ಕವನ : ಭಗತ್ ಗೆ ಗಲ್ಲು

Must Read

ಭಗತ್ ಗೆ ಗಲ್ಲು

ಅಂದು ಕತ್ತಲು ಹರಿದಿರಲಿಲ್ಲ.
ಮಧ್ಯ ರಾತ್ರಿ ಗುಸು ಗುಸು ಮಾತು
ಸೆರೆವಾಸದ ಮನೆ ಸ್ಮಶಾನ
ಕೆಂಪು ಮೋತಿಯವರಿಗೂ ದುಗುಡ
ಒಳಗೊಳಗೆ ಕಳವಳ
ಮುಖದ ಮೇಲೆ ಚಿಗುರು ಗಡ್ಡಮೀಸೆ
ಹಸೆ ಮಣಿ ಏರಿರಲಿಲ್ಲ, ಕಂಕಣ ಕಟ್ಟಿಲ್ಲ
ಬೇಡಲಿಲ್ಲ ಜೀವ ಭಿಕ್ಷೆ, ಪ್ರಾಣ ದಯೆ .
ಬರೆದು ಮುಗಿಸಿದ ದಿನಚರಿ
ಸಾವಿನ ಅಧಿಕಾರಿಯ ಕೈಕುಲುಕಿದ
ಮುಗುಳು ನಗೆ ಮಂದಹಾಸ ನೋಟ
ಬಾಡಿರಲಿಲ್ಲ ಮುಖದ ಚೇತನ
ನಡೆದರು ಸಾವಿನ ಕುಣಿಕೆಗೆ ಸಂತಸದಿ
ಭಗತ್ ಸುಖದೇವ ರಾಜಗುರು
ಅಪ್ಪಿದರು ಕೊಲ್ಲುವ ಚಾಂಡಾಲನ
ಮನಸಿನಲಿ ಸ್ವರಾಜ್ಯ ಕಾಣದ ಕೊರಗು
ಸಂಕೋಲೆ ಕಳಚಲಿಲ್ಲ .ಇನ್ಕಿಲಾಬ್ ಘೋಷಣೆ
ಭಾರತ ಮಾತೆಗೆ ಕೊನೆಯ ವಂದನೆ ಹೇಳಿ
ಅಪ್ಪಿ ಮುದ್ದಾಡಿದರು ವೀರ ಮಕ್ಕಳು
ಕೊಟ್ಟರು ಕುಣಿಕೆಗೆ ಎಳೆಯ ಗೋಣು
ರಕ್ತ ಚಿಮ್ಮಿತು ನೆಲ ಕೆಂಪಾಯಿತು
ನೋಡು ನೋಡುತ್ತಲೆ ಅಮರರಾದರು
ಭಗತ್ ಸುಖದೇವ ರಾಜಗುರು
ಕದ್ದು ಮುಚ್ಚಿ ಶವ ಸಂಸ್ಕಾರ
ಹೆತ್ತ ಕರುಳಿಗೂ ತೋರಿಸದೆ ಸುಟ್ಟರು
ಆರಿಲ್ಲ ಭಗತ್ ಹಚ್ಚಿದ ಕ್ರಾಂತಿಯ ಜ್ವಾಲೆ
ಮರೆತಿಲ್ಲ ಭಗತನ ಹೋರಾಟ
ಹುಟ್ಟಿ ಬರುವರು ಮತ್ತೆ ನೂರು ಭಗತ್
ದೇಶ ಕಟ್ಟಲು, ವೈರಿಯ ಮೆಟ್ಟಲು
ಭಗತ್ ಸುಖದೇವ ರಾಜಗುರು ಅಮರ ರಹೇ
ಇನ್ಕಿಲಾಬ್ ಜಿಂದಾಬಾದ

ಡಾ ಶಶಿಕಾಂತ .ಪಟ್ಟಣ -ಪೂನಾ (

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group