ಮತದಾನ ಪಟ್ಟಿಯ ಸರಿಯಾದ ಪರಿಷ್ಕರಣೆಗೆ ತಹಶೀಲ್ದಾರ ಹಿರೇಮಠ ಸೂಚನೆ

Must Read

ವರದಿ; ಪಂಡಿತ ಯಂಪೂರೆ

ಸಿಂದಗಿ; ಪಟ್ಟಣದಲ್ಲಿ ೨೩ ವಾರ್ಡುಗಳಿಗೆ ಸಂಬಂಧ ಪಟ್ಟಂತೆ ಮತದಾರರು ಯಾವುದೋ ವಾರ್ಡಿನಲ್ಲಿ ವಾಸವಾಗಿದ್ದು ಯಾವುದೋ ವಾರ್ಡಿನಲ್ಲಿ ಮತದಾನ ಮಾಡುತ್ತಾರೆ ಅವರ ಬಗ್ಗೆ ಸರಿಯಾದ ಮಾಹಿತಿ ಪಡೆದು ಯಾವ ವಿಳಾಸದಲ್ಲಿದ್ದನ್ನು ಖಚಿತ ಪಡಿಸಿಕೊಂಡು ಪರಿಷ್ಕರಣೆ ಮಾಡಬೇಕು ಎಂದು ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಅವರು ಮತಗಟ್ಟೆ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ೯ನೇ ವಾರ್ಡಿನಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಪರಿಶೀಲಿಸಿ ಮಾತನಾಡಿ, ಕೆಲವೊಬ್ಬರು ಊರಲ್ಲಿ ಇರುವುದಿಲ್ಲ ಇನ್ನೂ ಕೆಲವರು ಮೃತಪಟ್ಟಿರುತ್ತಾರೆ ಮತ್ತು ಸರಿಯಾದ ವಿಳಾಸ ದೊರಕುತ್ತಿಲ್ಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಮತದಾನ ಮಾಡುತ್ತಾರೆ ಅದಕ್ಕೆ ಆಯಾ ವಾರ್ಡುಗಳಲ್ಲಿ ಇರದಿದ್ದರೆ ಬೇರೆ ಕಡೆ ವಾಸವಾಗಿರುವ ಬಗ್ಗೆ ಖಚಿತ ಪಡಿಸಿಕೊಂಡು ನಮೂದು ಮಾಡಿ, ಇಲ್ಲದಿದ್ದರೆ ಆ ವಾರ್ಡನಲ್ಲಿಯಾದರು ಸೇರ್ಪಡೆ ಮಾಡಿ, ಇನ್ನೂ ಕೆಲವರ ವಯಸ್ಸು ಕೂಡಾ ಸರಿಯಾಗಿ ನಮೂದು ಆಗಿರುವುದಿಲ್ಲ. ೨೭ ವಯಸ್ಸು ಇದ್ದವರಿಗೆ ೭೭ ವಯಸ್ಸು ನಮೂದು ಆಗಿರುವ ಉದಾಹರಣೆಗಳಿವೆ. ಅಂತವರು ಪಾರ್ಮ ನಂ ೮ನ್ನು ಪಡೆದು ತಿದ್ದುಪಡಿ ಮಾಡಿಕೊಳ್ಳಬೇಕು. ಕೆಲವರು ಗ್ರಾಮೀಣ ಬಾಗದ ಮತದಾರರ ಪಟ್ಟಿಯಲ್ಲಿ ಇರುತ್ತಾರೆ ಅಂಥವರ ಹೆಸರನ್ನು ಪಟ್ಟಣದ ಮತದಾರರ ಪಟ್ಟಿಯಲ್ಲಿವೆ ಎನ್ನುವ ಮಾಹಿತಿಗಳು ಕೂಡಾ ಇವೆ ಅಂತವುಗಳನ್ನು ಬಗ್ಗೆ ಖಚಿತ ಮಾಹಿತಿ ಪಡೆದು ತೆಗೆದು ಹಾಕಿ ಒಟ್ಟಾರೆ ಯಾರು ಮತದಾನದಿಂದ ವಂಚಿತರಾಗಬಾರದು ಎನ್ನುವುದು ಚುನಾವಣಾ ಆಯೋಗದ ನಿರ್ದೇಶನವಿದ್ದು ಅದಕ್ಕೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡುವವರು ಸರಿಯಾದ ಕಾರ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಆಯ್.ಎಂ.ಮಕಾನದಾರ, ಗ್ರಾಮ ಲೆಕ್ಕಾಧಿಕಾರಿ ನಿಖಿಲ ಖಾನಾಪುರ, ಬಿಎಲ್‌ಓಗಳಾದ ಶರಣಮ್ಮ ಹಿರೇಮಠ, ಆದಿಶೇಷ ನಾಯಕ ಇದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group