ಮಕ್ಕಳಲ್ಲಿಯ ಪ್ರತಿಭೆಯ ಅನಾವರಣವೇ ಕಲೋತ್ಸವ:ಮೋಹನ ದಂಡಿನ

Must Read

ಸವದತ್ತಿ: “ಮಕ್ಕಳಲ್ಲಿ ಅಡಗಿರುವ ಕಲೆಯನ್ನು ಅನಾವರಣಗೊಳಿಸುವ ಸೂಕ್ತ ವೇದಿಕೆಯೇ ಕಲೋತ್ಸವ, ಎಲ್ಲ ಮಕ್ಕಳಲ್ಲಿ ಒಂದಲ್ಲ ಒಂದು ಅದ್ಭುತವಾದ ಪ್ರತಿಭೆ ಇದ್ದೇ ಇರುತ್ತದೆ ಅಂತಹ ಕೌಶಲ್ಯವನ್ನು ಸ್ಪರ್ಧಾತ್ಮಕ ಮನೋಭಾವನೆಯಿಂದ ವ್ಯಕ್ತಪಡಿಸಲು ಕಲೋತ್ಸವದಲ್ಲಿ ಭಾಗಿಯಾಗಿ ತಮ್ಮ ಶಾಲೆಗೆ ಮತ್ತು ತಮ್ಮ ವಲಯಕ್ಕೆ ಕೀರ್ತಿ ತರಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ ತಿಳಿಸಿದರು.

ಅವರು ತಾಲೂಕಿನ ಚಿಕ್ಕುಂಬಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸವದತ್ತಿ ವಲಯ ಮಟ್ಟದ ಕಲೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಎಲ್ಲ ವಿದ್ಯಾರ್ಥಿಗಳು ಕೂಡ ಉತ್ತಮವಾದ ಪ್ರದರ್ಶನ ನೀಡಿದಾಗ ಕೆಲವೊಮ್ಮೆ ನಿರ್ಣಾಯಕರಿಗೂ ಕೂಡ ಯಾವ ವಿದ್ಯಾರ್ಥಿಯನ್ನು ವಿಜಯಿ ಎಂದು ನಿರ್ಣಯ ಮಾಡುವುದು ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ನಿರ್ಣಾಯಕರು ಚರ್ಚಿಸಿ ಸೂಕ್ತವಾದ ವಿದ್ಯಾರ್ಥಿಯನ್ನು ಆಯ್ಕೆ ಮಾಡಿ ತಾಲೂಕು ಹಂತಕ್ಕೆ ಕಳುಹಿಸಬೇಕು. ನಿರ್ಣಾಯಕರು ನಿಷ್ಪಕ್ಷಪಾತವಾಗಿ ನಿರ್ಣಯ ನೀಡಬೇಕು ಮತ್ತು ವಿದ್ಯಾರ್ಥಿಗಳು ನಿರ್ಣಾಯಕರ ನಿರ್ಣಯಕ್ಕೆ ಬದ್ದವಾಗಿರಬೇಕೆಂದು ಎಲ್ಲರಿಗೂ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ ಚಿಕ್ಕುಂಬಿಯ ಆಜಾತ ನಾಗಲಿಂಗ ಮಠದ ಪರಮ ಪೂಜ್ಯರಾದ ಅಭಿನವ ನಾಗಲಿಂಗ ಮಹಾಸ್ವಾಮಿಗಳು ಮಾತನಾಡಿ “ಎಲ್ಲ ಶಾಲೆಯ ವಿದ್ಯಾರ್ಥಿಗಳು ಕೂಡ ನಮ್ಮವರೇ, ಅವರಿವರನ್ನದೆ ಸೂಕ್ತ ಪ್ರತಿಭೆಯನ್ನು ಹೊಂದಿರುವ ಉತ್ತಮ ಸ್ಪರ್ಧಾಳುಗಳನ್ನು ಆಯ್ಕೆ ಮಾಡಿ ಮುಂದಿನ ಹಂತಕ್ಕೆ ಕಳಿಸುವುದು ನಮ್ಮ ಕರ್ತವ್ಯ. ಈ ಕರ್ತವ್ಯ ನಿಷ್ಠೆಯನ್ನು ಮೆರೆಯುವುದು ನಮ್ಮ ಶ್ರೇಷ್ಠತೆಗೆ ಕೈಗನ್ನಡಿಯಾಗುತ್ತದೆ ಎಂದರು.

ತಾಲೂಕ ಪ್ರತಿಭಾ ಕಾರಂಜಿ/ಕಲೋತ್ಸವದ ನೋಡಲ್ ಅಧಿಕಾರಿಯಾಗಿರುವ ಶಿಕ್ಷಣ ಸಂಯೋಜಕ ಸುಧೀರ ವಾಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ “ಮಕ್ಕಳು ಕಲೋತ್ಸವದ ಸ್ಪರ್ಧೆಯಲ್ಲಿ ಯಾವ ನಿಯಮಗಳನ್ನು ಪಾಲನೆ ಮಾಡಬೇಕು? ತಮ್ಮ ಸ್ಪರ್ಧೆ ಹೇಗೆ ಇರಬೇಕು?” ಎಂದು ವಿವರವಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಸುಜಾತಾ ಮೆಣಸಿನಕಾಯಿ, ಸದಸ್ಯರಾದ ಮಂಜುನಾಥ ಸಂಗ್ರೇಶಿ, ಮಂಜುನಾಥ ಪವಾಡಶೆಟ್ಟಿ, ಶೇಖಪ್ಪಣ್ಣ ವಾರೆಪ್ಪನವರ, ಎಸ್.ಡಿ.ಎಮ್.ಸಿ.ಅಧ್ಯಕ್ಷರಾದ ಪುಂಡಲಿಕ ಕುರಿ, ಗಂಗಪ್ಪ ಶಿರಸಂಗಿ, ಪ್ರಭುಲಿಂಗ ಗೋವಣ್ಣವರ, ಸುನಂದಾ ಬಡಿಗೇರ, ನಬಿ ಅಸ್ತಖಾನ,  ನಿಂಗಪ್ಪ ತಪ್ಪಲದ,  ಮಾರುತಿ ಉಪ್ಪಾರ.ಸಿ.ಆರ್.ಪಿ ಧರೆಪ್ಪ ಮರಕುಂಬಿ, ಪ್ರಧಾನ ಗುರುಗಳಾದ ಎಸ್ ಪಿ ರಾವ್,  ಚಿಚಗಂಡಿ, ನರಸಿಂಗನವರ, ಜಿ,ಜಿ,ನಾಯಕ, ಆರ್‌,ಎಂ, ಪತಂಗಿ, ಬಿ  ಐ ಗಾಣಿಗೇರ,  ಎನ್.ಜಿ.ತಪ್ಪಲದ, ವಿನಾಯಕ ಕುರುಬಗಟ್ಟಿ, ರೇಷ್ಮಾ ಅಲಾರಕಿ,  ವಡಿಯರ, ಮಂಜುಳಾ ಕುರಿ ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯರಾದ ಎಂ ವೈ ಇಂಗಳೇಶ್ವರ ಸ್ವಾಗತಿಸಿದರು ಸವಿತಾ ಕಡಿವಾಲ ಕಾರ್ಯಕ್ರಮ ನಿರೂಪಿಸಿದರು ಎಸ್ ಎಸ್ ತೊರಗಲ್ಲ ವಂದಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group