spot_img
spot_img

ಸಚಿನ್ ಆತ್ಮಹತ್ಯೆ : ಸಿಬಿಐಗೆ ವಹಿಸದಿದ್ದರೆ ಬೆಂಕಿ ಹೊತ್ತಿಕೊಳ್ಳುತ್ತದೆ – ಛಲವಾದಿ ನಾರಾಯಣಸ್ವಾಮಿ ಗುಡುಗು

Must Read

spot_img
- Advertisement -

ಬೀದರ – ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ತಕರಣ ರಾಜ್ಯವ್ಯಾಪಿ ವ್ಯಾಪಿಸಬಾರದು ಅಂದರೆ ಕೇಸನ್ನು ಸಿಬಿಐಗೆ ವಹಿಸಲೇ ಬೇಕು ಇಲ್ಲವಾದರೆ ಇಡೀ ರಾಜ್ಯದ ತುಂಬ ಬೆಂಕಿಹೊತ್ತಿಕೊಳ್ಳುತ್ತದೆ ಎಂದು ಛಲವಾದಿ ನಾರಾಯಣಸ್ವಾಮಿ ಗುಡುಗಿದ್ದಾರೆ.

ಬೀದರ ಜಿಲ್ಲೆಯ ಕಟ್ಟಿತೂಗಾಂವ್ ಗ್ರಾಮದಲ್ಲಿ ಇತ್ತೀಚೆಗೆ ಸಚಿವ ಪ್ರಿಯಾಂಕ ಖರ್ಗೆ ಆಪ್ತ ರಾಜು ಕಪನೂರ ಕಿರುಕುಳಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡ ಸಚಿನ್ ವಿಷಯದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಜ್ಯ ಸರ್ಕಾರ, ಸಚಿವರು ಹೇಗೆಂದರೆ ಹಾಗೆ ನಡೆಯಲು ನಾವು ಸುಮನ್ ಬಿಡುವುದಿಲ್ಲ ಜನರ ಪರವಾಗಿ ಹೋರಾಟ ಮಾಡುತ್ತೇವೆ. ರಾಜು ಕಪನೂರ ಸಚಿನ್ ಮನೆಗೆ ಬಂದು ಹೆಣ್ಣು ಮಕ್ಕಳಿಗೆ ಧಮಕಿ ಹಾಕುತ್ತಾರೆ ಅಂದರೆ ಇದರ ಹಿಂದೆ ಯಾರ ಕೈವಾಡ ಇರಬಹುದು ವಿಚಾರ ಮಾಡಬೇಕು ಎಂದರು

ಜಿಲ್ಲೆಯಲ್ಲಿ ಸುಪಾರಿ ದಂಧೆ ಚೆನ್ನಾಗಿ ನಡೆಯುತ್ತಿದೆ. ಹೀಗಾಗಿ ನೀವು ಪ್ರಿಯಾಂಕ ಖರ್ಗೆ ಅಲ್ಲ ನೀವು ಸುಪಾರಿ ಪ್ರಿಯಾಂಕ ಖರ್ಗೆ ಎಂದು ಛಲವಾದಿ ಆಕ್ರೋಶ ವ್ಯಕ್ತಪಡಿಸಿದರು

- Advertisement -

ಸಚಿನ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆಥ್ ನೋಟ್ ಸಾಮಾಜಿಕ ‌ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದ ಆ ಬಳಿಕ ನಮ್ಮ ತಮ್ಮನ್ನ ಕಾಪಾಡಿ ಎಂದು ಸಹೋದರಿಯರು ಪೊಲೀಸ್ ಠಾಣೆಗೆ ಹೋದರು. ಆದರೆ ಪೊಲೀಸರು ಈ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಪ್ರಿಯಾಂಕ ಖರ್ಗೆ ಈ ಕೇಸ್ ನಲ್ಲಿ ಇದ್ದಾರೆಂದು ಪೊಲೀಸರು ಕಂಪ್ಲೇಂಟ್ ತೆಗೆದುಕೊಳ್ಳಲಿಲ್ಲ

ಸಚಿನ್ ಆತ್ಮಹತ್ಯೆ ಕೇಸ್ ನಲ್ಲಿ ಬೆನ್ನಲುಬಾಗಿ ಪ್ರಿಯಾಂಕ ಖರ್ಗೆ ಇದ್ದಾರೆ. ಇನ್ನು ಮುಂದೆ ಅವರ ಹೆಸರು ಪ್ರಿಯಾಂಕ ಖರ್ಗೆಯಲ್ಲ ಅವರು ಸುಪಾರಿ ಖರ್ಗೆ ಎಂದು ನಾರಾಯಣಸ್ವಾಮಿ ಹೇಳಿದರು

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಕೂಡ ಇದ್ದರು.

- Advertisement -
- Advertisement -

Latest News

ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ

ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group