯವರ ಭಾಷಣಗಳಲ್ಲಿ ಅಥವಾ ನಡೆ ನುಡಿಯಲ್ಲೂ ಕೂಡ ಸನ್ ೨೦೪೭ ರ ಭಾರತ ಇದೆ. ಒಬ್ಬ ಪ್ರತಿಪಕ್ಷದ ನಾಯಕನಾಗಿರುವ ರಾಹುಲ್ ಗಾಂಧಿಯ ದೂರದೃಷ್ಟಿ ಏನು ಎಂಬುದು ಎಂದಾದರೂ ಅವರ ಭಾಷಣಗಳಲ್ಲಿ ವ್ಯಕ್ತವಾಗಿದೆಯೇ ?
ಮಾತೆತ್ತಿದರೆ ಹಿಂದುಳಿದ ಜನಾಂಗ, ಅಲ್ಪಸಂಖ್ಯಾತರ ಅಭಿವೃದ್ಧಿ ಎನ್ನುವ ಈ ಕಾಂಗ್ರೆಸ್ ನಾಯಕನಿಗೆ ತನ್ನ ಅಂಕಲ್ ಸ್ಯಾಮ್ ಬರೆದುಕೊಟ್ಟದ್ದನ್ನೇ ಉರು ಹಾಕುವುದಷ್ಟೇ ಗೊತ್ತೇ ಹೊರತು ಸದ್ಯದ ಪರಿಸ್ಥಿತಿಯಲ್ಲಿ ದೇಶ ಯಾವ ದಿಕ್ಕಿನಲ್ಲಿ ಹೊರಟಿದೆ, ಅದನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಯಾವ ದಿಕ್ಕಿಗೆ ತಿರುಗಿಸಬೇಕೆಂಬ ಪರಿಜ್ಞಾನವಾದರೂ ಇದೆಯೇ ? ಆತ ಹೋಗಲಿ ತಮ್ಮದು ಜಾತ್ಯತೀತ ಪಕ್ಷ ಎನ್ನುವ ಕಾಂಗ್ರೆಸ್ ನಾಯಕರು, ಅದರಲ್ಲೂ ಕರ್ನಾಟಕದ ಮುತ್ತಿನಂಥ ಮಾತುಗಳಾದ ‘ ಸರ್ವ ಜನಾಂಗದ ಶಾಂತಿಯ ತೋಟ’ ದ ಹರಿಕಾರರಾದರೂ (ಸಿದ್ಧರಾಮಯ್ಯ, ಡಿಕೆಶಿ, ಖಂಡ್ರೆ, ಖರ್ಗೆ !) ತಮ್ಮ ನಾಯಕನಿಗೆ ಜಾತಿಯ ವಿಷ ಬೀಜ ಬಿತ್ತದಂತೆ ಸಲಹೆ ಕೊಡಬಾರದೆ ?
ಈ ಸಲದ ಲೋಕಸಭಾ ಚುನಾವಣೆಗಿಂತ ಮೊದಲು ಬಟಾಟೆಯಿಂದ ಚಿನ್ನ, ಮೇಕ್ ಇನ್ ಭೂಪಾಲ್, ಏಕ್ ಝಟಕೇ ಮೆ ಗರೀಬಿ ಹಠಾನಾ, ಖಟಾ ಖಟ್ ಖಾತೆ ಮೆ ಪೈಸೆ ಆನಾ….ದಂಥ ಅತ್ಯಂತ ಮನೋರಂಜಕ ಡೈಲಾಗ್ ಗಳಿಂದ ಪ್ರಸಿದ್ಧರಾಗಿದ್ದ ರಾಹುಲ್ ಗಾಂಧಿ ಲೋಕಸಭಾ ಚುನಾವಣೆಯಲ್ಲಿ ಸ್ವಲ್ಪ ಹೆಚ್ಚಿಗೆ ಸ್ಥಾನ ಗಳಿಸಿದ್ದಷ್ಟೇ ಸಂಸತ್ತಿನಲ್ಲಿ ವಿಪಕ್ಷ ನಾಯಕನ ಸ್ಥಾನ ಗಿಟ್ಟಿಸಿಕೊಂಡ ನಂತರ ಪ್ರಬುದ್ಧರಾಗಿದ್ದಾರೆ ಎಂದೇ ದೇಶ ತಿಳಿದುಕೊಂಡಿತ್ತು. ಆದರೆ ಯಾವಾಗ ಈ ಮಹಾನುಭಾವನ ಬಾಯಿಂದ ಸಂಸತ್ ಭವನದ ಹಲ್ವಾ ಮಾಡುವವರಲ್ಲಿ ಹಿಂದುಳಿದವರಿಲ್ಲ, ಸೌಂದರ್ಯ ಸ್ಪರ್ಧೆ ವಿಜೇತರಲ್ಲಿ ಹಿಂದುಳಿದವರಿಲ್ಲ ಎಂಬಂಥ ಅಣಿಮುತ್ತುಗಳು ಉದುರತೊಡಗಿದವೋ ಆಗಲೇ ದೇಶಕ್ಕೆ ಅಷ್ಟೇ ಅಲ್ಲ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರಲ್ಲೂ ಭ್ರಮನಿರಸನವಾಗಿದ್ದಂತೂ ಸತ್ಯ.
ಯಾಕೆಂದರೆ, ತನ್ನನ್ನು ತಾವಾಗಲೂ ಜಾತ್ಯತೀತ, ಧರ್ಮಾತೀತ ಪಕ್ಷ ಹೇಳಿಕೊಂಡು ಬಂದ ಕಾಂಗ್ರೆಸ್ ಪಕ್ಷದ ನಾಯಕನ ಬಾಯಿಂದ ಕೇವಲ ಅಂದರೆ ಕೇವಲ ಜಾತೀಯತೆಯ ಮಾತುಗಳೆ ! ಎಂಥ ವಿಪರ್ಯಾಸ !
ಈ ಹಿಂದೆ ದೇಶದಲ್ಲಿ ಮೋದಿಯವರ ಪ್ರಭಾವ ಜಾಸ್ತಿ ಇದ್ದಾಗ ವಿದೇಶಕ್ಕೆ ಹೋಗಿ ಮೋದಿಯವರನ್ನು ಸೋಲಿಸಲು ಸಹಾಯ ಕೇಳಿದ್ದಾಯಿತು. ಈಗಲೂ ಮತ್ತೆ ಅಮೇರಿಕದ ಎದುರು ಭಾರತದ ಬಗ್ಗೆ ಋಣಾತ್ಮಕ ಮಾತನಾಡುವ ರಾಹುಲ್ ರ ದೇಶಪ್ರೇಮದ ಬಗ್ಗೆ ಸಂದೇಹವಿದೆ. ಇನ್ನೂ ಹೆಚ್ಚಿನ ವಿಪರ್ಯಾಸವೆಂದರೆ, ರಾಹುಲ್ ಗಾಂಧಿಗೆ ಕಾಂಗ್ರೆಸ್ ಹಿರಿಯ ನಾಯಕರೂ ಬುದ್ಧಿ ಹೇಳದೇ ಇರುವಷ್ಟು ಬುದ್ಧಿ ದಾರಿದ್ರ್ಯಕ್ಕೆ ಬಲಿಯಾದದ್ದು. ಯಾಕೆಂದರೆ, ಕರ್ನಾಟಕದ ನಮ್ಮ ಸಿದ್ರಾಮಯ್ಯ, ಡಿಕೆಶಿ, ಖಂಡ್ರೆ, ಖರ್ಗೆಗಳು ಕುವೆಂಪು ಅವರ ನುಡಿಮುತ್ತುಗಳನ್ನು “ಸರ್ವಜನಾಂಗದ ಶಾಂತಿಯ ತೋಟ” ಎಂದು ಉಸುರುತ್ತ ( ಕೆಲವೊಮ್ಮೆ ಅದು ‘ತೋಡ’ ಎಂದು ಕೇಳಿಸುತ್ತದೆ !) ಭಾಷಣ ಮಾಡುವವರೂ ಕೂಡ ತಮ್ಮ ನಾಯಕನಿಗೆ ಜಾತಿ ವಿಷಯ ಎತ್ತದಿರಲು ಹೇಳಲಾಗದಷ್ಟು ಅಸಹಾಯಕತೆ !
ಹೌದೂ, ಇತ್ತೀಚೆಗೆ ಕಾಂಗ್ರೆಸ್ ನಲ್ಲಿ ದಿಗ್ವಿಜಯ್ ಸಿಂಗ್, ಕಮಲ ನಾಥ, ರಣದೀಪ ಸಿಂಗ್ ಸುರ್ಜೆವಾಲಾ, ಮಲ್ಲಿಕಾರ್ಜುನ ಖರ್ಗೆ, ಸಿ.ವೇಣುಗೋಪಾಲ್ ರಂಥ ನಾಯಕರು ಯಾಕೋ ಮೌನ ವ್ರತ ತಾಳಿದಂತಿದೆ. ಆದರೆ ಅನುಭವಿ ಹಾಗೂ ಹಿರಿಯ ನಾಯಕರ ಮೌನ ಪಕ್ಷದ ಇಮೇಜನ್ನು ಹಾಳು ಮಾಡುತ್ತದೆ. ಅದರಲ್ಲೂ ರಾಹುಲ್ ಗಾಂಧಿಯವರ ಅನೇಕ ಭಾಷಣಗಳು ಹಾಗೂ ಅವುಗಳಲ್ಲಿನ ಅಪಸವ್ಯಗಳನ್ನು ಕಂಡೂ ಕೇಳಿಯೂ ಮೌನವಾಗಿದ್ದಾರೆಂದರೆ ಅವರಿಗೆ ದೇಶದ ಚಿಂತೆ ಇಲ್ಲವೆಂಬ ಸೂಚನೆಯೇ ? ದೇಶದ ಚಿಂತೆ ಹೋಗಲಿ, ಕನಿಷ್ಠ ಪಕ್ಷ ತಮ್ಮ ಪಕ್ಷದ ಚಿಂತೆಯಾದರೂ ಈ ನಾಯಕರಿಗೆ ಇರಬಹುದೇ ಎಂಬ ಗುಮಾನಿಯೇಳುತ್ತಿದೆ.
ಉಮೇಶ ಬೆಳಕೂಡ, ಮೂಡಲಗಿ