ರಾಜ್ಯಮಟ್ಟದ ಕವಿಗೋಷ್ಠಿ ಮತ್ತು ‘ಕಾವ್ಯಸ್ಪೂರ್ತಿ’ ಕವನ ಸಂಕಲನ ಲೋಕಾರ್ಪಣೆ

Must Read

ಬೈಲಹೊಂಗಲ: ಮಣೂರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಕಲಬುರಗಿ ಇವರ ವತಿಯಿದ ರವಿವಾರ ಜನವರಿ ೧೨ ರಂದು ಬೆಳಿಗ್ಗೆ ೧೦ ಗಂಟೆಗೆ ಪಟ್ಟಣದ ಸೊಗಲ ರಸ್ತೆಯಲ್ಲಿರುವ ತಾಲೂಕಾ ಪಂಚಾಯತಿ ಸಭಾಭವನದಲ್ಲಿ ಮಕರ ಸಂಕ್ರಾಂತಿ ನಿಮಿತ್ತವಾಗಿ ರಾಜ್ಯಮಟ್ಟದ ಕವಿಗೋಷ್ಠಿ ಹಾಗೂ ಶಹಾಬುದ್ದೀನ್ ಕಾಲೇಖಾನ್ ಅವರ ‘ಕಾವ್ಯಸ್ಪೂರ್ತಿ’ ಕವನ ಸಂಕಲನ ಲೋಕಾರ್ಪಣೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ ವಹಿಸುವರು.

ಬೈಲಹೊಂಗಲದ ಹಿರಿಯ ಪತ್ರಕರ್ತರು, ಶಿಕ್ಷಣ ತಜ್ಞರಾದ ಈಶ್ವರ ಹೋಟಿ ಕವಿಗೋಷ್ಠಿ ಉದ್ಘಾಟಿಸಲಿದ್ದಾರೆ. ಧಾರವಾಡದ ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಪಿ. ಮಹಾದೇವ ನಾಯ್ಕ ಕವನ ಸಂಕಲನ ಲೋಕಾರ್ಪಣೆಗೊಳಿಸುವರು.

ಯರಗಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ. ರಾಜಶೇಖರ ಬಿರಾದಾರ ಕೃತಿ ಪರಿಚಯಿಸಲಿದ್ದಾರೆ. ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್.ಆರ್.ಠಕ್ಕಾಯಿ, ಬೈಲಹೊಂಗಲ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಮತಿ ಶಾಹೀನ್ ಅಖ್ತರ್, ಹುಬ್ಬಳ್ಳಿಯ ಉಪ ಕಾರಾಗೃಹದ ಅಧೀಕ್ಷಕರಾದ ಶಹಾಬುದ್ದೀನ್ ಕಾಲೇಖಾನ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸವದತ್ತಿಯ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಸದೆಪ್ಪ ಕೋಳಿ, ಚಿಕ್ಕಮಗಳೂರಿನ ಜಿಲ್ಲಾ ಕಾರಾಗೃಹದ ಮುಖ್ಯ ವೀಕ್ಷಕರಾದ ಬಸವಂತಪ್ಪ ಬಸಪ್ಪ ಗಡದವರ ಮುಖ್ಯ ಅತಿಥಿಗಳಾಗಿ ಆಗಮಿಸುವರು.

ರಾಜೇಶ ವಸಂತರಾವ ಮೆಂಡಿಗೇರಿ, ಎನ್. ಗುಣಶೀಲ, ನೀರಜಾ ನಾರಾಯಣ ಗಣಾಚಾರಿ, ಬಸವರಾಜ ಕಳಕಪ್ಪ ವಾರಿ, ಮಹಾಂತೇಶ ವಾಯ್. ಗೋನಕೊಪ್ಪ, ವಿಜಯಲಕ್ಷ್ಮಿ ಎಂ. ತಿರಕನ್ನವರ, ಬಸವಂತಪ್ಪ ಬಸಪ್ಪ ಗಡದವರ, ಮಹಾಂತೇಶ, ಬಸಪ್ಪ ಬಾಳಿಗಟ್ಟಿ, ಜವಾಹರ ಧ.ಕನ್ನೂರ, ಕುಂತಲ ಅಜೀತ ವಡೇರ, ಹೇಮಂತರಾಜ ಕೆ.ಸಿ., ವಿನಾಯಕ ನಾರಾಯಣ ಬಡಿಗೇರ, ಸಿದ್ಧಲಿಂಗಯ್ಯ ಅಪ್ಪಯ್ಯ ಹಿರೇಮಠ, ಶೃತಿ ಮಹಾದೇವ ಹೆಗ್ಗೆ, ರೇಷ್ಮಾ ಎಂ, ಸುಧಾ ಯಲ್ಲಪ್ಪ ಇಟ್ನಾಳ, ಡಾ. ಬಸವರಾಜ ಶಿ.ಎಣಗಿ, ಜ್ಯೋತಿ ಎಂ. ಚಿನಗುಂಡಿ, ಬಸಪ್ಪ ಬಿ. ಇಟ್ಟಣ್ಣವರ, ಶಿಲ್ಪಾ ಎಸ್. ಉಪಾಧ್ಯೆ, ಈರಣ್ಣ ಬಸಪ್ಪ ತಟ್ಟಿಮನಿ, ಯಲ್ಲಪ್ಪ ಕ. ಕೊಣ್ಣೂರ, ಸರಸ್ವತಿ ಬನ್ನಿಗಿಡದ, ಯಶವಂತ ಭರಮಣ್ಣ ಉಚಗಾಂವಕರ, ಮಂಜುಳಾ ಆನಂದ ಪಾಟೀಲ, ಮುತ್ತುರಾಜು ಚಿನ್ನಹಳ್ಳಿ, ಕಾಡೇಶ ಕಲ್ಲಪ್ಪ ಬಸ್ತವಾಡಿ, ಶೈಲಜಾ ಎಂ. ಕೋರಿಶೆಟ್ಟರ, ಮೈಲಾರಪ್ಪ ನಿಂಗಪ್ಪ ಗೋವಣ್ಣವರ, ನೇಹಾ ಶ್ರೀನಿವಾಸ ಬಡಿಗೇರ, ಶಿವಕುಮಾರ ಗು.  ಶಿವಶಿಂಪಿ, ಆನಂದ ಯಲ್ಲಪ್ಪ ಕೊಂಡಗುರಿ, ಬಸಪ್ಪ ಹೋ. ಶೀಗಿಹಳ್ಳಿ, ಸಾಗರ ಚಿನ್ನಪ್ಪ ಹುನಗುಂದ, ಎಂ. ಎಸ್.  ಪರಮೇಶ್ವರಪ್ಪ, ಪ್ರಸನ್ನ ಶಿವಯೋಗಿ ಹೂಗಾರ, ಮಹಾಂತೇಶ ಅ. ಚಿಕ್ಕಮಠ, ರಮೇಶ ನಿಂಗಪ್ಪ ಇಂಗಳಗಿ, ಗೀತಾ ಅಶೋಕ ಶೇಠಿ, ಎಸ್. ವಿ. ಕೋರಿಮಠ, ಜ್ಯೋತಿಲಕ್ಷ್ಮಿ ಬಾಲಕೃಷ್ಣ ಬಡಿಗೇರ, ನೇತ್ರಾವತಿ ವಿ. ಅಂಗಡಿ, ಎ.ಎಸ್. ಗಡದವರ ‘ಅಡವೀಶ’, ಅರುಣಕುಮಾರ ರಾಜಮಾನೆ, ಉದಯಚಂದ್ರ ದಿಂಡವಾರ, ವೀರಣ್ಣ ಮಡಿವಾಳಪ್ಪ ಹೂಲಿ, ದೀಪಾ ವಿರೂಪಾಕ್ಷ ಜವಳಿ, ಚಂದ್ರಶೇಖರ ರುದ್ರಪ್ಪ ಕೊಪ್ಪದ, ಬಾಳಗೌಡ ಶಂಕರ ದೊಡಬಂಗಿ, ದಾನಮ್ಮ ವೀ. ಅಂಗಡಿ, ಗೋದಾವರಿ ಸೋ. ಪಾಟೀಲ, ಮಲ್ಲಿಕಾರ್ಜುನ ಚಂದ್ರಶೇಖರ ಬಿರಾದಾರ, ನೇತ್ರಾವತಿ ಈ. ಬಿಸಲೊಳ್ಳಿ, ಪೂರ್ಣಿಮಾ ಯಲಿಗಾರ, ಐಶ್ವರ್ಯಾ ಶ್ರೀಕಾಂತ ಶೆರೆಗಾರ, ಮಲ್ಲಮ್ಮ ಆರ್. ಪಾಟೀಲ ರಾಜ್ಯದ ವಿವಿಧೆಡೆಯಿಂದ ಕವಿ-ಕವಯತ್ರಿಯರು ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ ಎಂದು ರಾಜ್ಯಮಟ್ಟದ ಕವಿಗೋಷ್ಠಿಯ ಮುಖ್ಯ ಸಂಯೋಜಕರು, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಹಾಗೂ ಕಲಬುರಗಿಯ ಮಣೂರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಂಸ್ಥಾಪಕ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಫಾರೂಕಅಹ್ಮದ ಮಣೂರ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group