spot_img
spot_img

ಸಿಂದಗಿ ನಗರ ಸೌಂದರ್ಯೀಕರಣಕ್ಕೆ ಪಣ – ಅಶೋಕ ಮನಗೂಳಿ

Must Read

spot_img
    ಸಿಂದಗಿ – ಸಿಂದಗಿ ಪಟ್ಟಣವನ್ನು  ಸೌಂದರ್ಯೀಕರಣಗೊಳಿಸಲು  ಮತ್ತು ಧೂಳು ಮುಕ್ತ ನಗರವನ್ನಾಗಿ ಮಾಡಲು ನಾನು ಪಣ ತೊಟ್ಟಿದ್ದೇನೆ ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
    ಅವರು ಪಟ್ಟಣದ ಮೋರಟಗಿ ರಸ್ತೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ವಿಜಯಪುರ
ಅನುಷ್ಠಾನ ಕೆ.ಆರ್.ಐ.ಡಿ.ಎಲ್. ಸಿಂದಗಿ  2023-24 ನೇ ಸಾಲಿನ ಮುಖ್ಯ ಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ಅಂದಾಜು ರೂ 25 ಲಕ್ಷಗಳಲ್ಲಿ  ವಿಜಯಪುರ ಜಿಲ್ಲೆಯ ಸಿಂದಗಿ ನಗರದ ಅಗಸಿ ಹತ್ತಿರ ದ್ವಾರ ಬಾಗಿಲು ನಿರ್ಮಾಣ ಕಾಮಗಾರಿಗೆ  ಬುಧವಾರ  ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
    ಸಿಂದಗಿ ಜನತೆಯ ಬಹುದಿನದ ಬೇಡಿಕೆಯಾಗಿರುವ ಅಗಸಿ ಮಹದ್ವಾರ ಬಾಗಿಲು ಅತ್ಯಂತ ಅಚ್ಚುಕಟ್ಟಾಗಿ ನಿರ್ಮಾಣಗೊಳ್ಳಲಿದೆ. ಮುಂಬರುವ ದಿನಗಳಲ್ಲಿ ಪಟ್ಟಣದ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು, 24*7  ನೀರಿನ ಯೋಜನೆ, ರಸ್ತೆಯ ವಿದ್ಯುತ್ ಕಂಬಗಳ ನಿರ್ಮಾಣ ಸೇರಿದಂತೆ  ಹಲವು ಮೂಲಭೂತ ಯೋಜನೆಗಳನ್ನು  ಹಮ್ಮಿಕೊಂಡಿದ್ದೇವೆ  ಎಂದರು.
    ಈ ಸಂದರ್ಭದಲ್ಲಿ ಉಜ್ಜಯಿನಿ ಸದ್ಧರ್ಮ ಸಿಂಹಾಸನದೀಶ್ವರ ಪೂಜ್ಯಶ್ರೀ  ಜಗದ್ಗುರು  ಡಾ. ಸಿದ್ದಲಿಂಗರಾಜ ದೇಶ ಕೇಂದ್ರ ಶಿವಾಚಾರ್ಯ ಭಗವದ್ಪಾದಂಗಳವರು ಸಾನ್ನಿಧ್ಯ ವಹಿಸಿದ್ದರು.
     ಕಾರ್ಯಕ್ರಮದಲ್ಲಿ ಕೊಣ್ಣೂರು ಹೊರಗಿನ ಮಠದ  ಡಾ. ವಿಶ್ವ ಪ್ರಭುದೇವ ಶಿವಾಚಾರ್ಯರು, ಸಿಂದಗಿ ಊರಿನ ಹಿರೇಮಠದ  ಪೂಜ್ಯಶ್ರೀ ಶಿವಾನಂದ ಶಿವಾಚಾರ್ಯರು, ಕನ್ನೊಳ್ಳಿ ಹಿರೇಮಠದ ಪೂಜಶ್ರೀ ಸಿದ್ದಲಿಂಗ ಶಿವಾಚಾರ್ಯರು, ಆದಿಶೇಷ ಸಂಸ್ಥಾನ ಹಿರೇಮಠದ   ರಾಜಯೋಗಿ ನಾಗರತ್ನ ವಿರಾಜೇಂದ್ರ ಮಹಾಸ್ವಾಮಿಗಳು,
 ಪುರಸಭೆ ಅಧ್ಯಕ್ಷ ಶಾಂತಿರ್ ಬಿರಾದಾರ, ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಅಶೋಕ ವಾರದ, ಸೋಮನಗೌಡ ಬಿರಾದಾರ, ಶ್ರೀಕಾಂತ್ ಬ್ಯಾಕೋಡ, ಬಸವರಾಜ ಯರನಾಳ, ಸಾಯ್ಬಣ್ಣ ಪುರದಾಳ , ಸೈಪನ್ ನಾಟಿಕರ್, ಶರಣು ಶ್ರೀಗಿರಿ, ಕಾಂತಪ್ಪ ಅಂಬಲಗಿ, ಸುನಿಲ್ ಹಳ್ಳೂರ್,  ಮಲ್ಲಿಕಾರ್ಜುನ ಬೊಮ್ಮಣ್ಣಿ, ಚನ್ನು ಪಟ್ಟಣಶೆಟ್ಟಿ, ಬಾಬು ಕಮತಗಿ, ಸಂಗನಬಸು ಬಿರಾದಾರ, ಅಭಿವೃದ್ಧಿನ್ ನಾಟಿಕಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
- Advertisement -
- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group