ಗುರ್ಲಾಪೂರ ( ಮೂಡಲಗಿ) : ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಮದ ಆರಾಧ್ಯದೇವರಾದ ಶ್ರೀ ಲಕ್ಷ್ಮೀದೇವಿ ಜಾತ್ರೆಯು ದಿ. ೨೪ ರಿಂದ ೨೫ ರ ವರೆಗೆ ಅತೀ ವಿಜೃಂಭಣೆಯಿಂದ ಜರಗುವುದು.
ಜಾತ್ರೆಯ ಪ್ರಾರಂಭದಲ್ಲಿ ಗ್ರಾಮದಲ್ಲಿ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಹೀಗೆ ಐದು ವಾರಗಳವರೆಗೆ ಗ್ರಾಮದಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಯಾವುದೇ ಕೆಲಸ ಕಾರ್ಯಕ್ಕೆ ಹೋಗದೆ ಸ್ವಯಂಪ್ರೇರಿತವಾಗಿ ಯಾವುದೇ ಕೆಲಸದಲ್ಲಿ ತೊಡಗದೆ ಬಂದ್ ಮಾಡಿ ಗ್ರಾಮದಲ್ಲಿರುವ ದೇವರ ಗುಡಿಗಳಿಗಳಿಗೆ ಗ್ರಾಮದಲ್ಲಿ ಯಾವುದೇ ರೋಗ ರುಜಿನ ಬಾರದಂತೆ ದೇವಿ ನಮ್ಮನು ಕಾಪಾಡಲಿ ಎಂದು ನೀರನ್ನು ಕೊಡಗಳಲ್ಲಿ ತೆಗೆದುಕೂಂಡು ದೇವಸ್ಥಾನದ ಆವರಣದಲ್ಲಿ ಹಾಕುವರು.
ನಂತರ ದೇವಸ್ಥಾನದ ಅಬಿವೃದ್ದಿ ಕುರಿತು ಚರ್ಚಿಸುವರು ಮತ್ತು ಜಾತ್ರೆಗೆ ಅಂಬಲಿಕಾಳು ತರಲು ಭಕ್ತರ ಮನೆ ಮನೆಗೆ ತರುವ ವಾಡಿಕೆ ಮಾಡುವರು.
ಮಂಗಳವಾರ ದಿ.೨೪ ರಂದು ಮುಂಜಾನೆ ಲಕ್ಷ್ಮೀದೇವಿ ಅಭಿಷೇಕ ಹಾಗೂ ಉಡಿ ತುಂಬುವುದು, ಸಾಯಂಕಾಲ ಖಾನಟ್ಟಿ ಶ್ರೀ ಶಿವಲಿಂಗೇಶ್ವರ ಪಲ್ಲಕ್ಕಿ ಬರಮಾಡಿಕೊಂಡು ಗ್ರಾಮದ ಸಮಸ್ತ ದೇವರುಗಳ ಒಕ್ಕೋರದಿಂದ ಪಲ್ಲಕ್ಕಿ ಉತ್ಸವ ಜರುಗುವುದು. ರಾತ್ರಿ ೧೦ ಗಂಟೆಗೆ ಡೊಳ್ಳಿನ ಪದ ಜರಗುವುದು.
ಬುಧವಾರ ಸಮಸ್ತ ದೇವರುಗಳ ಪಲ್ಲಕ್ಕಿಗೆ ಹೂವು ಮತು ಬಂಡಾರ ಹಾರಿಸುತ್ತಾ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಸಕಲ ವಾದ್ಯ ಮೇಳದೊಂದಿಗೆ ಶ್ರೀ ಬಸವೇಶ್ವರ ದೇವಸ್ಥಾನ ತಲುಪಿ ಅಲ್ಲಿ ಡೊಳ್ಳಿನ ಪದಗಳನ್ನು ಹಾಡುವರು ಮತ್ತು ದತ್ತಿ ಆಟಗಳು ಜರಗುವುದು. ಜಾತೆಗೆ ಬಂದ ಭಕ್ತರಿಗೆ ನೆಲಗಡಲೆ ಬೆಲ್ಲ ಪ್ರಸಾದಮಾಡುವರು ನಂತರ ಪಲ್ಲಕ್ಕಿ ಉತ್ಸವ ಶ್ರೀ ಲಕ್ಷ್ಮೀದೇವಿ ದೇವಸ್ಥಾನ ತಲಪುವುದು. ನಂತರ ಮಹಾಪ್ರಸಾದ ಜರಗುವುದು. ನಂತರ ಸಂಜೆ ೫ ಗಂಟೆಗೆ ಖಾನಟ್ಟಿ ಶ್ರೀ ಶಿವಲಿಂಗೇಶ್ವರ ಪಲ್ಲಕ್ಕಿಯನ್ನು ಸಕಲ ವಾದ್ಯ ಮೇಳದೊಂದಿಗೆ ಬೀಳ್ಕೊಡುವರು.