ಗೊಲ್ಲ ಸಮಾಜ ಅಭಿಮಾನ ಮತ್ತು ನಂಬಿಕೆಯ ಸಮಾಜ – ಶಾಸಕ ಮನಗೂಳಿ

Must Read

ಸಿಂದಗಿ: ಗೊಲ್ಲರ ಸಮುದಾಯದಲ್ಲಿ ಶಿಕ್ಷಣದ ಕೊರತೆ ಇರಬಹುದು. ಆದರೆ ಸಂಸ್ಕಾರ ಮತ್ತು ಸಂಸ್ಕೃತಿಯ ಕೊರತೆಯಿಲ್ಲ. ಧರ್ಮದ ಬಗ್ಗೆ ಅಪಾರ ಅಭಿಮಾನ ಮತ್ತು ನಂಬಿಕೆಯುಳ್ಳ ಸಮಾಜ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ರೇಣುಕಾ ನಗರದಲ್ಲಿ ಶುಕ್ರವಾರ ಸಾಯಂಕಾಲ ಹಮ್ಮಿಕೊಂಡ ರೇಣುಕಾದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭವನ್ನು ಶಾಸಕ ಅಶೋಕ ಮನಗೂಳಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡುತ್ತಿರುವುದು ಹೆಮ್ಮೆಯ ವಿಷಯ. ಯಾದವ (ಗೊಲ್ಲರ) ಸಮಾಜವನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಯುವಕರ ಶ್ರಮ ಬಹಳವಿದೆ. ಜಾತ್ರೆ, ಪುರಾಣ, ಪ್ರವಚನ ಇಂದು ನಿನ್ನೆಯದಲ್ಲ ಹಿಂದಿನ ಕಾಲದಿಂದಲೂ ಬೆಳೆದು ಬಂದಿದೆ. ಈ ದೇಶದ ಸಂಸ್ಕೃತಿ ಸಂಸ್ಕಾರ ದೊಡ್ಡದು. ಧರ್ಮದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಈ ಸಮಾಜದ ಅಭಿವೃದ್ಧಿ ಮತ್ತು ಚಿಂತನೆಗೆ ನಾನು ಸದಾ ಸಿದ್ದ. ಹನುಮಾನ ದೇವಸ್ಥಾನಕ್ಕೆ ೧೦ಲಕ್ಷ ರೂ. ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.

ಈ ವೇಳೆ ಬಿಜೆಪಿ ಮಂಡಲ ಕೋಶಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಸುನಂದಾ ಯಂಪುರೆ, ಪುರಸಭೆ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಮಾತನಾಡಿ, ಭಾರತದಲ್ಲಿ ಪರಂಪರೆ, ಭಕ್ತಿ, ಭಾವದಿಂದ ಇಂತಹ ಹಬ್ಬಗಳನ್ನು ಆಚರಣೆ ಮಾಡಿಕೊಳ್ಳುತ್ತಾ ಬರುತ್ತಿದ್ದೇವೆ. ಇಡೀ ವಿಶ್ವದಲ್ಲಿ ಎಲ್ಲ ರಾಷ್ಟ್ರಗಳು ಹಬ್ಬ ಹರಿದಿನಗಳನ್ನು ಮರೆತಿವೆ. ಆದರೆ ಭಾರತದಲ್ಲಿ ಇನ್ನೂ ಇವುಗಳು ಅಸ್ತಿತ್ವದಲ್ಲಿವೆ. ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಸಮಾಜದ ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಯುವಕರು ಕಾರ್ಯಪ್ರವೃತ್ತರಾಗಬೇಕು. ಸಮಾಜ ಸಣ್ಣದಾದರು ನಿಮ್ಮ ಮನಸ್ಸು ದೊಡ್ಡದಿದೆ. ಎಲ್ಲರನ್ನೂ ಮುಖ್ಯವಾಹಿನಿಗೆ ತರಬೇಕು ಎನ್ನುವ ನಿಟ್ಟಿನಲ್ಲಿ ರಾಮು ಮೋರಟಗಿ ರಾಜು ಬೋರಗಿ ಅವರು ಮಾಡುವ ಕಾರ್ಯ ಬಹಳ ಮುಖ್ಯವಾಗಿದೆ. ಹಂತ ಹಂತವಾಗಿ ಸಮಾಜದ ಸಮಸ್ಯೆಗಳನ್ನು ಶಾಸಕರ ಮೂಲಕ ಪರಿಹರಿಸಿಕೊಳ್ಳಿ ನಿಮ್ಮ ಜೊತೆ ನಾವು ಯಾವಾಗಲೂ ಇರುತ್ತೇವೆ ಎಂದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಪದವಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿಲಾಯಿತು.

ಸನ್ಮಾನೋತ್ತರವಾಗಿ ವಿದ್ಯಾರ್ಥಿನಿ ಲಕ್ಷ್ಮಿ ಬೋರಗಿ ಮಾತನಾಡಿ, ಸಮಾಜದಲ್ಲಿ ಯಾರು ವಿದ್ಯಾವಂತರಿಲ್ಲ. ಪಾಲಕರು ಮಕ್ಕಳ ಶ್ರೇಯೋಭಿವೃದ್ದಿಗೆ ಆದ್ಯತೆ ಕೊಡಬೇಕು. ನನ್ನ ವಿದ್ಯಾಭ್ಯಾಸ ಪಡೆದುಕೊಳ್ಳಬೇಕು ಎಂದರೆ ನಮ್ಮ ಕುಟುಂಬದ ಸಹಕಾರ ಬಹಳಯಿದೆ. ಹಾಗಾಗಿ ಸಮಾಜದ ಎಲ್ಲ ಪಾಲಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಸತೀಶಗೌಡ ಬಿರಾದಾರ, ಭೀಮು ವಾಲಿಕಾರ, ಖಾಜು ಬಂಕಲಗಿ, ರಾಕೇಶ ಕಂಟಿಗೊಂಡ, ಸತೀಶಗೌಡ ಬಿರಾದಾರ, ವೀರೇಶ ದುರ್ಗಿ, ಸಿದ್ದು ಮಲ್ಲೇದ, ರಜಾಕ್ ಮುಜಾವರ, ಹಾಸಿಂಪೀರ ಆಳಂದ, ಕುಮಾರ ದೇಸಾಯಿ, ಆನಂದ ಡೋಣೂರ, ಪ್ರಶಾಂತ ಬೂದಿಹಾಳ, ರಾಜು ಬೋರಗಿ, ರಾಮು ಬೋರಗಿ, ಗೋಳಪ್ಪ ಆಲಮೇಲ, ಗುರಪ್ಪ ಬೋರಗಿ, ರಾಮು ಜಾಲವಾದಿ, ಯಲ್ಲಪ್ಪ ಮಲಘಾಣ, ಆನಂದ ಬಾಗೇವಾಡಿ, ಭೀಮು ಸಾಲೋಡಗಿ, ಶಿವು ಮೋರಟಗಿ, ಸಂಜು ಮಲಘಾಣ ಸೇರಿದಂತೆ ಅನೇಕರಿದ್ದರು. ರಾಮು ಮೋರಟಗಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group