ಸಾಹಿತಿ ಪಿ.ಬಿ.ಯಲಿಗಾರರವರ ‘ಶೃಂಗಾರ ತೀರ್ಥ ‘ಕೃತಿ ಲೋಕಾರ್ಪಣೆ ಮತ್ತು ಅಭಿನಂದನಾ ಸಮಾರಂಭ
ವೃತ್ತಿಯಲ್ಲಿ ಪೊಲೀಸ್ ಇಲಾಖೆಯಲ್ಲಿದ್ದರೂ ಪ್ರವೃತ್ತಿಯಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿ ಸಂಬಂಧಗಳ ಶ್ರೀಮಂತಿಕೆ ಹೆಚ್ಚಿಸುವ ಹಲವು ಕೃತಿಗಳನ್ನು ಬರೆಯುವುದರ ಜೊತೆಗೆ, ತಮ್ಮ ಸೇವೆಯಲ್ಲಿಯೂ ಜನಪರ ಕೆಲಸ ಮಾಡಿ, ಸಾಹಿತ್ಯದಲ್ಲಿ ಹಳಗನ್ನಡ ನಡುಗನ್ನಡ,ಹೊಸಗನ್ನಡ ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ಪರಿಣಿತಿ ಹೊಂದಿ 80ರ ಹರೆಯದಲ್ಲೂ ಮೌಲ್ಯಯುತ ಕೃತಿ ರಚಿಸುವುದರಲ್ಲಿ ತೊಡಗಿರುವ ಪಾಂಡುರಂಗ.ಬಿ ಯಲಿಗಾರರ ಜೀವನ ಮಾದರಿಯಾದದ್ದು ಎಂದು ಜಗದ್ಗುರು ತೋಂಟದ ಶ್ರೀ ಸಿದ್ಧರಾಮ ಶ್ರೀಗಳು ಹೇಳಿದರು
ರವಿವಾರ ದಿ.15 ರಂದು ಬೆಳಗಾವಿಯ ನೆಹರು ನಗರದ ಇಂಜಿನಿಯರ್ಸ್ ಸಭಾಭವನದಲ್ಲಿ ಗೆಳೆಯರ ಬಳಗ ಬೆಳಗಾವಿ ವಿಶ್ವಜ್ಯೋತಿ ಪ್ರಕಾಶನ ಮತ್ತು ಪೂಜಾ ಪ್ರಕಾಶನ ಬೀದರ್ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಸಾಹಿತಿ ಪಿ.ಬಿ. ಯಲಿಗಾರರವರ ಕೃತಿ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎ.ಎಸ್. ಪಾಶ್ಚಾಪುರೆ ಕಾರ್ಯಕ್ರಮ ಉದ್ಘಾಟಿಸಿ, ಮೌಲ್ಯಯುತ ಸಾಹಿತ್ಯ ವಿಶ್ರಾಂತ ಜೀವನದ ಬದುಕನ್ನು ಇನ್ನಷ್ಟು ಉಲ್ಲಷಿತಗೊಳಿಸುತ್ತದೆ ಎಂದರು.
ನಿವೃತ್ತ ಪೊಲೀಸ್ ಅಧಿಕಾರಿ ಬಿ.ಆರ್ ಮೆಳವಂಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಣಿ ಚೆನ್ನಮ್ಮ ವಿವಿಯ ಪ್ರಾಧ್ಯಾಪಕ ಡಾ. ಎಸ್.ಎಂ ಗಂಗಾಧರಯ್ಯ ಸಾಹಿತಿ ಪಿ. ಬಿ.ಯಲಿಗಾರ ರವರು ಬರೆದ “ಶೃಂಗಾರ ತೀರ್ಥ” ಕೃತಿಯನ್ನು ಲೋಕಾರ್ಪಣೆ ಮಾಡಿದರು.
ಸಾಹಿತಿ ಮತ್ತು ಜಾನಪದ ವಿದ್ವಾಂಸ ಬಿ.ಆರ್ ಪೊಲೀಸ್ ಪಾಟೀಲ್ ಕೃತಿ ಪರಿಚಯಿಸಿದರು. ಇದೇ ಸಂದರ್ಭದಲ್ಲಿ 2023ನೇ ಸಾಲಿನ ಪತ್ರಿಕೋದ್ಯಮ ವಿಭಾಗದ ಪ್ರತಿಷ್ಠಿತ ಟಿ ಎಸ್ ಆರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಸರಜೂ ಕಾಟ್ಕರ್ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ ರಾಮಕೃಷ್ಣ ಮರಾಠೆ, ಮಂಗಲಾ ಮೆಟಗುಡ್ಡ.ಸ.ರಾ. ಸುಳಕೂಡೆ, ಯು ಎನ್ ಸಂಗನಾಳಮಠ, ಹನುಮಂತಪ್ಪ ವಲ್ಲೇಪುರೆ, ಹೆಚ್ ಬಿ ಅಸೂಟಿ, ಪ್ರಕಾಶ ಯಲಿಗಾರ. ವೈ ಎಂ. ಯಾಕೊಳ್ಳಿ , ಎಂ ವೈ. ಮೆಣಸಿನಕಾಯಿ, ಎಸ್. ವಿ.ದಳವಾಯಿ, ರವೀಂದ್ರ ಯಲಿಗಾರ,ವಿಶ್ವನಾಥ ಯಲಿಗಾರ, ವಿಶಾಲ ಯಲಿಗಾರ,ಸಂತೋಷ ಯಲಿಗಾರ, ಜ್ಯೋತಿ ಯಲಿಗಾರ ಸೇರಿದಂತೆ ಸಾಹಿತ್ಯಾಸಕ್ತರು ಮತ್ತು ಪೊಲೀಸ್ ಇಲಾಖೆಯ ಅನೇಕ ನಿವೃತ್ತ ಅಧಿಕಾರಿಗಳು ಉಪಸ್ಥಿತರಿದ್ದರು.
ಆರಂಭದಲ್ಲಿ ಪೂರ್ಣಿಮಾ ಯಲಿಗಾರ ಮತ್ತು ಮಹಾದೇವಿ ಪಾಟೀಲ ಪ್ರಾರ್ಥಿಸಿದರು, ಅಶೋಕ ಉಳ್ಳೇಗಡ್ಡಿ ಸ್ವಾಗತಿಸಿದರು. ಬಸವರಾಜ ಗಾರ್ಗಿ ನಿರೂಪಿಸಿದರು ಶಿವಾನಂದ ತಲ್ಲೂರ ವಂದಿಸಿದರು.