ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

Must Read

 

ಹಲವುಕಡೆ ಕುಣಿತೆಗೆಯೆ ನೀರು ದೊರಕುವುದೇನು?
ಒಂದೆಕಡೆ ಬಾವಿಯನು ತೆಗೆಯಬೇಕು
ಕಂಡದೈವಕ್ಕೆಲ್ಲ ಕೈಮುಗಿಯೆ ಫಲವಿಲ್ಲ
ಮನವೇಕದೈವದಿಡು – ಎಮ್ಮೆತಮ್ಮ

ಶಬ್ಧಾರ್ಥ
ದೈವ = ದೇವರು

ತಾತ್ಪರ್ಯ
ಈ ಕಗ್ಗ ಏಕ ದೇವೋಪಾಸನೆಯ ಬಗ್ಗೆ ಚರ್ಚಿಸುತ್ತದೆ.
ಬಾವಿ ತೆಗೆಯಬೇಕಾದರೆ ಒಂದು ನಿರ್ಧಿಷ್ಟವಾದ ಉತ್ತಮ
ಭೂಮಿಯನ್ನು ಆಯ್ಕೆಮಾಡಿ ತೋಡಬೇಕಾಗುತ್ತದೆ. ಅದುಬಿಟ್ಟು ಎಲ್ಲಿಬೇಕಾದರಲ್ಲಿ ಹಲವಾರು ಕಡೆಗೆ ತಗ್ಗು
ತೆಗೆದರೆ ನೀರು ದೊರಕುವುದಿಲ್ಲ. ಸತತವಾಗಿ ಒಂದೇಕಡೆ
ತಗ್ಗು ತೆಗೆಯುತ್ತ ಹೋದರೆ ನೀರು ದೊರಕುತ್ತದೆ.‌ಹಾಗೆ
ಒಬ್ಬ ದೇವರಲ್ಲಿ ಶ್ರದ್ಧೆನಂಬಿಗೆಯಿಂದ ಭಜಿಸಿದರೆ
ಕೇಳಿದ ವರಗಳನ್ನು ದಯಪಾಲಿಸುತ್ತಾನೆ. ಒಬ್ಬನಲ್ಲದೆ ಜಗಕೆ ಇಬ್ಬರುಂಟೇ ? ಮತ್ತೆ| ಒಬ್ಬ ಸರ್ವಜ್ಞ ಕರ್ತನೀ‌ ಜಗಕೆಲ್ಲ|ಒಬ್ಬನೆ ದೈವ ಸರ್ವಜ್ಞ ಎಂದು ಕವಿ ಸರ್ವಜ್ಞ ಹೇಳಿದ್ದಾನೆ. ಜಗತ್ತಿನಲ್ಲಿ ಇರುವುದು ಒಂದೇ ಶಕ್ತಿ.ಅದುವೆ ದೇವರು. ಅದನ್ನು‌ ನಾನಾ ಹೆಸರಿನಿಂದ‌ ಕರೆಯುತ್ತಾರೆ.ಅದನ್ನೆ ಬಸವಣ್ಣನವರು ದೇವನೊಬ್ಬ ನಾಮ ಹಲವು ಪರಮ ಪತಿವ್ರತೆಗೆ ಗಂಡನೊಬ್ಬ‌ ಮತ್ತೊಂದಕ್ಕೆರಗಿದಡೆ ಕಿವಿ ಮೂಗ ಕೊಯ್ವುವನು‌ ಹಲವು ದೈವದ ಎಂಜಲ ತಿಂಬುವರನೇನೆಂಬೆ ಕೂಡಲಸಂಗಮದೇವ‌ ಎಂದು ಒಂದು ವಚನದಲ್ಲಿ ಹೇಳಿದ್ದಾನೆ. ಭಕ್ತನಾದವನು ಪತಿವ್ರತೆಯಂತೆ ಪತಿಯಲ್ಲಿ ವಿಶ್ವಾಸವಿಟ್ಟಂತೆ ಒಂದೆ ದೈವದಲ್ಲಿ ನಂಬಿಕೆ‌ ಇಟ್ಟು ಆರಾಧಿಸಬೇಕು.ವೇಶ್ಯೆಯಂತೆ ಹಲವರನ್ನು ಕೂಡಿದರೆ ಫಲವಿಲ್ಲವೆಂದು ಏಕದೇವೋಪಾಸನೆಯನ್ನು‌ ಶರಣರು ಪುರಸ್ಕರಿಸುತ್ತಾರೆ.

ರಚನೆ ಮತ್ತು ವಿವರಣೆ                              ‌‌ ‌‌‌ ಎನ್.ಶರಣಪ್ಪ‌ ಮೆಟ್ರಿ
ಮೊ. 9449030990

Latest News

ಲೇಖನ : ಬ್ರಾಹ್ಮಣ ಪುತ್ರನಿಗಾಗಿ ಕೊಲೆಗಾರನಾದ ಶ್ರೀರಾಮಚಂದ್ರ

ಬ್ರಾಹ್ಮಣ ಪುತ್ರನಿಗಾಗಿ ಕೊಲೆಗಾರನಾದ ಶ್ರೀರಾಮಚಂದ್ರಾಮ ಚರಿತ ಕಥಾಮೃತವಾದ ರಾಮಾಯಣ, ಶ್ರೀರಾಮನನ್ನು ಮರ್ಯಾದ ಪುರುಷೋತ್ತಮ ಎಂದು ಬಿಂಬಿಸಿದೆ. ಹಾಗೆಂದ್ರೆ ತನ್ನ ಜೀವಮಾನದಲ್ಲಿ ನೀತಿ ಹಾಗೂ ತತ್ವ ಬದ್ಧವಾಗಿ...

More Articles Like This

error: Content is protected !!
Join WhatsApp Group