Homeಸುದ್ದಿಗಳುಒಳ್ಳೆಯದು ಕೆಟ್ಟದ್ದು ಎಲ್ಲ ಮನಸ್ಸಿನ ನಿರ್ಧಾರವಾಗಿದೆ - ಡಾ. ಗುರುದೇವಿ

ಒಳ್ಳೆಯದು ಕೆಟ್ಟದ್ದು ಎಲ್ಲ ಮನಸ್ಸಿನ ನಿರ್ಧಾರವಾಗಿದೆ – ಡಾ. ಗುರುದೇವಿ

ಮೂಡಲಗಿ: ‘ಮನುಷ್ಯನ ಇಂದ್ರಿಯಗಳಿಗೂ ಮತ್ತು ಮನಸ್ಸಿಗೆ ನೇರ ಸಂಬಂಧವಿದ್ದು, ಒಳ್ಳೆಯದು ಮತ್ತು ಕೆಟ್ಟದ್ದನ್ನು ಮಾಡುವುದು ಮನಸ್ಸಿನ ನಿರ್ಧಾರವಾಗಿದೆ’ ಎಂದು ಬೆಳಗಾವಿಯ ಸಾಹಿತಿ ಡಾ. ಗುರುದೇವಿ ಹುಲೆಪ್ಪನವರಮಠ ಹೇಳಿದರು.

ತಾಲ್ಲೂಕಿನ ಅರಭಾವಿಯ ಜಗದ್ಗುರು ದುರದುಂಡೀಶ್ವರ ಪುಣ್ಯಾರಣ್ಯ ಮಠದಲ್ಲಿ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ‘ಶರಣರ ದೃಷ್ಟಿಯಲ್ಲಿ ಮನಸ್ಸು’ ವಿಷಯ ಕುರಿತು ಮಾತನಾಡಿದ ಅವರು, ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಆದರ್ಶ ವ್ಯಕ್ತಿಯಾಗಿ ಸಮಾಜಕ್ಕೆ ಭೂಷಣರಾಗಬೇಕು ಎಂದರು.

ಸಾನ್ನಿಧ್ಯವಹಿಸಿದ್ದ ಅರಭಾವಿಯ ದುರದುಂಡೀಶ್ವರ ಸಿದ್ಧಸಂಸ್ಥಾನ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮಿಗಳು ಮಾತನಾಡಿ, ನಾಡಿನಲ್ಲಿ ಅನೇಕ ಶರಣರು ತಮ್ಮ ಮನಸ್ಸನ್ನು ನಿಯಂತ್ರಿಸಿ ಸಮಾಜವನ್ನು ಬೆಳಗುವ ಕಾರ್ಯ ಮಾಡಿದರು. ಮನ್ಸಿನ ನಿಯಂತ್ರಣದಿಂದ ಅವರೆಲ್ಲ ಸಂತರು, ಮಹಾತ್ಮರಾದರು ಎಂದರು.

ಮುಖ್ಯ ಅತಿಥಿಯಾಗಿ ಅರಭಾವಿಯ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ವಿನಾಯಕ ಬಬಲೇಶ್ವರ, ನಿವೃತ್ತ ಕಂದಾಯ ನಿರೀಕ್ಷಕ ದುಂಡಪ್ಪಾ ಸತ್ತಿಗೇರಿ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿದರು.

ಅಪ್ಪಾಸಾಹೇಬ ಕುರುಬರ ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಿತು. ಸತ್ತಿಗೇರಿ ತೋಟದ ಭಕ್ತರು ಅನ್ನಪ್ರಸಾದ ಸೇವೆಯನ್ನು ಸಲ್ಲಿಸಿದರು.
ಪ್ರೊ. ವಿ.ಕೆ. ನಾಯಿಕ ಕರ‍್ಯಕ್ರಮ ನಿರೂಪಿಸಿದರು.

RELATED ARTICLES

Most Popular

error: Content is protected !!
Join WhatsApp Group