spot_img
spot_img

ಕಸಾಪ ಅಧ್ಯಕ್ಷರ ಅತಿ ಪ್ರಚಾರಪ್ರಿಯತೆಯ ಲಕ್ಷಣ!

Must Read

- Advertisement -

ಕನ್ನಡ ಸಾಹಿತ್ಯ ಪರಿಷತ್ತು ಎಲ್ಲ ಕನ್ನಡಿಗರದು. ಅದು ಅಧ್ಯಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವ ವ್ಯಕ್ತಿಯದಲ್ಲ. ಈಗಿನ ಕಸಾಪ ರಾಜ್ಯ ಅಧ್ಯಕ್ಷರು ಪರಿಷತ್ತಿನ ಪುಸ್ತಕಗಳ ಹಿಂದಿನ ರಕ್ಷಾ ಪುಟದಲ್ಲಿ ತಮ್ಮ ಫೋಟೋ ಹಾಕಿಕೊಳ್ಳುವುದು ತಪ್ಪು ಮತ್ತು ಅಸಹ್ಯಕರವಾದುದು. ಅಲ್ಲಿ ಪುಸ್ತಕ ಬರೆದವರ ಚಿತ್ರ ಮತ್ತು ಪರಿಚಯ ಅಥವಾ ಬೆನ್ನುಡಿ ಬರಬೇಕು. ಮಹೇಶ ಜೋಶಿಯವರೇನೂ ತಮ್ಮ ಸ್ವಂತ ಜೇಬಿನಿಂದ ಹಣ ಹಾಕಿ ೮೭ ಪುಸ್ತಕ ಮಾಡುತ್ತಿಲ್ಲ. ಅವರ ಅತಿಯಾದ ಪ್ರಚಾರಪ್ರಿಯತೆಯ ಲಕ್ಷಣ ಇದು.

ಪರಿಷತ್ತಿನಲ್ಲಿ ಸಾಹಿತಿಗಳಲ್ಲದ ಜನ ನುಗ್ಗಿದಾಗ ಇಂತಹ ಅಧ್ವಾನಗಳೆಲ್ಲ ಆಗುವುದು ಸಹಜ. ಕಸಾಪ ಚುನಾವಣೆಗಳೂ ರಾಜಕೀಯ ಚುನಾವಣೆಗಳಂತಾಗಿರುವುದರಿಂದ ಅಲ್ಲಿ ಭ್ರಷ್ಟ ಹಣವಂತ ಅಧಿಕಾರಿಗಳು ಒಳನುಗ್ಗುವಂತಾಗುತ್ತಿದೆ. ಕಳೆದ ಎರಡು ದಶಕಗಳಲ್ಲಿ ನಾವದನ್ನು ನೋಡಿದ್ದೇವೆ. ೬೦ ವರ್ಷಗಳಿಂದ ಕಸಾಪ ಆಜೀವ ಸದಸ್ಯನಾಗಿ, ಆ ಸಂಸ್ಥೆಯಲ್ಲಿ ಜಿಲ್ಲಾ ಪದಾಧಿಕಾರಿಯಾಗಿ ಕೆಲಸ ಮಾಡಿದ ನನ್ನಂಥವನಿಗೂ ಸಮ್ಮೇಳನದ ಆಮಂತ್ರಣ ಬರುವುದಿಲ್ಲ. ಜಿಲ್ಲೆಯಲ್ಲೂ ಅದೇ ಕತೆ.

ಸಾಹಿತಿಗಳಲ್ಲದವರಿಂದಲೇ ತುಂಬಿದ ಸಾಹಿತ್ಯ ಪರಿಷತ್ತು ಇನ್ನೇನಾಗಲು ಸಾಧ್ಯ? ಅದು “ಕನ್ನಡ ರಾಹಿತ್ಯ ಪರಿಷತ್ತಾಗಿ” ಸಮ್ಮೇಳನಗಳು ಬಾಡೂಟದ ಸಮ್ಮೇಳನಗಳಾಗಿ ಪರಿವರ್ತಿತವಾಗುತ್ತಿವೆ. ಮೂರು ದಿನ ವೈಭವದ ಜಾತ್ರೆ ನಡೆಸಿ ೨೫-೩೦ ಕೋಟಿ ಖರ್ಚು ಹಾಕಿ ಧನ್ಯರಾಗುತ್ತಾರೆ. ಅಪ್ರಿಯ ಸತ್ಯ ಹೇಳುವ ನಮ್ಮಂಥವರನ್ನು ಪರಿಷತ್ತು ಬಹಿಷ್ಕರಿಸಿ ದೂರ ಇಡುತ್ತದೆ.
ಹಿರಿಯ ಕವಿ ಜಿನದತ್ತರು ಬರೆದ ಒಂದು ಹನಿಗವನ ಇಲ್ಲಿ ಅರ್ಥ ಪಡೆದುಕೊಳ್ಳುತ್ತದೆ –
ಮಂತ್ರಿಗಳಿಗೆ ಕಾರು
ಪ್ರೇಕ್ಷಕರಿಗೆ ಟಾರು
ಭುವನೇಶ್ವರಿಗೆ ತೇರು
ಏನೆಲ್ಲವೂ ಉಂಟು
ಪಾಪ,
ತಾಯಿ ಸರಸ್ವತಿಯೆಲ್ಲೂ
. ಕಾಣಿಸುತ್ತಿಲ್ಲ…

- Advertisement -

ಎಲ್. ಎಸ್. ಶಾಸ್ತ್ರಿ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -

More Articles Like This

- Advertisement -
close
error: Content is protected !!
Join WhatsApp Group