ಮಕ್ಕಳ ಕೈಯಲ್ಲಿ ಮೊಬೈಲ್ ಬದಲಾಗಿ ಪುಸ್ತಕ ಕೊಡಿ’ – ಸಿಪಿಐ ಶ್ರೀಶೈಲ ಬ್ಯಾಕೂಡ

Must Read

ಮೂಡಲಗಿ: ‘ಮಕ್ಕಳ ಕೈಯಲ್ಲಿ ಮೊಬೈಲ್ ಬದಲಾಗಿ ಪುಸ್ತಕಗಳನ್ನು ಕೊಡಿರಿ’ ಎಂದು ಮೂಡಲಗಿಯ ಸಿಪಿಐ ಶ್ರೀಶೈಲ್ ಬ್ಯಾಕೂಡ ಹೇಳಿದರು.

ತಾಲ್ಲೂಕಿನ ಕಲ್ಲೋಳಿಯ ಬಸವೇಶ್ವರ ಶಿಕ್ಷಣ ಸಂಸ್ಥೆಯ ಹಿಪ್ಟೋಕ್ಯಾಂಪಸ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ೨೦೨೪-೨೫ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಮೊಬೈಲ್ ಬಳಕೆಯಿಂದ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಲಿದೆ, ಮಕ್ಕಳ ಉತ್ತಮ ವ್ಯಕ್ತಿತ್ವ ರೂಪಿಸುವಂತ ಸಾಧಕರ ಪುಸ್ತಕಗಳನ್ನು ಓದುವ ಪ್ರವತ್ತಿಯನ್ನು ಬೆಳೆಸಬೇಕು ಎಂದರು.

ಮುಖ್ಯ ಅತಿಥಿ ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಶಾಲಾ ಸಂಕುಲದೊಂದಿಗೆ ತಂದೆ, ತಾಯಂದಿರ ಪಾತ್ರವು ಮಹತ್ವದಾಗಿದೆ. ಆಧುನಿಕತೆ ಮತ್ತು ಒತ್ತಡದ ಬದುಕಿನಲ್ಲಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಗಮನ ನೀಡಬೇಕು ಎಂದರು.

ಸಂಸ್ಥೆಯ ಕಾರ್ಯದರ್ಶಿ ಡಾ. ಭೋಜರಾಜ ಬೆಳಕೂಡ ಮಾತನಾಡಿ ಗ್ರಾಮೀಣ ಭಾಗದ ಮಕ್ಕಳು ಪ್ರಸ್ತುತ್ತ ಸ್ಪರ್ಧಾತ್ಮಕ ಜಗತ್ತನು ಎದುರಿಸುವಲ್ಲಿ ಸಮರ್ಥವನ್ನಾಗಿಸುವುವುದು ಸಂಸ್ಥೆಯ ಉದ್ಧೇಶವಾಗಿದೆ. ಹಿಪ್ಟೋಕ್ಯಾಂಪಸ್ ಪ್ರಾಥಮಿಕ ಶಾಲೆಯಲ್ಲಿ ಪರಿಣಿತ ಶಿಕ್ಷಕ ವೃಂದವಿದ್ದು, ಮಕ್ಕಳ ಬೌದ್ಧಿಕ ಮತ್ತು ಶಾರೀರಿಕ ಬೆಳವಣಿಗೆಗೆ ಮಹತ್ವ ನೀಡಲಾಗುತ್ತಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ರಮೇಶ ಬೆಳಕೂಡ ಸಾಧಕ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಬಹುಮಾನ ವಿತರಿಸಿದರು.
ಶಾಲೆಯ ಸಮನ್ವಯಾಧಿಕಾರಿ ರಮೀಜಾ ಅನ್ನಿಗೇರಿ ಪ್ರಾಸ್ತಾವಿಕ ಮಾತನಾಡಿ ಶಾಲೆಯ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಪ್ರಕಾಶ ಗರಗಟ್ಟಿ, ಎಚ್‌ಎಲ್‌ಸಿ ನಿರ್ದೇಶಕ ರಾಹುಲ ಉತ್ತೂರೆ, ಪ್ರಾಚಾರ್ಯ ಡಾ. ಎಸ್.ಎಸ್. ಹೂಗಾರ, ಮುಖ್ಯ ಶಿಕ್ಷಕರಾದ ಕೆ.ಎಂ. ಪೋಟಿ, ಆರ್.ಬಿ. ಹೆಬ್ಬಾಳ, ಜೆ.ಪಿ. ಮುತ್ನಾಳ, ನಾಗರಾಜ ಮಧುಸುದನ ವೇದಿಕೆಯಲ್ಲಿದ್ದರು.

ಖುಷಿ ಕಡಾಡಿ, ಸಚಿನ ಕುಂದರಗಿ ಸ್ವಾಗತಿಸಿದರು, ನಾಗಮಣಿ, ಹಬೀಬುಲ್ಲಾ ಕುಶಾಲ ವಂದಿಸಿದರು ನಿರೂಪಿಸಿದರು, ಸಿಂಧು ಜೋಡನಟ್ಟಿ ವಂದಿಸಿದರು.

Latest News

ಕವನ : ಸಮಾನತೆಯ ಬೆಳದಿಂಗಳ ಪಲ್ಲವಿ

ಸಮಾನತೆಯ ಬೆಳದಿಂಗಳ ಪಲ್ಲವಿಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನಪೀಠಿಕೆಯ ಪರಿಧಿಯಲಿ ಜಾತ್ಯತೀತ,ಬ್ರಾತೃತ್ವ, ಸಮಾಜವಾದಿ ಸಾರ್ವಭೌಮತೆ,ಗಣತಂತ್ರ ನ್ಯಾಯ, ಸಮಾನತೆ ಸ್ವಾತಂತ್ರ್ಯದ ದುಂದುಭಿ ಜೀವದಾಯಿನಿ ಇದು ಭಾರತದ ಪಾಲಿಗೆ ಮುಕ್ತಿದಾಯಿನಿ ಇದು ದಾಸ್ಯದ ಸಂಕೋಲೆಗೆ ನಮ್ಮ ಸಂವಿಧಾನ ನಮಗೆ ಸುವಿಧಾನಲಿಖಿತವೂ ಧೀರ್ಘವೂ ಭಾರತಕ್ಕಿದು ಮಾರ್ಗವು ಅಸಮಾನತೆಯ...

More Articles Like This

error: Content is protected !!
Join WhatsApp Group