ಬೀದರ್ – ಆರ್ ಟಿ ಓ ಕಚೇರಿಯ ಹಿರಿಯ ಸಾರಿಗೆ ಇನ್ಸ್ಪೆಕ್ಟರ್ ಮಂಜುನಾಥ್ ಕೋರವಿ ಹಾಗೂ ಬೀದರ್ ದಕ್ಷಿಣ ಶಾಸಕ ಡಾ.ಶೈಲೆಂದ್ರ ಬೆಲ್ದಾಳೆ ಮಧ್ಯೆ ವಾಗ್ವಾದ ನಡೆದಿದ್ದು ಅಧಿಕಾರಿಯು ಶಾಸಕರಿಗೆ ಕೈ ಮಾಡಿ ಧಮಕಿ ಹಾಕುತ್ತ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಅದರ ಬೆನ್ನಲ್ಲೆ ಆಡಿಯೋ ರಿಲೀಜ್ ಮಾಡಿ ಶಾಸಕರಿಗೆ ಚಾಲೆಂಜ್ ಮಾಡಿದ ಆರ್ ಟಿ ಓ ಸಿನಿಯರ್ ಇನ್ ಸ್ಪೆಕ್ಟರ್ ಮಂಜುನಾಥ ಕೊರವಿ..ಪೂರ್ತಿ ವಿಡಿಯೋ ಬಿಡುಗಡೆ ಮಾಡಲು ಆಗ್ರಹಿಸಿದ್ದಾರೆ
ನಾನೊಬ್ಬ ಸಣ್ಣ ಅಧಿಕಾರಿ ನನ್ನ ವಿರುದ್ದ ಶಾಸಕರು ವಿಡಿಯೋ ಮಾಡಲು ಕಾರ್ಯಕರ್ತರಿಗೆ ಹೇಳಿದಾಗ ಅವರು ವಿಡಿಯೋ ಮಾಡಿದ್ದಾರೆ.ನಾನು ಕೈ ಮಾಡಿ ಮಾತನಾಡಿದ್ದನ್ನ ಅಷ್ಟು ಮಾತ್ರ ವಿಡಿಯೋ ಬಿಡುಗಡೆ ಮಾಡಿ ಸಚಿವರಾದ ಈಶ್ವರ ಖಂಡ್ರೆ ಹಾಗೂ ರಹಿಮ್ ಖಾನ್ ಅವರಿಗೆ ಹಾಕಿದ್ದಾರೆ.ಆದರೆ ಪೂರ್ತಿ ವಿಡಿಯೋ ಹಾಕಿದ್ದರೆ ನಾನು ಮತ್ತು ಅವರ ಕಾರ್ಯಕರ್ತರ ಮಧ್ಯೆ ಮಾತನಾಡಿದ್ದು ಏನೇನು ಎನ್ನುವುದು ಗೊತ್ತಾಗುತ್ತದೆ ಎಂದು ಆರ್ ಟಿ ಓ ಅಧಿಕಾರಿ ಪತ್ರಿಕೆಗಳಿಗೆ ತಿಳಿಸಿದ್ದಾರೆ.
ಬಿಜೆಪಿ ಶಾಸಕ ಶೈಲೇಂದ್ರ ಬೆಲ್ದಾಳೆಯವರು ಬೀದರ ಹಿರಿಯ ಸಾರಿಗೆ ಅಧಿಕಾರಿ ಕೊರವಿಯವರನ್ನು ವರ್ಗಾವಣೆ ಮಾಡಿಸಿದ್ದರೆನ್ನಲಾಗಿದ್ದು ಆ ಹಿನ್ನೆಲೆಯಲ್ಲಿ ಈ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆಯೆನ್ನಲಾಗಿದೆ.ಬೀದರ್ ಜಿಲ್ಲೆಯ ಜನರಿಗೆ ನಿಜ ವಿಷಯ ಗೊತ್ತಾಗಬೇಕಾದರೆ ಶಾಸಕರು ಪೂರ್ತಿ ವಿಡಿಯೋ ಬಿಡುಗಡೆ ಮಾಡುವಂತೆ ಮಂಜುನಾಥ ಕೊರವಿ ಆಗ್ರಹಿಸಿದ್ದಾರೆ
ವರದಿ : ನಂದಕುಮಾರ ಕರಂಜೆ, ಬೀದರ