ಸಿಂದಗಿ: ಜಾನಪದ ಸಾಹಿತ್ಯದಲ್ಲಿ ತಾಯಿಯ ಮಮಕಾರ ಮಹತ್ವದ್ದಾಗಿದೆ ಜನನಿ ತಾನೆ ಮೊದಲ ಗುರು ಅಂತೆಯೇ ತಾಯಿ ನೀಡಿದ ಸಂಸ್ಕಾರ ಯಾವ ವಿಶ್ವವಿದ್ಯಾಲಯದಲ್ಲಿ ಸಿಗದು. ಸಂಸ್ಕಾರವಿಲ್ಲದ ಶಿಕ್ಷಣ ಪಡೆದರೆ ಮಾನವನ ಬದುಕಿಗೆ ವಿಪತ್ತು ಆಗುವುದರಲ್ಲಿ ಸಂಶಯವಿಲ ಎಂದು ಬೆಂಗಳೂರು ವೃತ್ತ ನಿರೀಕ್ಷಕ ಡಾ. ಜೋತಿರ್ಲಿಂಗ ಹೊನಕಟ್ಟಿ ಹೇಳಿದರು.
ದೇವರಹಿಪ್ಪರಗಿ ತಾಲೂಕಿನಲ್ಲಿ ಶುಕ್ರವಾರ ನಡೆದ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಮೂರನೇ ಗೋಷ್ಠಿ ಜನಪದ ಸಾಹಿತ್ಯ ಸಂಭ್ರಮ ಮತ್ತು ಬಂಡಾಯ ಸಾಹಿತ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಇಂದಿನ ಯುವ ಪೀಳಿಗೆ ದೃಶ್ಯ ಮಾದ್ಯಮಗಳಿಗೆ ಮಾರು ಹೋಗಿ ಜನಪದ ಸಾಹಿತ್ಯ ಮರೆತು ಹೋಗುತ್ತಿದ್ದು ಬರೀ ದಾಖಲೆಗಳಲ್ಲಿ ಉಳಿಯುವಂತಾಗಿದೆ ಏನಾದರು ಕಿಂಚಿತ್ತು ಉಳಿದುಕೊಂಡಿದೆ ಎಂದರೆ ಗ್ರಾಮೀಣ ಹೆಣ್ಣು ಮಕ್ಕಳಲ್ಲಿ ಉಳಿದುಕೊಂಡಿದೆ ಜನಪದ ಸಾಹಿತ್ಯದಲ್ಲಿ ತಾಯಿಯ ಮಮಕಾರವಿದೆ ಅದನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ನಾವೆಲ್ಲ ಯುವ ಜನತೆ ಮುಂದಾಗಬೇಕಿದೆ ಎಂದರು.
ತಾಳಿಕೋಟಿಯ ಜನಪದ ಸಾಹಿತಿ ಶಿವಲೀಲಾ ಮುರಾಳ ಮಾತನಾಡಿ, ಜನಪದ ಸಾಹಿತ್ಯ ವೆಂದರೆ ಪಾರಂಪರಿಕವಾಗಿ ಬಂದ ಆಸ್ತಿ ಇದಂಗ ಇದೊಂದು ಸಾಗರೋಪಾದಿಯಲ್ಲಿ ಹರಿದಂಗ ಜನರ ಬಾಯಿಂದ ಹರಿದು ಬರುತ್ತದೆ. ಜನಪದ ಸಾಹಿತ್ಯ ಎಂದರೆ ಸಾಗರದಂಗ ಬಗೆದಷ್ಟು ಆಳ ಆಳ ಹಾರಿದಷ್ಟು ಅಲೆ ಅಲೆಗಳು, ಆ ಮೋಡ ಕರಗಲಾರದ ಮೋಡ ತೀರಲಾರದ ಅಲೆಗಳು ಹಿಂಗೆ ಇದೆ ಜನಪದ ಸಾಹಿತ್ಯದಲ್ಲಿ ಬಹಳಷ್ಟು ಆರೋಗ್ಯ ಇದೆ. ಸತ್ವಐತಿ ಇಂದಿನ ಯುವ ಪೀಳಿಗೆಗೆ ಈಗಿನ ಜಾನಪದ ಕೇಳಿಸಬೇಡಿ ಹಿಂದಿನ ಸಾಹಿತ್ಯ ಉಳಿಸುವ ಪ್ರಯತ್ನ ಮಾಡಬೇಕು ಎಂದು ತಾಯಂದಿರಿಗೆ ಮನವಿ ಮಾಡಿದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಮಾತನಾಡಿ, ಎಲ್ಲ ಸಂಸ್ಕೃತಿಗಳ ತಾಯಿ ಬೇರು ಜನಪದ ಸಂಸ್ಕೃತಿ ಈ ಜನಪದ ಸಂಸ್ಕೃತಿಯಲ್ಲಿ ನಾವು ಬದಕನ್ನು ಹೇಗೆ ಕಟ್ಟಿಕೊಳ್ಳಬೇಕು ಎನ್ನುವದನ್ನು ಕಲಿಸಿಕೊಡುವ ಸಂಸ್ಕೃತಿಯಿದೆ ಆಚಾರಗಳು, ವಿಚಾರಗಳು, ನಡೆಗಳು, ನಂಬಿಕೆಗಳು, ಮುಂತಾದ ಪದ್ದತಿಗಳನ್ನು ಒಳಗೊಂಡಿದೆ ಸಂಪ್ರದಾಯಬದ್ದವಾದ ಸಂಸ್ಕೃತಿಯಿದೆ. ಸರಕಾರ ನಡೆಸಲು ಹೇಗೆ ಸಂವಿದಾನ ಬೇಕೋ ಹಾಗೆ ಅಲಿಖಿತ ಸಂವಿದಾನವಿಟ್ಟುಕೊಂಡು ನಮ್ಮ ಜನಪದರು ಜೀವನ ನಡೆಸಿದ್ದಾರೆ ತೊಟ್ಟಿಲದಿಂದ ಚಟ್ಟದವರೆಗಿನ ಬದುಕಿನವರೆಗೆ ಸತ್ವವಾದ ಬದುಕನ್ನು ಸಾಗಿಸಲು ಜನಪದ ಸಂಸ್ಕೃತಿ ಕಲಿಸಿಕೊಡುತ್ತದೆ ಆದರೆ ಇಂದಿನ ಯುವ ಜನತೆ ಇದನ್ನು ಮೂಲ ಸಂಸ್ಕೃತಿಯನ್ನು ಮರೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿದ ದೇವರ ಹಿಪ್ಪರಗಿ ಜಡಿಮಠದ ಜಡಿಸಿದ್ದೇಶ್ವರ ಶಿವಾಚಾರ್ಯರು, ಅಧ್ಯಕ್ಷತೆ ವಹಿಸಿದ ದಲಿತ ಬಂಡಾಯ ಸಾಹಿತಿ ರಾವುತ ತಳಕೇರಿ, ಕಸಾಪ ಜಿಲ್ಲಾಧ್ಯಕ್ಷ ಹಾಸೀಂಪೀರ ವಾಲಿಕಾರ ಮಾತನಾಡಿದರು.
ಈ ಸಂದರ್ಭದಲ್ಲಿ ಸರ್ವಾಧ್ಯಕ್ಷ ಬೈರವಾಡಗಿ ಸಾಹಿತಿ ಸಂಗಮೇಶ ಕರೆಪ್ಪಗೋಳ, ತಾಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ, ಸಾಹಿತಿ ಅಶೋಕ ಹಂಚಲಿ, ಮಾಜಿ ಅದ್ಯಕ್ಷ ಸಿದ್ದು ಮೇಲಿನಮನಿ, ಸಿಂದಗಿ ಕಸಾಪ ಅಧ್ಯಕ್ಷ ಶಿವು ಬಡಾನೂರ, ಪಂಚಮಸಾಲಿ ಸಮಾಜದ ತಾಲೂಕಾದ್ಯಕ್ಷ ಎಂ.ಎಂ.ಹಂಗರಗಿ, ಸಿದ್ದು ಬುಳ್ಳಾ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಶಿರಾಜ ಯಲಗಾರ, ಕಸಾಪ ಕೋಶಾಧ್ಯಕ್ಷ ಡಾ. ಸಂಗಮೇಶ ಮೇತ್ರಿ, ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಸಿಂದಗಿ ತಾಲೂಕಾದ್ಯಕ್ಷ ಪಂಡಿತ ಯಂಪೂರೆ, ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲಿಕಾರ, ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.
ಎಸ್.ಎಂ.ಸಾಲೋಟಗಿ ಸ್ವಾಗತಿಸಿದರು. ಅರುಣ ಕೊರವಾರ ನಿರೂಪಿಸಿದರು. ಮಲ್ಲಿಕಾರ್ಜುನ ತಳಕೇರಿ ನಿರ್ವಹಿಸಿದರು. ದಾನಮ್ಮ ಹೂಗಾರ ವಂದಿಸಿದರು.