ಬೆಂಗಳೂರು : ನಗರದ ಬಸವನಗುಡಿಯ ಗಾಂಧಿಬಜಾರ್ ನಲ್ಲಿ ಇರುವ ಶ್ರೀ ವ್ಯಾಸರಾಜಮಠ ದಲ್ಲಿ ದಿ. ೨೯ ಮಂಗಳವಾರ ದಂದು ಸಾಮೂಹಿಕ ಗೋ ಆರತಿ ಮತ್ತು ಗೋಪೂಜೆ ಯನ್ನು ಹಮ್ಮಿ ಕೊಳ್ಳಲಾಗಿದೆ .
ಗೋವತ್ಸ ದ್ವಾದಶಿ –ಇದು ಮಾನವ ಜೀವನವನ್ನು ಉಳಿಸಿಕೊಳ್ಳಲು ಹಸುಗಳಿಗೆ ಸಹಾಯ ಮಾಡಿದ ಕೃತಜ್ಞತಾ ಹಬ್ಬವಾಗಿದೆ, ಹೀಗಾಗಿ ಹಸುಗಳು ಮತ್ತು ಕರುಗಳೆರಡನ್ನೂ ಪೂಜಿಸಲಾಗುತ್ತದೆ ಮತ್ತು ಗೋಧಿ ಉತ್ಪನ್ನಗಳನ್ನು ತಿನ್ನಲಾಗುತ್ತದೆ. ಆರಾಧಕರು ಈ ದಿನ ಯಾವುದೇ ಗೋಧಿ ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸುವುದರಿಂದ ದೂರವಿರುತ್ತಾರೆ. ಈ ಆಚರಣೆಗಳು ಮತ್ತು ಪೂಜೆಗಳಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ನಂಬಲಾಗಿದೆ.
ಗೋವತ್ಸ ಎಂದರೆ ಗೋ + ವತ್ಸ – –ಹಸು ಮತ್ತು ಕರು. ಆಶ್ವಯುಜ ಶುದ್ಧ ದ್ವಾದಶಿಯಂದು ಕರು ಸಹಿತ ಹಸುವನ್ನು ಪೂಜಿಸಿ, ಅದಕ್ಕೆ ಬೇಕಾದ ಮೇವನ್ನು ಸಲ್ಲಿಸಬೇಕು. (ನಿತ್ಯವೂ ಗೋಸೇವೆ ವಿಹಿತ. ಆದರೆ ಇಂದು ಎಲ್ಲರೂ ಮಾಡಬೇಕು) , ನಮ್ಮ ಬಳಿ ಹಸುವಿಲ್ಲದಿದ್ದರೂ, ಹತ್ತಿರದಲ್ಲಿ ಹಸುವನ್ನು ಸಾಕಿರುವವರಿಗೆ ಹಸುವಿನ ಆಹಾರವಾದ ಹುಲ್ಲು, ಹಿಂಡಿ , ಸೊಪ್ಪು ಮುಂತಾದುವನ್ನು ನೀಡಿ. ಹಸುವಿನ ದೇಹದ ಪ್ರತಿಯೊಂದು ಭಾಗದಲ್ಲೂ ದೇವಾನುದೇವತೆಗಳು ಸನ್ನಿಹಿತರಾಗಿರುತ್ತಾರೆ.
” ಜೀವನ ಸ್ವಾಸ್ಥ್ಯವನ್ನು ನಿರ್ಮಿಸುವ ಸಂಜೀವಿನಿ ಗೋವು “
ಭಾರತೀಯ ಗೋವಂಶ ಜಗತ್ತಿನ ಜೀವಸಂಕುಲದಲ್ಲಿ ಅತಿವಿಶಿಷ್ಟ. ಜನನದಿಂದ ಮರಣಪರ್ಯಂತ ಮಾನವ ಕುಲಕೋಟಿಗೆ ಅಮೃತದಂತಹಾ ಹಾಲುಣಿಸುವ ಮಾತೆ ಗೋವು. ಗೋಮೂತ್ರ-ತುಪ್ಪ-ಬೆಣ್ಣೆ-ಮೊಸರು-ಮಜ್ಜಿಗೆಗಳಿಂದ ಜೀವನ ಸ್ವಾಸ್ಥ್ಯವನ್ನು ನಿರ್ಮಿಸುವ ಸಂಜೀವಿನಿ ಗೋವು. ಗೋಮೂತ್ರ-ಗೋಮಯಗಳಿಂದ ಜೀವನಾಧಾರವಾದ ಕೃಷಿಗೆ ಅಧಾರವಾಗಿರುವುದು ಗೋವು, ಗೋಮೂತ್ರ-ಗೋಮಯ-ಗೋಘೃತಗಳಿಂದ ದೇಹ-ದೇಶಗಳನ್ನು ಪವಿತ್ರಗೊಳಿಸುವ ದಿವ್ಯತೆಯುಳ್ಳದ್ದು ಗೋವು. ತನ್ನ ಉಸಿರಾಟ-ಸ್ಪರ್ಶ-ದರ್ಶನಗಳಿಂದ ಪ್ರಕೃತಿಮಂಡಲವನ್ನೇ ಪಾವನಗೊಳಿಸುವ ಜಗದುಪಕಾರಿ ಗೋವು.
ಗೋವು ಸಕಲದೇವತಾ ಸನ್ನಿಧಾನದಿಂದ ಅತ್ಯಂತ ಪೂಜ್ಯವಾಗಿದೆ. ಗೋಪೂಜೆಯಿಂದ ಸಕಲದೇವತೆಗಳ ಆರಾಧನೆಯ ಫಲವನ್ನು ಪಡೆಯಬಹುದು. ಪಿತೃಗಳು ಸಂತುಷ್ಟರಾಗುವರು. ಧನಧಾನ್ಯ, ಸಂತಾನ ಮೊದಲಾದ ಸಕಲಾಭೀಷ್ಟವನ್ನು ಕೊಡುವುದು. ಪರಮಪೂಜ್ಯ ಶ್ರೀ ಶ್ರೀ ೧೦೦೮ ಶ್ರೀವಿದ್ಯಾಶ್ರೀಶತೀರ್ಥ ಶ್ರೀಪಾದರ ಆದೇಶದ ಮೇರೆಗೆ ದಿನಾಂಕ 29-10-2024 ಮಂಗಳವಾರ ಗೋವತ್ಸದ್ವಾದಶೀ ದಿನದಂದು ಶ್ರೀಮಠದಲ್ಲಿ ಗೋಧೂಳಿ ಸಮಯದಲ್ಲಿ ಗೋಪೂಜೆ ಹಾಗು ಸಾಮೂಹಿಕ ಗೋ ಆರತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಭಾಗವಹಿಸಿ ಗೋಪಾಲಕೃಷ್ಣನ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಶ್ರೀ ಶ್ರೀ ವ್ಯಾಸರಾಜಮಠ ದ ಮಠಾಧಿಕಾರಿಗಳು, ವ್ಯವಸ್ಥಾಪಕರು ವಿನಂತಿಸಿ ಕೊಂಡಿದ್ದಾರೆ .
ಪೂರಕ ಮಾಹಿತಿ : ತೀರ್ಥಹಳ್ಳಿ ಅನಂತ ಕಲ್ಲಾಪುರ