ಸಚಿನ್ ಪಾಂಚಾಳ ಮೇಲೆಯೇ ಶುರುವಾಗಿದೆ ಗುಮಾನಿ.

Must Read

ಜಿಲ್ಲಾ ಪಂಚಾಯತ್ ಸಿಇಓ ಸಹಿಯನ್ನೇ ಫೋರ್ಜರಿ ಮಾಡಿದ್ನಾ ಸಚಿನ್…?

ಬೀದರ – ಟೆಂಡರ್ ಪ್ರಕರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಚಿನ್ ಪಾಂಚಾಳನ ಮೇಲೆ ಗುಮಾನಿಯ ತೂಗುಗತ್ತಿಯೊಂದು ತೂಗುತ್ತಿದ್ದು ಜಿಲ್ಲಾ ಪಂಚಾಯತ ಸಿಇಒ ಅವರ ಸಹಿಯನ್ನು ಸಚಿನ್ ಫೋರ್ಜರಿ ಮಾಡಿದ್ದ ದಾಖಲೆ ಲಭ್ಯವಾಗಿದೆ.
೨೦೨೨ ರಲ್ಲಿ ತಾಂತ್ರಿಕ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಸಚಿನ್ ಪಾಂಚಾಳ.
ನರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇಲೆ ತಾಂತ್ರಿಕ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಿ ನೇಮಕಾತಿ ಆದೇಶ ಪಡೆಯಲು ಬೀದರ್ ಜಿಲ್ಲಾ ಸಿಇಓ ಸಹಿಯನ್ನೇ ಫೋರ್ಜರಿ ಮಾಡಿದ್ದ ಆರೋಪ ಈಗ ಬಂದಿದೆ.

೨೦೨೨ ರಲ್ಲಿ ಬೀದರ್ ಜಿಪಂ ಸಿಇಓ ಆಗಿದ್ದ ಶಿಲ್ಪಾ ಎಂ‌.
ಸಿಇಓಗೆ ಹತ್ತಿರವಿದ್ದ ಕೆಲವು ಅದೇ ಸಮುದಾಯದ ಸಿಬ್ಬಂದಿ ಗಳು. ಶಿಲ್ಪಾರಿಗೆ ಹತ್ತಿರದ ಸಿಬ್ಬಂದಿಗಳ ಸಹಾಯ ಪಡೆದುಕೊಂಡು ಸಹಿ ಫೋರ್ಜರಿ ಮಾಡಿದ್ದ ಸಚಿನ್ ಪಾಂಚಾಳಗೆ ನೇಮಕಾತಿ ಆದೇಶ ನೀಡಿದಂತೆ ನಕಲಿ ಪತ್ರ
ಫೋರ್ಜರಿ ಸಹಿ ಹಾಕಿ ನಕಲಿ ಪತ್ರದ ಮೂಲಕ ಹೊರಗುತ್ತಿಗೆ ನೌಕರಿ ಪಡೆದುಕೊಂಡಿದ್ದ ಸಚಿನ್ ಆದರೆ ಒಂದೇ ತಿಂಗಳಿಗೆ ತಮ್ಮ ಸಹಿ ಫೋರ್ಜರಿ ಆಗಿದ್ದು ಗಮನಿಸಿದ್ದ ಶಿಲ್ಪಾ ನಾಗ್ ೧-೧೦-೨೦೨೨ ರಲ್ಲಿ ಫೋರ್ಜರಿ ಸಹಿ ಮಾಡಿದ ನಕಲಿ ಆದೇಶ ಪತ್ರ. ಈ ಬಗ್ಗೆ ವಿಷಯ ತಿಳಿದು ಡಿಸೆಂಬರ್ ೩-೨೦೨೨ ರಲ್ಲಿ ಸರಿಯಾಗಿ ಕಡತ ನಿರ್ವಹಿಸುವುದು ಹೇಗೆಂದು ಅಂದಿನ ಸಿಇಓ ಟಿಪ್ಪಣಿ ಹೊರಡಿಸಿದ್ದರು. ಸಚಿನ್ ಪಾಂಚಾಳ ಫೋರ್ಜರಿ ಸಹಿ ಮಾಡಿರುವುದು ಗೊತ್ತಾಗಿ ನೇಮಕಾತಿ ಅರ್ಧಕ್ಕೆ‌ ಮೊಟಕಗೊಳಿಸಿದ್ದರು. ಆದರೆ ಜಿಲ್ಲಾ ಪಂಚಾಯತ್ ಬೀದರ್ ನ ಅಧಿಕಾರಿ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿ ಪ್ರಕರಣ ಮುಗಿಸಿದ್ದರು ಹಿರಿಯ ಅಧಿಕಾರಿ ಗಳು. ಇದೀಗ ಸಚಿನ್ ಆತ್ಮಹತ್ಯೆ ಬಳಿಕ ಹೊರ ಬಂದಿರುವ ಸಚಿನ್ ಪಾಂಚಾಳ ಫೋರ್ಜರಿ ಸಹಿ ದಾಖಲೆ ಪ್ರಕರಣ ಸಚಿನ್ ಆತ್ಮಹತ್ಯೆ ಕೇಸಿಗೆ ಟ್ವಿಸ್ಟ್ ಕೊಟ್ಟಿದೆ. ಮುಂದೇನು ಎಂಬ ಕುತೂಹಲ ಎಲ್ಲರಲ್ಲಿ ಮೂಡುವಂತೆ ಮಾಡಿದೆ.

ವರದಿ : ನಂದಕುಮಾರ ಕರಂಜೆ, ಬೀದರ

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...

More Articles Like This

error: Content is protected !!
Join WhatsApp Group