ಎಲ್ಲರೂ ಪಲ್ಲಕ್ಕಿಯೇರಬಯಸಿದರಾಗ
ಹೆಗಲಮೇಲದಹೊತ್ತು ನಡೆವರಾರು ?
ಪಡೆದವಗೆ ಪಲ್ಕಕ್ಕಿ ಬಡವನಿಗೆ ಸೇರಕ್ಕಿ
ಅವರವರ ದುಡಿಮೆಫಲ – ಎಮ್ಮೆತಮ್ಮ
ಶಬ್ಧಾರ್ಥ
ಪಲ್ಲಕ್ಕಿ = ಪಾಲಿಕೆ, ಮೇನೆ. ಪಲ್ಲ(ಅಕ್ಕಿ) = ಧ್ಯಾನ್ಯದ ಒಂದು ಅಳತೆ, ಒಂದು ಚೀಲ . ಸೇರು(ಅಕ್ಕಿ) = ಧ್ಯಾನ್ಯ ಅಳೆವ ಡಬ್ಬಿ
ತಾತ್ಪರ್ಯ
ಎಲ್ಲರು ರಾಜಮಹಾರಾಜರಾದರೆ ಅಥವಾ ಜಗದ್ಗುರುಗಳಾದರೆ ಅವರನ್ನು ಪಲ್ಲಕ್ಕಿಯಲ್ಲಿ ಕೂಡಿಸಿಕೊಂಡು ಹೊತ್ತು ಸಾಗುವರು ಯಾರು ಇರುವುದಿಲ್ಲ. ಅವರ ದುಡಿಮೆ ಫಲದಿಂದ ಕೆಲವರು ಮಹಾರಾಜ ಅಥವಾ ಗುರುರಾಜ ಆಗುತ್ತಾರೆ ಮತ್ತು ಬಹುಜನರು ದುಡಿವ ವರ್ಗದ ಸಾಮಾನ್ಯ ಜನರಾಗುತ್ತಾರೆ. ಯಾರ ಭಾವ ಹೇಗಿರುತ್ತದೆಯೊ ಹಾಗೆ ಅವರ ಜೀವನ ರೂಪಿತವಾಗುತ್ತದೆ. ಸಿರಿವಂತಿಕೆ ಅಥವಾ ಬಡತನ ಅವರವರ ಭಾವದಂತೆ ಉಂಟಾಗುತ್ತದೆ. ಎಲ್ಲರೂ ನಾಯಕರಾಗಲು ಅಥವಾ ಗುರುಗಳಾಗಲು ಬರುವುದಿಲ್ಲ. ಹಾಗಾದರೆ ಸಮಾಜ ಹಾಳಾಗಿ ಹೋಗುತ್ತದೆ . ಸಮಾಜವನ್ನು
ಮುನ್ನೆಡೆಸಲು ನಾಯಕ ಅಥವಾ ಗುರು ಇರಬೇಕಾಗುತ್ತದೆ.
ಇದಕ್ಕೆಲ್ಲ ಕಾರಣ ಅವರ ಹಿಂದಿನ ಅಥವಾ ಇಂದಿನ
ಜನ್ಮದಲ್ಲಿ ದುಡಿಮೆಯ ಫಲ. ಬುದ್ಧಿವಂತಿಗೆ ಮತ್ತು ಹೃದಯವಂತಿಕೆಯಿಂದ ದುಡಿದವನಿಗೆ ಒಂದು ಪಲ್ಲ
ಅಕ್ಕಿ ಅಂದರೆ ಒಂದು ಚೀಲ ಅಕ್ಕಿ ದೊರಕುತ್ತದೆ.ಮತ್ತೆ
ಮನೋದಾರಿದ್ರ್ಯವುಳ್ಳವರು ಗೊಣಗುತ್ತ ದುಡಿದರೆ
ಸೇರು ಅಕ್ಕಿ ಮಾತ್ರ ದೊರಕುತ್ತದೆ. ನಮ್ಮ ಸಿರಿವಂತಿಕೆ
ಮತ್ತು ಬಡತನಕ್ಕೆ ನಮ್ಮ ಪುಣ್ಯ ಅಥವಾ ಭಾವವೇ ಕಾರಣ.
ಅದಕ್ಕೆ ತಕ್ಕಂತೆ ಫಲ ದೊರಕುತ್ತದೆ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990