ಬೆಂಗಳೂರು – ರಾಜ್ಯ ಸರ್ಕಾರ ಶಕ್ತಿ ಯೋಜನೆ ಆರಂಭಿಸಿದಾಗಿನಿಂದ ರಾಜ್ಯಾದ್ಯಂತ ಸಾರಿಗೆ ಬಸ್ ನಲ್ಲಿ ಪ್ರಯಾಣ ಮಾಡುವುದೆಂದರೆ ಅತ್ಯಂತ ಸಾಹಸಮಯ ಕೆಲಸವಾಗಿದ್ದು ನಿರ್ವಾಹಕರು ಕೂಡ ಪ್ರಯಾಣಿಕರ ನಿರ್ವಹಣೆ ಮಾಡಲು ಹರಸಾಹಸ ಪಡುವಂತಾಗಿದೆ.
ಅಷ್ಟಕ್ಕೂ ದುಡ್ಡು ಕೊಟ್ಟು ಪ್ರಯಾಣಿಸುವ ಪುರುಷರಿಗೆ ಬಸ್ ನಲ್ಲಿ ತುಂಬಿಕೊಂಡ ಮಹಿಳೆಯರಿಂದಾಗಿ ನಿಂತುಕೊಂಡು, ಜೋತಾಡಿಕೊಂಡು ಪ್ರಯಾಣ ಮಾಡುವ ಪರಿಸ್ಥಿತಿ ಯಾವ ಪುರುಷಾರ್ಥಕ್ಕೆ ಎಂದಲ್ಲದೆ, ನಾವೇನು ಕುರಿಗಳೇ ಎಂದು ಪ್ರಶ್ನೆ ಮಾಡಬೇಕಾಗಿದೆ.
ಸಾರಿಗೆ ಸಚಿವರೆ ಇತ್ತ ಕಡೆ ನೋಡಿ…..ಸಮಸ್ಯೆ ಬಗೆಹರಿಸಿ….
ಇಂದು ರಾತ್ರಿ ೭ ಗಂಟೆಗೆ ಸುಮ್ನೇನ ಹಳ್ಳಿಯಿಂದ ಬನಶಂಕರಿಗೆ ಹೊರಟ ಬಸ್ಸಿನಲ್ಲಿ ಮೂರು ಬಸ್ ಗಾಗುವಷ್ಟು ಜನರನ್ನು ತುಂಬಲಾಗಿದ್ದು ಬಸ್ ನಿರ್ವಾಹಕರು ಟಿಕೆಟ್ ಕೊಡಲು ಪರದಾಡಿದರು.
ಬಸ್ ನಲ್ಲಿ ಅತಿ ರಶ್ ಇದ್ದಿದ್ದರಿಂದ ಪುರುಷರು ನಿಲ್ಲಲೂ ಆಗದೇ, ಕೂರಲೂ ಆಗದೆ ಜೋತಾಡುತ್ತ ಪ್ರಯಾಣ ಮಾಡಿ ನರಕ ಅನುಭವಿಸಬೇಕಾಯಿತು. ಇದು ದಿನ ನಿತ್ಯದ ಬವಣೆಯಾಗಿದೆ. ಸಾರಿಗೆ ಸಚಿವರು ಸ್ವಲ್ಪ ಕಣ್ಣು ತೆರೆಯುವರೆ?
ತೀರ್ಥಹಳ್ಳಿ ಅನಂತ ಕಲ್ಲಾಪುರ
ಬಿ ಎಂ ಟಿಸಿ ಬಸ್ ಪ್ರಯಾಣಿಕ ಬೆಂಗಳೂರು