ಪಾಶ್ಚಾತ್ಯ ಸಂಸ್ಕೃತಿಗೆ ಮರುಳಾಗುವದು ನಿಲ್ಲಲಿ- ದಾನಯ್ಯ ಹಿರೇಮಠ

Must Read

ಸಿಂದಗಿ ; ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳಿಗೆ ಪೂಜಾ ಮನೋಭಾವ ಮೂಲಕ ಅವರಿಗೆ   ಕುಟುಂಬದಲ್ಲಿ ಹೆಚ್ಚು ಗೌರವ ಇದೆ ಎಂದು ದಾನಯ್ಯ ಮಲ್ಕಯ್ಯ ಹಿರೇಮಠ ಹೇಳಿದರು.

ತಾಲೂಕಿನ  ಚಿಕ್ಕಸಿಂದಗಿ ಗ್ರಾಮದ ಹಿರೇಮಠದ ಪರಿವಾರದವರು ಹಮ್ಮಿಕೊಂಡ ಶ್ರೀ ದೇವಿ ಪುರಾಣ ಪ್ರವಚನ ಮಂಗಲೋತ್ಸವದಲ್ಲಿ 1108 ಮುತೈದೆಯರಿಗೆ ಉಡಿತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ಭಕ್ತರು  ಶೃದ್ಧಾ ಭಕ್ತಿಯಿಂದ ಶ್ರೀದೇವಿಯನ್ನು ಮನದಲ್ಲಿ ಪ್ರತಿ ನಿತ್ಯ ಪೂಜಿಸಿ ಗೌರವಿಸುವುದರಿಂದ ಬಂದ ಕಷ್ಟಗಳು ದೂರವಾಗುತ್ತವೆ. ಹಿರೇಮಠದ ಗುರು ಹಿರಿಯರ ಆಶೆಯಂತೆ ಅವರ ಕುಟುಂಬದವರು ಶ್ರೀದೇವಿಯ ಪುರಾಣ ಆಲಿಸುವ ಮೂಲಕ ಉತ್ತಮ ಕಾರ್ಯ ಮಾಡುವದರಿಂದ ಸರ್ವರಿಗೂ ಶ್ರೀದೇವಿ ಒಳಿತನವು ಮಾಡಲಿ ಎಂದರು.

ಎಂ.ಎಸ್.ಹಿರೇಮಠ ಮಾತನಾಡಿ, ಮಹಿಳೆಯರು ನಿತ್ಯ ತಮ್ಮ ಮನೋರಂಜನಾ ದೂರದರ್ಶನದಲ್ಲಿ  ಮೂಡಿ ಬರುತ್ತಿರುವ ಧಾರಾವಾಹಿಗಳಲ್ಲಿ ಬರುವ ಪಾಶ್ಚಾತ್ಯ ಸಂಸ್ಕೃತಿ ಅನುಕರಣೆಯನ್ನು ಕೈ ಬಿಟ್ಟು ನಾವು ನಮ್ಮ ಭಾರತೀಯ ಸಂಸ್ಕೃತಿಯನ್ನು ಮೆಚ್ಚುವ ಮೂಲಕ ಸಾತ್ವಿಕ ಜೀವನ ನಡೆಸಬೇಕು ಎಂದರು.

ಶಾಂತಯ್ಯ ಗುರಲಿಂಗಯ್ಯ ಹಿರೇಮಠ ಮಾತನಾಡಿ, ನಮ್ಮ ಗುರು ಹಿರಿಯರು ಹಾಕಿ ಕೊಟ್ಟಿರುವ ಸನ್ಮಾರ್ಗದಲ್ಲಿ ನಡೆಯುವ ಮುಖಾಂತರ ಧರ್ಮ, ಆಚಾರ, ವಿಚಾರ  ಸಂಪ್ರದಾಯ ಧಾರ್ಮಿಕ ಪದ್ದತಿಗಳ ಆಚರಣೆ ಮಾಡುವದರಿಂದ ನಮ್ಮ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ .ಸಮಾಜದಲ್ಲಿ ಒಂದೇ ಕುಟುಂಬದ ಸದಸ್ಯರು ಸಮಾಜದಲ್ಲಿ ಸಮಾನತೆ ಸಹೋದರತೆಯಿಂದ ಸುಂದರ ಬದುಕು ಕಟ್ಟಿಕೊಂಡು ನುಡಿದಂತೆ ನಡೆಯ ಬೇಕು. ಹಿರೇಮಠದಲ್ಲಿ ಶ್ರೀದೇವಿಯ ಆರಾದನೆಗಾಗಿ ಒಂಭತ್ತು ದಿನಗಳ ಕಾಲ ಶ್ರೀದೇವಿ ಮೂರ್ತಿಗೆ ಶೃದ್ಧಾ ಭಕ್ತಿಯಿಂದ ಪೂಜಿಸಿ ಎಂದು ಶ್ರೀ ದೇವಿಯ ಮಹಿಮೆ ಪುರಾಣವನ್ನು  ಹಿರೇಮಠ ಹೇಳಿದರು.

ಕಾರ್ಯಕ್ರಮದಲ್ಲಿ ಚಿಕ್ಕಸಿಂದಗಿ, ಸಿಂದಗಿ,
ಬ್ಯಾಕೋಡ, ಗೋಲಗೇರಿ,
ಡಂಬಳ, ಮೈಲೇಶ್ವರ, ಬಂದಾಳ, ಬೂದಿಹಾಳ, ಇಂಗಳೇಶ್ವರ,  ದಿಂಡವಾರ,  ಬಂಟನೂರ,  ಕೋರಳ್ಳಿ,  ತಾಳಿಕೋಟಿ, ಮುದ್ದೇಬಿಹಾಳ, ತುಂಬಗಿ,  ಅಲ್ಲಾಪೂರದ ಸರ್ವ ಭಕ್ತರು ಭಾಗವಹಿಸಿ ಮುತೈ ದೆಯರಿಗೆ ಉಡಿತುಂಬಿ ತದನಂತರ ಮಹಾ ಪ್ರಸಾದ ನೆರವೇರಿತು.ಅಂದು ಸಂಜೆ ಮನರಂಜನೆ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ  ದಾನಯ್ಯ ಶಂಕ್ರಯ್ಯ ಹಿರೇಮಠ, ಈರಯ್ಯ  ಹಿರೇಮಠ, ಶಿವಯ್ಯ ಹಿರೇಮಠ,  ಸೋಮಯ್ಯ ಹಿರೇಮಠ, ದಾನಯ್ಯ ಶಿ  ಹಿರೇಮಠ, ಶ್ರೀಶೈಲಯ್ಯ ಹಿರೇಮಠ, ಗಂಗಯ್ಯ ಶಿ ಹಿರೇಮಠ, ರಾಜೇಂದ್ರಯ್ಯ ಹಿರೇಮಠ, ಬಸಲಿಂಗಯ್ಯ ಹಿರೇಮಠ,  ಗುಂಡಯ್ಯ ಹಿರೇಮಠ, ರಾಘವೇಂದ್ರಯ್ಯ ಹಿರೇಮಠ, ಗುರುಸಂಗಯ್ಯ ಹಿರೇಮಠ, ಶಿವುಕುಮಾರ ಹಿರೇಮಠ ಸೇರಿದಂತೆ ಅಪಾರ ಭಕ್ತರು  ಭಾಗವಹಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group