ಗಝಲ್

Must Read

ಗಝಲ್

ವರುಷ ದಾಟಿದೆ ಹೃದಯವ ಅರಿಯುತ
ಜಸವ ಪಡೆದೆಯಲ್ಲ ನೀನು|
ಹರುಷ ತುಂಬುತ ಬಯಸಿದ ಮನೆಯ
ಹೊಸ್ತಿಲು ತುಳಿದೆಯಲ್ಲ ನೀನು||

ಋಣದ ಬಂಧವದು ಪ್ರೀತಿಯ ಬೆಸೆದಿದೆ
ಕಳವಳವ ದೂರವಿರಿಸಿದೆ|
ಮೀನಮೇಷ ಎಣಿಸದೆ ಮನದಿ ಧಾವಿಸಿ
ಎದೆಯಲಿ ಕುಣಿದೆಯಲ್ಲ ನೀನು||

ಕನಸಿನ ಕನ್ಯೆಯಾಗಿ ಮೋಹದಲಿ ಅಪ್ಪುತ
ತನುಮನವ ಆವರಿಸಿದೆ|
ನೆನೆಪಿನ ಸುರಿಮಳೆ ಸುರಿಸುತ ಮೋದದೊಳು
ನಯನದಿ ಸೆಳೆದೆಯಲ್ಲ ನೀನು||

ರಾಗದಲಿ ತಾಳವಾಗಿ ಲಯದಿ ಸರಿಗಮ
ಹಾಡುತಲಿ ನಿಂತಿರುವೆ|
ಭೋಗದಲಿ ವೈಭವವ ಚೂತವನ ರಸವನು
ಸವಿಯುತ ಇರುವೆಯಲ್ಲ ನೀನು||

ಹಸೆಮಣೆಯ ಏರುತ ಹೊಸದಾದ ಬಾಳಿಗೆ
ಭಾಗ್ಯವತಿಯಾಗಿ ಬಂದಿರುವೆ|
ಪಿಸುನುಡಿಯ ಅಭಿನವನ ಗಝಲನು ಆಲಿಸಿ
ಮೌನದಲಿ ನಲಿವೆಯಲ್ಲ ನೀನು||

ಶಂಕರಾನಂದ ಹೆಬ್ಬಾಳ

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group