spot_img
spot_img

ದೇವೇಗೌಡ, ನಿರ್ಮಲಾನಂದ ಸ್ವಾಮೀಜಿ, ದೇವನೂರು ಮಹದೇವ ಹೆಸರು ಪರಿಗಣನೆಗೆ ಒತ್ತಾಯ

Must Read

- Advertisement -

ಮಂಡ್ಯ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ 

ಮಂಡ್ಯದಲ್ಲಿ ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿರುವ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಾಜಿ ಪ್ರಧಾನ ಮಂತ್ರಿ ಹಾಗೂ ಪ್ರಪ್ರಥಮ ಕನ್ನಡಿಗ ಪ್ರಧಾನಿಗಳಾಗಿ ಕನ್ನಡ ನಾಡು ನುಡಿಗೆ ಗೌರವ ತಂದುಕೊಟ್ಟ ಹೆಚ್. ಡಿ.ದೇವೇಗೌಡ ಅವರು, ಸಾವಿರಾರು ಮಕ್ಕಳಿಗೆ ಅನ್ನ ಹಾಗು ಅಕ್ಷರ ದಾನ ಮಾಡುತ್ತಿರುವ ಶ್ರೀ ಆದಿಚುಂಚನಗಿರಿಯ ಡಾ.ನಿರ್ಮಲಾ ನಂದ ಸ್ವಾಮೀಜಿ ಅಥವಾ ಬಂಡಾಯ ಸಾಹಿತಿ, ದಲಿತ ಸಾಹಿತ್ಯದ ಆಶಾಕಿರಣ ದೇವನೂರು ಮಹಾದೇವ ಇವ ರ ಪೈಕಿ ಒಬ್ಬರನ್ನು ಆಯ್ಕೆ ಮಾಡಬೇಕೆಂದು ದಲಿತ ಮುಖಂಡ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಕೃಷ್ಣಯ್ಯ ಚಲ್ಲಹಲ್ಲಿ ಒತ್ತಾಯಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಮಹೇಶ್ ಜೋಷಿ ಅವರಿಗೆ ಈ ಬಗ್ಗೆ ಪತ್ರ ಬರೆದಿರುವ ಅವರು ಕನ್ನಡ ನಾಡು ನುಡಿ , ನೆಲ ಜಲ ರಕ್ಷಣೆಯ ಹೋರಾಟದಲ್ಲಿ ಶಾಸಕರಾಗಿ, ಸಚಿವರಾಗಿ, ಸಂಸದ್ ಸದಸ್ಯರಾಗಿ, ಪ್ರಧಾನ ಮಂತ್ರಿಗಳಾಗಿ ಹೆಚ್.ಡಿ. ದೇವೇಗೌಡರ ಪಾತ್ರ ಅತ್ಯಮೂಲ್ಯ,ಅಗಣಿತ, ಐತಿಹಾಸಿಕ. ಅವರ ಸೇವೆಗೆ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ಕೋರಿದ್ದಾರೆ.

- Advertisement -

ಅದೇ ರೀತಿ ಆದಿಚುಂಚನಗಿರಿ ಶ್ರೀ ಗಳಾದ ಡಾ. ನಿರ್ಮಲಾನಂದ ಸ್ವಾಮೀಜಿಯವರು ಬಡ ಹಾಗೂ ನಿರ್ಗತಿಕ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಅನ್ನ ದಾಸೋಹಗಳನ್ನು ನಿರಂತರವಾಗಿ ನಡೆಸುವ ಮೂಲಕ ಕನ್ನಡ ನಾಡು ನುಡಿ ಸೇವೆ ನಡೆಸಿದ್ದಾರೆ.ಜೊತೆಗೆ ಎಲ್ಲಾ ಕಾರ್ಯಕ್ರಮಗಳಲ್ಲೂ ಕನ್ನಡ ಭಾಷೆಯನ್ನೇ ಬಳಸುವ ಮೂಲಕ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದ್ದಾರೆ .ಡಾ . ನಿರ್ಮಲಾನಂದ ಸ್ವಾಮೀಜಿಯವರನ್ನು ಮಂಡ್ಯ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡುವ ಮೂಲಕ ಅವರ ಸೇವೆಯನ್ನು ಗೌರವಿಸ ಬೇಕೆಂದು ಕೃಷ್ಣಯ್ಯ ಚಲ್ಲಹಳ್ಳಿ ಒತ್ತಾಯಿಸಿದ್ದಾರೆ.

ಸಮ್ಮೇಳನಕ್ಕೆ ಸಾಹಿತಿಗಳನ್ನೇ ಅಧ್ಯಕ್ಷ ರಾಗಿ ಮಾಡಬೇಕೆಂದು ನಿರ್ಧರಿಸಿದರೆ ಪದ್ಮಶ್ರೀ ಗೌರವಕ್ಕೆ ಪಾತ್ರ ರಾಗಿರುವ ದಲಿತ ಸಾಹಿತಿ, ಚಿಂತಕ ದೇವನೂರು ಮಹದೇವ ಅವರನ್ನು ಅಧ್ಯಕ್ಷರಾಗಿ ಸರ್ವಾನುಮತ ರಿಂದ ಆಯ್ಕೆ ಮಾದ ಬೇಕೆಂದು ಸಮಾಜಸೇವಕ ಕೃಷ್ಣಯ್ಯ ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವನ : ಕಳಂಕ

ಕಳಂಕ ಭಾರತ ಮಾತೆಯ ಕನಸಿನ ಕೂಸಿಗೆ ಹಚ್ಚದಿರಿ ಕೊಲೆ,ಸುಲಿಗೆ,ಅತ್ಯಾಚಾರವೆಂಬ ಕಳಂಕ ಭಾರತಮಾತೆಯು ಪವಿತ್ರಳೆನ್ನುವಿರಿ ಆ ಪಾವಿತ್ರ್ಯತೆ ನಮ್ಮಲ್ಲಿ ಎಳ್ಕಾಳಷ್ಟು ಕಾಣಲಿಲ್ಲ. ಮೂರೊತ್ತಿನ ಊಟಕ್ಕೆ ದಾರಿಮಾಡಿ ಕೊಟ್ಟರೆ, ಭಾರತಮಾತೆ ಸ್ವತ್ತು ನಮ್ಮದೆಂದು ಸೊಕ್ಕಿನಿಂದ ಬೀಗುವಿರಿ..... ಲವ್ ಜಿಹಾದ್ ಆಮಿಷಗಳಿಗೆ ಹಿಂದೂ...
- Advertisement -

More Articles Like This

- Advertisement -
close
error: Content is protected !!
Join WhatsApp Group