- Advertisement -
ಬೀದರ – ನಗರದ ಹೃದಯಭಾಗದಲ್ಲಿಯೇ ಕೆಚ್ ಬಿ ಕಾಲನಿಯಲ್ಲಿ ಇದ್ದ ಅಮೃತ ಸೂರ್ಯವಂಶಿ ಎಂಬುವವರ ಮನೆ ಕಳ್ಳತನವಾಗಿದ್ದು ಕಳ್ಳರು ಮನೆಯನ್ನೆಲ್ಲ ಜಾಲಾಡಿ ಹಣ ಒಡವೆ ಕದ್ದೊಯ್ದಿದ್ದಾರೆ.
ಮೊಮ್ಮಗನ ಹುಟ್ಟು ಹಬ್ಬಕ್ಕೆಂದು ೧೧ ದಿನಗಳ ಕಾಲ ಕೊಯಿಮುತ್ತೂರಿಗೆ ತೆರಳಿದ್ದ ಕುಟುಂಬಸ್ಥರು ಬಂದು ನೋಡುವಷ್ಟರಲ್ಲಿ ಶಾಕ್ ಗೆ ಒಳಗಾಗಿದ್ದಾರೆ. ಮನೆಯಲ್ಲಿದ್ದ ೩೦ ಗ್ರಾಂ. ಬಂಗಾರದ ಆಭರಣಗಳು, ೨೫ ಸಾವಿರ ಹಣವನ್ನೂ ಖದೀಮರು ದೋಚಿದ್ದಾರೆ. ಸಂಘದಿಂದ ತಂದಿದ್ದ ಹಣ ಕಳುವಾಗಿದ್ದಕ್ಕೆ ಮಹಿಳೆ ಕಣ್ಣೀರು ಹಾಕುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಖದೀಮರ ಹುಡುಕಾಟದಲ್ಲಿ ತೊಡಗಿದ್ದಾರೆ.
- Advertisement -
ವರದಿ : ನಂದಕುಮಾರ ಕರಂಜೆ, ಬೀದರ