ರೈತರ ಯೋಜನೆಗೆ ಅನುದಾನ ನೀಡದಿದ್ದರೆ ಶಾಸಕನಾಗಿ ಏನು ಪ್ರಯೋಜನ- ಶಾಸಕ ರಾಜು ಕಾಗೆ

Must Read

ಕಾಗವಾಡ: ಮತಕ್ಷೇತ್ರದಲ್ಲಿ ರೈತರ ಕಲ್ಯಾಣ ಯೋಜನೆಗಳಿಗೆ ಸರ್ಕಾರದಿಂದ ಅನುದಾನ ದೊರೆಯದಿದ್ದರೆ ನಾನು ಅಧಿಕಾರದಲ್ಲಿದ್ದು ಏನು ಪ್ರಯೋಜನ? ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ಹೇಳಿದರು.

ಅಥಣಿ ತಾಲ್ಲೂಕಿನ ತಾವಂಶಿ ಗ್ರಾಮದಲ್ಲಿ ಗುರುವಾರ ನಡೆದ ಭಾರತ ಸಹಕಾರ ಸಂಘದ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ರೈತರ ಯೋಜನೆಗಳನ್ನು ಸರ್ಕಾರ ಕಾಳಜಿಯಿಂದ  ಅನುಷ್ಠಾನಗೊಳಿಸಬೇಕು ಇಲ್ಲದಿದ್ದರೆ ವಿಧಾನಸೌಧದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಸಚಿವರೊಬ್ಬರ ಸಮ್ಮುಖದಲ್ಲಿ ಹೇಳಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ‘ರೈತರು ಬದುಕು ನಡೆಸುವುದು ದುಸ್ತರವಾಗಿದೆ. ನಮ್ಮದೇ ಸರ್ಕಾರವಿದ್ದರೂ ಕ್ಷೇತ್ರದ ರೈತರ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿಲ್ಲ. ಒಂದು ವರ್ಷದಿಂದ ಯಾವುದೇ ಕೆಲಸಗಳು ಆಗುತ್ತಿಲ್ಲ’ ಎಂದರು.

‘ರೈತರು ಒಂದು ವರ್ಷ ಬೆಳೆ ಬೆಳೆಯುವುದನ್ನು ಬಿಟ್ಟರೆ ನೀವೇನು ತಿನ್ನುತ್ತೀರಿ? ನಿಮ್ಮ ಬಳಿ ಹಣ, ಬಂಗಾರ, ಬೆಳ್ಳಿ ಸಾಕಷ್ಟಿದ್ದರೂ, ಅದನ್ನ ತಿನ್ನಲಾಗದು. ಮೊದಲು ರೈತರನ್ನು ಬದುಕಿಸಿ. ಆಗ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ’ ಎಂದು ಪರೋಕ್ಷವಾಗಿ ಸರ್ಕಾರದ ವಿರುದ್ಧ ಹರಿಹಾಯ್ದರು. ‘ನೆನೆಗುದಿಗೆ ಬಿದ್ದಿರುವ ಖಿಳೆಗಾಂವ ಬಸವೇಶ್ವರ ಯಾತ ನೀರಾವರಿ ಯೋಜನೆ ಜಾರಿಯಾಗುವ ಯಾವುದೇ ಲಕ್ಷಣವಿಲ್ಲ. ನನ್ನ ಅವಧಿಯಲ್ಲಿ ಪೂರ್ಣಗೊಳಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದರೂ, ಕಾಮಗಾರಿ ಪ್ರಾರಂಭಿಸದಂತೆ ಷಡ್ಯಂತ್ರ ನಡೆಯುತ್ತಿದೆ’ ಎಂದು ಕಾಗೆಯವರು ಕಳವಳ ವ್ಯಕ್ತಪಡಿಸಿದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group