spot_img
spot_img

ಹೀಗೊಂದು ಹೃದಯಸ್ಪರ್ಶಿ ಅಭಿನಂದನಾ ಸಮಾರಂಭ

Must Read

- Advertisement -

ಸವದತ್ತಿ ತಾಲೂಕಿನ ಜಕಬಾಳ ಗ್ರಾಮದ ಲಕ್ಷ್ಮೀನಗರ ಶಾಲೆಯಲ್ಲಿ ಇತ್ತೀಚೆಗೆ ಉತ್ತಮ ಶಾಲೆ ರಾಜ್ಯ ಪ್ರಶಸ್ತಿ ಪಡೆದ ಶಾಲೆಯಲ್ಲಿ ಒಂದು ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ನಾನು ಕೂಡ ಮುಖ್ಯ ಅತಿಥಿಯಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆ ಕಾರ್ಯಕ್ರಮ ಕುರಿತು ನಾಲ್ಕು ಸಾಲುಗಳನ್ನು ಬರೆಯಬೇಕು ಎನಿಸಿ ಇಡೀ ಕಾರ್ಯ ಕ್ರಮ ಜರುಗಿದ ಕ್ಷಣಗಳನ್ನು ದಾಖಲಿಸಿರುವೆನು.

ಈ ಶಾಲೆ ಬೆಂಗಳೂರಿನ ರಾಜ್ಯ ಮಹಿಳಾ ನೌಕರರ ಘಟಕದವರು ಏರ್ಪಡಿಸಿದ್ದ ಸಮಾರಂಭದಲ್ಲಿ ರಾಜ್ಯ ದ ಉತ್ತಮ ಶಾಲೆ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿರುವ ಕಾರಣ ಎಸ್ ಡಿ ಎಂ ಸಿಯವರು ಇದುವರೆಗೂ ಈ ಶಾಲೆಯಲ್ಲಿ ಸೇವೆ ಸಲ್ಲಿಸಿರುವ ಶಿಕ್ಷಕರನ್ನು ಗೌರವಿಸುವ ಮೂಲಕ ಈ ಸಂತಸದ ಕ್ಷಣಗಳನ್ನು ಹಂಚಿಕೊಳ್ಳಲು ಸಮಾರಂಭದವನ್ನು ಏರ್ಪಡಿಸಿದ್ದರು.

ಈ ಸಭೆಯ ಅಧ್ಯಕ್ಷತೆಯನ್ನು ಎಸ ಡಿ ಎಂಸಿ ಅಧ್ಯಕ್ಷರಾದ ಮಂಜುನಾಥ್,ಮಹಾದೇವಪ್ಪ, ಬಸಳಿಗುಂದಿ
ಮುಖ್ಯ ಅತಿಥಿಗಳಾಗಿ ಎಪಿಎಂಸಿ ಉಪಾಧ್ಯಕ್ಷರಾದ ಮಾರುತಿ,ಲಕ್ಷ್ಮಪ್ಪ, ಬಸಳಿಗುಂದಿ ಶಿಕ್ಷಣ ಸಂಯೋಜಕರಾದ
ಸುಧೀರ ವಾಗೇರಿ ಅರ್ಟಗಲ್ಲ ಸಮೂಹ ಸಂಪನ್ಮೂಲ ಕೇಂದ್ರದ ಸಿ.ಆರ್.ಪಿ
ಜಿ. ಎಸ್ ಚಿಪ್ಪಲಕಟ್ಟಿ  ಹಿರೇಕುಂಬಿ ಸಿ,ಆರ್, ಪಿ
ಧರೆಪ್ಪ ಮರಕುಂಬಿ, ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ವೈ ಬಿ ಕಡಕೋಳ, ಕಿಟಧಾಳ ಶಾಲೆಯ ಪ್ರಧಾನ ಗುರುಗಳಾದ ಗುರುನಾಥ, ಪತ್ತಾರ, ಜಕಬಾಳ ಶಾಲೆಯ ಪ್ರಧಾನ ಗುರು ಮಾತೆ ಮಹಾದೇವಿ ಹುಡೇದ,
ಸೇರಿದಂತೆ ಅರ್ಟಗಲ್ ಸಮೂಹ ಸಂಪನ್ಮೂಲ ಕೇಂದ್ರದ ವ್ಯಾಪ್ತಿಯ ವಿವಿಧ ಶಾಲೆಯ ಪ್ರಧಾನ ಗುರುಗಳು ಹಾಗೂ ಊರಿನ ಹಿರಿಯರು ಸಭೆಯಲ್ಲಿ ಭಾಗವಹಿಸಿದ್ದರು.

- Advertisement -

ಶಾಲೆಯ ಪ್ರಧಾನ ಗುರುಗಳಾದ ರವಿ ಸಣಕಲ್ ಆಗಮಿಸಿದ ಎಲ್ಲಾ ಅತಿಥಿಗಳನ್ನು, ಹಿರಿಯರನ್ನು, ಹಾಗೂ ಸತ್ಕಾರ ಮೂರ್ತಿಗಳನ್ನು ಸ್ವಾಗತಿಸಿದರು. ಸನ್ಮಾನ ಸಮಾರಂಭದ
ಸನ್ಮಾನಿತರಾಗಿ ಲಕ್ಷ್ಮೀ ನಗರ ಶಾಲೆಯಲ್ಲಿ ಈ ಹಿಂದೆ ಸೇವೆ ಸಲ್ಲಿಸಿರುವ ಎ ಎಂ ಹಿರೇಮಠ,
ಗಜಾನನ ಬಡಿಗೇರ, ಸಿ ಎಸ್ ಹಿರೇಮಠ, ಮಂಜುಳಾ ಕಟಗಿ
ಅತಿಥಿ ಗುರುಮಾತೆಯರಾದ ವಿಜಯಲಕ್ಷ್ಮೀ ,ಕರಿಗಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅದೇ ರೀತಿ ಅಡುಗೆ ಸಿಬ್ಬಂದಿಯವರಾಗಿ ಸೇವೆ ಸಲ್ಲಿಸಿ
ನಿವೃತ್ತರಾದ ನಿಂಗಮ್ಮ ಅರ್ಟಗಲ್ಲ ಸದ್ಯ ಸೇವೆಯಲ್ಲಿರುವ
ಮುಖ್ಯ ಅಡಿಗೆಯವರಾದ ಇಂದುಮತಿ ಚುಂಚನೂರ
ಅಡುಗೆ ಸಹಾಯಕರಾದ ಸಿದ್ದಮ್ಮ ಬೆನಕಟ್ಟಿ ಇವರ ಸೇವೆಯನ್ನು ಸಹ ನೆನೆದು ಅವರೀರ್ವರಿಗೂ ಸಹ ಎಸ್ ಡಿಎಂಸಿ ವತಿಯಿಂದ ಪ್ರೀತಿಯ ಸನ್ಮಾನ ಗೌರವ ಜರುಗಿಸಲಾಯಿತು.

ನೂತನ ಶಿಕ್ಷಣ ಸಂಯೋಜಕರಾದ ಸುಧೀರ್ ವಾಗೇರಿ
ಎಪಿಎಂಸಿ ಉಪಾಧ್ಯಕ್ಷರಾದ ಮಾರುತಿ ಬಸಳಿಗುಂದಿಯವರಿಗೆ ಜಿಲ್ಲಾ ಆದರ್ಶ ಶಿಕ್ಷಕಿ ಗೌರವಕ್ಕೆ ಪಾತ್ರರಾದ ಅರ್ಟಗಲ್ ಪ್ರೌಢಶಾಲಾ ಶಿಕ್ಷಕಿ ಸಂಗೀತಾ ಹೊಸೂರ ತಾಲೂಕ ಆದರ್ಶ ಶಿಕ್ಷಕ ಗೌರವಕ್ಕೆ ಪಾತ್ರರಾದ ಬಸರಗಿ ಶಾಲೆಯ ಶಿಕ್ಷಕ ಬಿ ಟಿ ಭಜಂತ್ರಿ ಯವರನ್ನು ಗೌರವಿಸಲಾಯಿತು

- Advertisement -

ಇದೇ ಸಂದರ್ಭದಲ್ಲಿ ಸದ್ಯ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿ ಬಿ ಹುಲಿಗೊಪ್ಪ
ಬಿ,ಎಫ್, ಜೋಗೆರ, ಮುಖ್ಯ ಶಿಕ್ಷಕ ರವಿ ಸಣಕಲ್ ರವರನ್ನು ಕೂಡ ಸನ್ಮಾನಿಸಲಾಯಿತು. ಶಿಕ್ಷಕ ಸಾಹಿತಿ ಹಾಗೂ ಸಮನ್ವಯ ಶಿಕ್ಷಣ ಶಿಕ್ಷಕರಾದ ವೈ ಬಿ ಕಡಕೋಳರವರನ್ನು ಕೂಡ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕರಾದ ಎ,ಎಂ,ಹಿರೇಮಠ, “ಈ ಶಾಲೆಯ ಸ್ಥಾಪನೆಗೆ ಕಾರಣಕರ್ತರಾದ ದಿವಂಗತ ಮಹದೇವಪ್ಪ ಬಸಳಿಗುಂದಿ ದಿವಂಗತ ಸಣ್ಣ ಲಕ್ಷ್ಮಣ್ ಬಸಳಿಗುಂದಿ ದಿವಂಗತ ಹನುಮಂತಪ್ಪ ಕಾತ್ರಾಳ ಇವರ ಕೊಡುಗೆಯನ್ನು ಸ್ಮರಿಸಿದರು.
ನಂತರ ಮಾತನಾಡಿದ ಗಜಾನಂದ ಬಡಿಗೇರ ಗುರುಗಳು “ಶಾಲೆ ಪ್ರಾರಂಭವಾದಾಗಿನಿಂದ ನಮ್ಮ ಶಾಲೆಗೆ ಅತ್ಯುತ್ತಮ ಶಿಕ್ಷಕರೇ ಬಂದಿದ್ದಾರೆ ನಮ್ಮ ಈ ಶಾಲೆ ಪ್ರಾರಂಭವಾಗಿ ಕೇವಲ 25 ವರ್ಷವಾಗಿದ್ದರೂ ನಮ್ಮ ಶಾಲೆಯಲ್ಲಿ ಕಲಿತವರು 25 ಕಿಂತ ಹೆಚ್ಚು ಜನ ವಿದ್ಯಾರ್ಥಿಗಳು ಸರ್ಕಾರಿ ನೌಕರಿಯಲ್ಲಿ ಇದ್ದಾರೆ ಎಂದರೆ ಇಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರ ಪ್ರಾಮಾಣಿಕ ಸೇವೆ ಕಂಡುಬರುತ್ತದೆ ಅಂದರೆ ಅತಿಶಯೋಕ್ತಿ ಆಗಲಾರದು ಎಂದು ತಮ್ಮ ಸೇವೆಯ ದಿನಗಳನ್ನು ಸ್ಮರಿಸಿದರು.

ಗುರು ಮಾತೆ ಎಂ ಎಸ್ ಕಟಗಿ ಮಾತನಾಡುತ್ತಾ “ನನ್ನ ವೃತ್ತಿ ಜೀವನದ ಮೊದಲ ಶಾಲೆ ಇದಾಗಿದ್ದು ಇದಕ್ಕೆ ರಾಜಮಟ್ಟದ ಪ್ರಶಸ್ತಿ ಬಂದಿರುವುದು ನನಗೆ ತುಂಬಾ ಸಂತೋಷ ತಂದಿದೆ
ನನ್ನ ಸೇವೆ ಗಮನಿಸಿ ನನ್ನನ್ನು ಇಲ್ಲಿ ಕರೆಸಿ ಗೌರವಿಸಿದ್ದಕ್ಕೆ ಎಸ್,ಡಿ,ಎಂಸಿ ಎಲ್ಲಾ ಪದಾಧಿಕಾರಿಗಳಿಗೆ ಧನ್ಯವಾದಗಳು ಎಂದು ತಿಳಿಸಿದರು

ಶಿಕ್ಷಣ ಸಂಯೋಜಕ ಸುಧೀರ್ ವಾಗೇರಿಯವರು ಮಾತನಾಡಿ, “ಈ ಶಾಲೆಯ ವಿದ್ಯಾರ್ಥಿಗಳನ್ನು ಪಾಲಕರನ್ನ ಶಿಕ್ಷಕರನ್ನ ನೋಡಿದರೆ ತುಂಬಾ ಸಂತೋಷವಾಗುತ್ತದೆ. ಈ ಶಾಲೆ ಈಗಾಗಲೇ ತಾಲೂಕು ಹಾಗೂ ಜಿಲ್ಲೆ, ರಾಜ್ಯಮಟ್ಟದ ಪ್ರಶಸ್ತಿ ಪಡೆದಿರುವುದು ಹೆಮ್ಮೆ ವಿಷಯ. ಈ ಶಾಲೆ ಇಂದು ಇಷ್ಟು ಹೆಮ್ಮರವಾಗಿ ಬೆಳೆಯಲು ಇಲ್ಲಿಯ ಶಿಕ್ಷಕರ ಪಾಲಕರ ಕೊಡುಗೆ ಅನನ್ಯ ಇಲಾಖೆ ಪರವಾಗಿ ಇಲ್ಲಿಯ ಶಿಕ್ಷಕರಿಗೆ ಪಾಲಕರಿಗೆ ಅಭಿನಂದನೆ ಸಲ್ಲಿಸುವೆ ಎಂದರು.

ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಮಾತನಾಡುತ್ತಾ
“ಈ ಶಾಲೆಗೂ ನನಗೂ ಅವಿನಾಭಾವ ಸಂಬಂಧವಿದೆ ನಾನು ಈ ಸಮೂಹ ಸಂಪನ್ಮೂಲ ವ್ಯಕ್ತಿ ಯಾಗಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಈ ಶಾಲೆಗೆ ಅತ್ಯುತ್ತಮ ಶಾಲೆ ಪ್ರಶಸ್ತಿ ಬಂದಿತು ನಂತರ ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಡಿಗೇರ ಗುರುಗಳಿಗೆ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನನ್ನ ಅವಧಿಯಲ್ಲಿ ಲಭಿಸುವ ಮೂಲಕ ಈ ಶಾಲೆಯಲ್ಲಿ ಆಪ್ತ ಸಮಾಲೋಚನಾ ಸಭೆಯನ್ನು ಹಿರಿಯರ ಸಹಕಾರದಿಂದ ಆಯೋಜನೆ ಮಾಡಿದ್ದ ದಿನಗಳನ್ನು ನೆನೆಯುತ್ತಾ ಈ ಶಾಲೆಯ ಹಿರಿಯರು ಅತ್ಯುತ್ತಮವಾಗಿ ಎಲ್ಲ ಶಿಕ್ಷಕರಿಗೆ ಊಟದ ವ್ಯವಸ್ಥೆಯನ್ನು ಮಾಡಿದ್ದನ್ನು ಸ್ಮರಿಸಿದರು.

ಶಿಕ್ಷಣ ಪ್ರೇಮಿ ಸೋಮನಿಂಗ ಚುಂಚನೂರ್ ರವರು ಮಾತನಾಡುತ್ತಾ “1997ರ ಸಮಯದಲ್ಲಿ ಈ ಭಾಗದಲ್ಲಿ ಜಕಬಾಳ ಗ್ರಾಮದ ಶಾಲೆಗೆ ಮಕ್ಕಳನ್ನು ಕಳಿಸಬೇಕಾಗಿತ್ತು ಅದು ಕಷ್ಟದ ಕೆಲಸ.ನಮ್ಮ ವಿದ್ಯಾರ್ಥಿಗಳಿಗೆ ಶಾಲೆ ಇರದ ಕಾರಣ ಅಂದಿನ ಶಾಸಕರಾದ ದಿವಂಗತ ಚಂದ್ರಶೇಖರ ಮಾಮನಿಯವರ ಗಮನಕ್ಕೆ ತಂದಾಗ ನೀವು ಸ್ಥಳದ ವ್ಯವಸ್ಥೆಯನ್ನ ಮಾಡಿದರೆ ನಾನು ಅಲ್ಲಿ ಒಂದು ಶಾಲೆಯನ್ನು ಮಾಡಿಸಿಕೊಡುತ್ತೇನೆಂದು ಮಾತು ಕೊಟ್ಟಿದ್ದರು ಅದೇ ರೀತಿ ಇಂದು ನಮ್ಮ ಶಾಲೆ ಪ್ರಾರಂಭವಾಗಿದೆ. ನಮ್ಮ ಶಾಲೆ ಪ್ರಾರಂಭವಾದಾಗಿನಿಂದ ಇಲ್ಲಿ ಉತ್ತಮ ಶಿಕ್ಷಕರೇ ಸೇವೆ ಸಲ್ಲಿಸುತ್ತಿರುವುದು ನಮ್ಮ ಶಾಲೆಯ ಹೆಮ್ಮೆ. ನಮ್ಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಈಗ ಸರಕಾರಿ ಸೇವೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಂದು ನಮ್ಮ ಶಾಲೆ ಉತ್ತಮ ಹಸಿರು ಕಲಿಕಾ ವಾತಾವರಣ ಹೊಂದಿ ತಾಲೂಕು ಜಿಲ್ಲೆ, ರಾಜ್ಯದಲ್ಲಿ ತನ್ನದೇ ಆದ ಕೀರ್ತಿಯನ್ನು ಪಡೆದಿದೆ” ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಶಾಲೆಯ ಪ್ರಧಾನ ಗುರುಗಳಾದ ರವಿ ನಣಕಲ್ಲ. ಮಾತನಾಡುತ್ತಾ “ನಮ್ಮ ಶಾಲೆ ಮೊದಲು ಕಟ್ಟಡ ಪ್ರಾರಂಭವಾಗುವವರೆಗೆ ಒಂದೂವರೆ ವರ್ಷಗಳ ಕಾಲ ಹನುಮಂತಪ್ಪ ಕಾತ್ರಾಳ ರವರ ಮನೆಯಲ್ಲಿ ಅಶೋಕ, ಹಿರೇಮಠ ರವರ ನೇತೃತ್ವದಲ್ಲಿ ಪ್ರಾರಂಭವಾಯಿತು. ನಂತರ ಬಡಿಗೇರ ಗುರುಗಳ ಆಗಮನ ಕಟ್ಟಡ ನಿರ್ಮಾಣ ಹಾಗೂ ಗಿಡಮರಗಳ ಮೂಲಕ ನಂದನವನ ಆಗಲು ಪಟ್ಟ ಪರಿಶ್ರಮ ಕುರಿತು ತಿಳಿಸಿ ಸದ್ಯ ತಮ್ಮ ಮುಂದಿರುವ ಕನಸುಗಳನ್ನು ತಿಳಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಶಿಕ್ಷಕರಾದ ಬಸನಗೌಡ ಹುಲಿಗೊಪ್ಪ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಹಾಗೂ ಸ್ವಾಗತ ಗೀತೆ ಜರುಗಿತು. ಕಾರ್ಯಕ್ರಮದ ಕೊನೆಯಲ್ಲಿ ಜೋಗೇರ ಗುರುಗಳು ವಂದಿಸಿದರು.ಹೀಗೆ ಎಲ್ಲರನ್ನೂ ಗೌರವಿಸುವ ಸ್ಮರಿಸುವ ಕ್ಷಣಗಳು ನಂತರ ಊಟದ ವಿರಾಮ ದೊಂದಿಗೆ ಕೊನೆಗೊಂಡ ಕ್ಷಣಗಳು ಮರೆಯಲಾಗದ ಅನುಭೂತಿ ಒದಗಿಸಿದವು.

ವೈ ಬಿ ಕಡಕೋಳ
ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ
ಕ್ಷೇತ್ರ ಸಂಪನ್ಮೂಲ ಕೇಂದ್ರ
ಸವದತ್ತಿ

- Advertisement -
- Advertisement -

Latest News

ಹಿರಿಯರು ಕುಟುಂಬದ ಬಲವಾದ ಅಡಿಪಾಯ — ಸಿದ್ದಲಿಂಗ ಕಿಣಗಿ

    ಸಿಂದಗಿ - ಅಜ್ಜಿಯರು ಕುಟುಂಬದ ದೊಡ್ಡ ಸಂಪತ್ತು, ಪ್ರೀತಿಯ ಪರಂಪರೆಯ ಸ್ಥಾಪಕರು, ಶ್ರೇಷ್ಠ ಕಥೆಗಾರರು ಮತ್ತು ಸಂಪ್ರದಾಯದ ಪಾಲಕರು. ಅಜ್ಜ-ಅಜ್ಜಿಯರು ಕುಟುಂಬದ ಬಲವಾದ...
- Advertisement -

More Articles Like This

- Advertisement -
close
error: Content is protected !!
Join WhatsApp Group