ಬೆಳಗಾವಿ – ಇದೇ ದಿ: 22 ರಂದು, ಬೆಳಗಾವಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಐ.ಕ್ಯೂ.ಎ.ಸಿ (ಆಂತರಿಕ ಗುಣಮಟ್ಟ ಭರವಸೆ ಕೋಶ) ಹಾಗೂ ‘ಕನ್ನಡ ಸಂಸ್ಕೃತಿ ಸೇವಾ ಭಾರತಿ’ ಸಹಯೋಗದಲ್ಲಿ ಕನ್ನಡ ವಿಭಾಗದ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಓಂಕಾರಪ್ರಿಯ ಬಾಗೇಪಲ್ಲಿ ಸಂಸ್ಥಾಪಕ ಅಧ್ಯಕ್ಷರು, ಕನ್ನಡ ಸಂಸ್ಕೃತಿ ಸೇವಾ ಭಾರತಿ, ಇವರು “ಕನ್ನಡ ಪದಸಂಪತ್ತು” ವಿಷಯ ಕುರಿತು ಮಾತನಾಡಿ, ಕನ್ನಡ ಭಾಷೆ ಶ್ರೀಮಂತವಾದ ಭಾಷೆ, ಸ್ಪಷ್ಟ ಉಚ್ಚಾರಣೆ, ಓದುವ ಶೈಲಿ, ಇತ್ಯಾದಿ ಕುರಿತು ವಿದ್ಯಾರ್ಥಿನಿಯರಿಗೆ, ಮನಮುಟ್ಟುವಂತೆ ತಿಳಿಸಿದರು.
ಪ್ರಾಂಶುಪಾಲರಾದ ಡಾ.ಆರ್ ಎಸ್. ಮಾಂಗಳೇಕರ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಕನ್ನಡ ಭಾಷೆಯ ಮಹತ್ವ ಕುರಿತು ತಿಳಿಸುತ್ತಾ ಕನ್ನಡವನ್ನು ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಎಂದು ಅರುಹಿದರು.
ಸ್ವಾಗತ ಮತ್ತು ನಿರೂಪಣೆಯನ್ನು ಕನ್ನಡ ಉಪನ್ಯಾಸಕರಾದ ಪ್ರಕಾಶ ಮಬನೂರ ಮಾಡಿದರು. ಅತಿಥಿಗಳ ಪರಿಚಯ ಮತ್ತು ಪ್ರಾಸ್ತಾವಿಕ ನುಡಿಯನ್ನು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಮತಿ ಬಿ.ಎಸ್.ಗಂಗನಳ್ಳಿ ಇವರು ಹೇಳಿದರು. ಪ್ರಾರ್ಥನೆ ಮತ್ತು ಕನ್ನಡ ಗೀತೆಯನ್ನು ಸುಶ್ರಾವ್ಯವಾಗಿ ಪ್ರೊ.ಎಸ್. ಬಿ ತಟಗಾರ ದೈಹಿಕ ಶಿಕ್ಷಣ ನಿರ್ದೇಶಕರು ಹಾಡಿದರು. ವಂದನಾರ್ಪಣೆಯನ್ನು ಪ್ರಕಾಶ ಅವರು ಮಾಡಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಐಕ್ಯೂಎಸಿ ಸಂಚಾಲಕರಾದ ಡಾ. ಪ್ರವೀಣ್ ಕೋರ್ಬು, ಡಾ. ಪಿ. ಎಂ ಘಂಟಿ, ಡಾ . ವಿ. ಬಿ ನಾಯಕ, ಶಂಸುದ್ದೀನ ನದಾಫ, ಡಾ. ಡಾ. ಪ್ರಮೋದ ಹಳೆಮನಿ, ಡಾ. ಹಣಮಂತ ಚುಳುಕಿ, ಡಾ. ನಾಗೇಶ, ಡಾ. ಜಾಧವ್,ಪ್ರೊ. ಸವಿತಾ ಚೌಗಲಾ, ಇನ್ನುಳಿದ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.