ಮನೆಮನೆಗೆ ಭೇಟಿ ನೀಡಿ ವಿಕಲಚೇತನರ ಗುರುತಿನ ಚೀಟಿ ಮಾಡಿಸಿ – ಎಸ್,ಎಸ್.ಹೂಲಿಕಟ್ಟಿ

Must Read

ಸವದತ್ತಿ ಃ “ವಿಕಲಚೇತನ ಮಕ್ಕಳ ಯುಡಿಐಡಿ ಕಾರ್ಡ ಮಾಡಿಸುವ ಕಾರ್ಯದಲ್ಲಿ ಮನೆಮನೆಗೆ ಭೇಟಿ ನೀಡಿ ಮನವೊಲಿಸುವ ಕಾರ್ಯ ಜರುಗಿಸಿ ತಾಲೂಕ ಆಸ್ಪತ್ರೆಗೆ ಹಾಗೂ ಸಂಬಂಧಿಸಿದ ಮಕ್ಕಳನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆ ಕೈಗೊಳ್ಳುವ ಮೂಲಕ ತಾಲೂಕಿನ ಪ್ರಗತಿ ಸಾಧಿಸಲು ಪ್ರಯತ್ನಿಸಿರಿ”ಎಂದು ತಾಲೂಕಾ ವಿವಿದೊದ್ದೇಶ ಪುನರ್ವಸತಿ ಕಾರ್ಯರ್ಕರಾದ ಎಸ್,ಎಸ್,ಹೂಲಿಕಟ್ಟಿ ತಿಳಿಸಿದರು.

ಅವರು ಸವದತ್ತಿ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಜರುಗಿದ ತಾಲೂಕಿನ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ಸಭೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿ. ಆರೋಗ್ಯ ಇಲಾಖೆಯ ಎಂ,ಎಸ್,ಪಾಟೀಲ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ಎಸ್.ಬಿ.ಬೆಟ್ಟದ, ವೈ.ಬಿ.ಕಡಕೋಳ, ಡಿ.ಎಲ್.ಭಜಂತ್ರಿ ಉಪಸ್ಥಿತರಿದ್ದರು.

ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ,ಎನ್,ಬ್ಯಾಳಿ ಮಾತನಾಡುತ್ತ, ಗ್ರಾಮೀಣ ಭಾಗದಲ್ಲಿ ಪಾಲಕರನ್ನು ಭೇಟಿ ನೀಡುವ ಮೂಲಕ ಅವರಿಗೆ ಯು.ಡಿ.ಐ.ಡಿಯ ಮಹತ್ವವನ್ನು ತಿಳಿಸುವ ಜೊತೆಗೆ ಈಗ ಕಾರ್ಡ ಆಗದೇ ಉಳಿದಿರುವ ಮಕ್ಕಳ ಬಗ್ಗೆ ಮುತುವರ್ಜಿ ವಹಿಸುವ ಮೂಲಕ ಅಂತಹ ಮಕ್ಕಳ ಕಾರ್ಡ ಮಾಡಿಸಲು ಮನವೊಲಿಸಿ ಕಾರ್ಯಪ್ರವೃತ್ತರಾಗುವಂತೆ ಕರೆ ನೀಡಿದರು.

ಮಂಗಳವಾರ ಮತ್ತು ಶುಕ್ರವಾರ ತಾಲೂಕ ಆಸ್ಪತ್ರೆಗೆ ಮಕ್ಕಳನ್ನು ಕರೆದುಕೊಂಡು ಬರುವಂತೆ ಆರೋಗ್ಯ ಇಲಾಖೆಯ ಎಂ.ಎಸ್. ಪಾಟೀಲ ತಿಳಿಸಿದರು.
ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ಎಸ್,ಬಿ,ಬೆಟ್ಟದ ಮಾತನಾಡಿ “ತಾಲೂಕಿನ ವಿವಿಧ ವಲಯಗಳಲ್ಲಿ ಯು,ಡಿ.ಐ.ಡಿ ಆಗದೇ ಇರುವ ಮಕ್ಕಳ ಪಟ್ಟಿಯನ್ನು ತಿಳಿಸುತ್ತ ಈ ಮಕ್ಕಳ ನೈಜ ಸ್ಥಿತಿಗತಿಯನ್ನು ವ್ಹಿ.ಆರ್,ಡಬ್ಲ್ಯುಗಳಿಂದ ಪಡೆದುಕೊಂಡರು.ಅದೇ ರೀತಿ ತಾಲೂಕ ಆಸ್ಪತ್ರೆಗೆ ಆಗಮಿಸುವ ಪಾಲಕರು ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರನ್ನು ಸಂಪರ್ಕಿಸಿದರೆ ಖುದ್ದಾಗಿ ತಾವು ತಾಲೂಕ ಆಸ್ಪತ್ರೆಗೆ ಹೋಗಿ ಅಂತಹ ಮಕ್ಕಳ ತಪಾಸಣೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು ಹಾಗೆಯೇ ಬ್ಯಾಂಕ್ ಪಾಸ್ ಪುಸ್ತಕ ಆಧಾರ್ ಕಾರ್ಡ್ ದಲ್ಲಿ ರುವ ಹೆಸರು ಇತ್ಯಾದಿ ಪರಿಶೀಲಿಸಿ ಸರಿಪಡಿಸಲು ತಿಳಿಸಿದರು.

ಕಾರ್ಯಕ್ರಮವನ್ನು ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ವೈ,ಬಿ,ಕಡಕೋಳ ಸ್ವಾಗತಿಸುವ ಜೊತೆಗೆ ಕಾರ್ಯಕ್ರಮ ನಿರೂಪಿಸಿದರು. ಡಿ.ಎಲ್,ಭಜಂತ್ರಿ ವಂದಿಸಿದರು.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group