ಕವನ : ಉಳಿಸ ಬನ್ನಿ ಕನ್ನಡ

Must Read

ಉಳಿಸ ಬನ್ನಿ ಕನ್ನಡ

ಉಳಿಸ ಬನ್ನಿ
ಉಳಿಸ ಬನ್ನಿ
ಉಳಿಸ ಬನ್ನಿ ಕನ್ನಡ
ಇರಲಿ ಬೇರೆ
ಭಾಷೆ ಪ್ರೇಮ
ಅಗ್ರ ಪಟ್ಟ ಕನ್ನಡ

ಬಸವ ಹರಿಹರ
ರಾಘವಾ0ಕ
ಕವಿ ನುಡಿಯು ಕನ್ನಡ
ಹಕ್ಕಬುಕ್ಕ ರಾಷ್ಟಕೂಟ
ಚಾಲುಕ್ಯ ಹೊಯ್ಸಳ
ಗಂಗ ಕದಂಬರ ಕನ್ನಡ

ಕಾವೇರಿಯಿಂದ
ಗೋದಾವರಿವರೆಗಿನ
ಸೀಮೆ ದಾಟಿದ ಕನ್ನಡ
ಕೃಷ್ಣ ತುಂಗೆ ಮಲಪ್ರಭೆ
ಭೀಮೆ ಘಟಪ್ರಭೆ.
ಸಿಹಿ ನೀರಿನ ಕನ್ನಡ

ಕಾಕೊಸ್ಥನ ಹಲ್ಮಿಡಿ
ಬಾದಾಮಿಯ ಕಲೆಯ ಬಲೆ
ಶಾಸನದ ಕನ್ನಡ
ವಿಶ್ವ ಪ್ರೇಮ
ಮನೆಯ ಮಾತು
ಜಗದ ಬೆಳಕು ಕನ್ನಡ

ಉಳಿಸ ಬನ್ನಿ
ಉಳಿಸ ಬನ್ನಿ
ಉಳಿಸ ಬನ್ನಿ ಕನ್ನಡ
______________________
*ಡಾ ಶಶಿಕಾಂತ ಪಟ್ಟಣ ರಾಮದುರ್ಗ*

Latest News

ಚಚಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ವೈದ್ಯಾಧಿಕಾರಿ ಡಾ.ಶಶಿಧರ ದೊಡ್ಡನಗೌಡರಿಗೆ ಸನ್ಮಾನ

ಬೈಲಹೊಂಗಲ - ಬಾಗಲಕೋಟ ಜಿಲ್ಲೆಯ ಹುನಗುಂದ ತಾಲ್ಲೂಕಿನ ಹಿರೇಆದಾಪೂರ ಗ್ರಾಮದ ಗಣ್ಯ ಮನೆತನದ ಡಾ.ಶಶಿಧರ ಶರಣಪ್ಪಗೌಡ ದೊಡ್ಡನಗೌಡರ ಅವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮುರಗೋಡ...

More Articles Like This

error: Content is protected !!
Join WhatsApp Group