ಸಾಮಾನ್ಯ ಕಾರ್ಯಕರ್ತರ ಪರಿಶ್ರಮ ಅಸಾಮಾನ್ಯ ಗೆಲುವಿಗೆ ಕಾರಣ-ಸಂಸದ ಈರಣ್ಣ ಕಡಾಡಿ

Must Read

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ನಿರೀಕ್ಷೆ ಮೀರಿ ಹೆಚ್ಚು ಸ್ಥಾನಗಳನ್ನು ಗೆಲ್ಲುವಲ್ಲಿ ಸಾಮಾನ್ಯ ಕಾರ್ಯಕರ್ತರ ಪರಿಶ್ರಮ ಅತ್ಯಂತ ಹೆಚ್ಚು ಹೀಗಾಗಿ ಅದು ಅಸಮಾನ್ಯ ಗೆಲುವಿಗೆ ಕಾರಣವಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಚುನಾವಣಾ ಪ್ರಾರಂಭದ ದಿನಗಳಲ್ಲಿ ಮಹಾರಾಷ್ಟ್ರದ ಬಿಜೆಪಿ ರಾಜಕೀಯ ಪರಿಸ್ಥಿತಿ ಅಷ್ಟೇನು ಉತ್ತಮವಾಗಿರಲಿಲ್ಲ. ಆದರೆ ದಿನ ಕಳೆದಂತೆ ಕಾರ್ಯಕರ್ತರಿಗೆ ವಾಸ್ತವ ಸಂಗತಿಯನ್ನು ಅರಿವು ಮೂಡಿಸುವ ಮೂಲಕ ಇಡಿ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತವಿದ್ದರೂ ಕೂಡಾ ಒಂದು ವೇಳೆ ಮಹಾರಾಷ್ಟ್ರದಲ್ಲಿ ನಾವು ಗೆಲ್ಲದೇ ಹೋದರೆ ಅಭಿವೃದ್ದಿಯಿಂದ ವಂಚಿತರಾಗುತ್ತೇವೆ ಮತ್ತು ಇಡಿ ದೇಶದ ಬಿಜೆಪಿ ಸಂಘಟನೆ ಮೇಲೆ ಒಂದು ದೊಡ್ಡ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಹೀಗಾಗಿ ನಮಗಿರುವುದು ಒಂದೇ ಅವಕಾಶ ಒಂದು ತಿಂಗಳುಗಳ ಕಾಲ ನಾವು ಮನೆ ಮಠಗಳನ್ನು ಬಿಟ್ಟು ಪರಿಶ್ರಮ ಹಾಕಿ ಪಾರ್ಟಿ ಪರವಾಗಿ ಗಟ್ಟಿಯಾಗಿ ನಿಂತರೇ 5 ವರ್ಷಗಳ ಕಾಲ ನಮ್ಮದೇ ಸರ್ಕಾರವನ್ನು ನಾವು ರಚನೆ ಮಾಡಿಕೊಂಡು ಉತ್ತಮ ಆಡಳಿತ ಕೊಡಬಹುದು ಎನ್ನುವುದನ್ನು ಕಾರ್ಯಕರ್ತರಿಗೆ ಮನದಟ್ಟು ಮಾಡಿದ ಪರಿಣಾಮ ಇವತ್ತು ಇಡಿ ಮಹಾರಾಷ್ಟ್ರ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಗೆ ಅಭೂತಪೂರ್ವ ಗೆಲುವಿಗೆ ಕಾರಣವಾಯಿತು.

ನನಗೂ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಸೊಲ್ಲಾಪೂರ ಮತ್ತು ಧಾರಾಶಿವ ಈ ಎರಡು ಜಿಲ್ಲೆಗಳ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ಕೆಲಸ ಮಾಡಲು ಅವಕಾಶ ಸಿಕ್ಕಿತ್ತು. ಕಾರ್ಯಕರ್ತರನ್ನು ಭೇಟಿಯಾಗಿ ಕಾರ್ಯಕ್ಕೆ ಪ್ರೇರಣೆ ಮಾಡಿ ಈ ಮೇಲಿನ ಎಲ್ಲ ಅಂಶಗಳನ್ನು ತಿಳಿಸಿದ ಮೇಲೆ ಎಲ್ಲರೂ ಗಟ್ಟಿಯಾಗಿ ಕಾರ್ಯನಿರ್ವಹಿಸಿರುವುದರಿಂದ ಬಹಳ ದೊಡ್ಡ ಬಹುಮತದ ಅಂತರದಿಂದ ಆ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಾರ್ಟಿ ಗೆಲ್ಲುವ ಮೂಲಕ ನಾನು ಮಾಡಿದ ಕಾರ್ಯಕ್ಕೂ ಒಂದು ಗೌರವ ಸಿಕ್ಕಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಅವರು ಮಹಾರಾಷ್ಟ್ರದ ಸಾರ್ವಜನಿಕ ಸಭೆಯಲ್ಲಿ ಏಕ್ ಹೈ ತೋ ಸೇಫ್ ಹೈ ಎನ್ನುವ ಮಾತು ಮಹಾರಾಷ್ಟ್ರದ ಮತದಾರರಲ್ಲಿ ಬಹಳ ದೊಡ್ಡ ಪರಿಣಾಮ ಬೀರಿತು. ನಾವು ಒಂದಾಗದಿದ್ದರೆ ನಮ್ಮ ವಿರೋಧಿಗಳೇ ಆಡಳಿತ ನಡೆಸುತ್ತಾರೆ ಎನ್ನುವ ವಿಷಯ ಕಾರ್ಯಕರ್ತರ ಮನಸ್ಸಿನಲ್ಲಿ ಪರಿಣಾಮ ಬೀರಿತು. ಹೀಗಾಗಿ ಕಾರ್ಯಕರ್ತರು ಪುಟಿದೆದ್ದರು ಮತ್ತು ಬಿಜೆಪಿಯನ್ನು ಒಪ್ಪುವ ಎಲ್ಲಾ ಸಂಘಟನೆಗಳು ನಮಗೆ ಕೈ ಜೋಡಿಸಿದರ ಪರಿಣಾಮ ಈ ಗೆಲುವಿಗೆ ಕಾರಣವಾಯಿತು. ಇಂತಹ ಅಭೂತಪೂರ್ವ ಗೆಲುವಿಗೆ ಕಾರಣರಾದ ಸಾಮಾನ್ಯ ಕಾರ್ಯಕರ್ತರಿಗೆ ಮತ್ತು ಬಿಜೆಪಿಯನ್ನು ಬೆಂಬಲಿಸುವ ಎಲ್ಲಾ ಸಂಘಟನೆಗಳೂ ನಾವು ಆಭಾರಿಯಾಗಿದ್ದೇವೆ. ಭಾರತೀಯ ಜನತಾ ಪಾರ್ಟಿ ಮತ್ತೋಮ್ಮೆ ಇದೂ ಕೇಡರ್ ಬೇಸ್ ಪಾರ್ಟಿ ಎನ್ನುವುದನ್ನು ಸಾಬೀತುಪಡಿಸಿದೆ ಎಂದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group