ಸಿಂದಗಿ: ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವುದು ಇಂದಿನ ಅವಶ್ಯಕತೆಯಾಗಿದ್ದು, ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕುಟುಂಬದಿಂದಲೇ ನೀಡಬೇಕೆಂದು ವಿಜಯಪುರದ ರಾಮಕೃಷ್ಣ ಆಶ್ರಮದ ಸ್ವಾಮಿ ನರೇಶಾನಂದರು ಹೇಳಿದರು.
ಅವರು ನಗರದ ಬಂದಾಳ ರಸ್ತೆಯಲ್ಲಿರುವ ವಿವೇಕ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ವಿವೇಕ ಸಿರಿ ಸಂಭ್ರಮ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಇಂದಿನ ಮಕ್ಕಳು ಬೌದ್ಧಿಕವಾಗಿ ಚುರುಕಾಗಿದ್ದಾರೆ. ಆದರೆ ನೈತಿಕವಾಗಿ ಕುಸಿ ಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿದ್ದ ಬಿ.ಎಲ್. ಡಿ ಸಂಸ್ಥೆಯ ಬಿ.ಎಮ್. ಪಾಟೀಲ್ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ರವಿ ಕುಮಾರ್ ಈ ಶಾಲೆಯಲ್ಲಿ ನಾನು ಓದಿದ್ದೇನೆ.ಈ ಶಾಲೆಯ ಬಗ್ಗೆ ನನಗೆ ಹೆಮ್ಮೆ ಇದೆ ಎಂದರು.
ಅಧ್ಯಕ್ಷೀಯ ನುಡಿಗಳನ್ನಾ ಡಿದ ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಚಾಲಕ ಬಾಲಕ ಮತ್ತು ಪಾಲಕರ ಪಾತ್ರ ಪ್ರಮುಖವಾಗಿದೆ ಎಂದರು. ಶಾಲೆಯ ಪ್ರಾಚಾರ್ಯ ಶ್ರೀಮತಿ ಶಾಹಿ ಮೂಲ್ ಟಿ. ರಾಬಿನ್ ಶಾಲೆಯ ಶೈಕ್ಷಣಿಕ ವರದಿ ವಾಚನ ಮಾಡಿದರು. ಆಡಳಿತ ಅಧಿಕಾರಿ ಟೆ ನಿ ರಾಬಿನ್, ಸಂಸ್ಥೆಯ ಅಧ್ಯಕ್ಷೆ ನೀಲಮ್ಮ ಹೆಗ್ಗನದೊಡ್ಡಿ, ಡಾ. ಸುಷ್ಮಾ, ಡಾ. ಅಮಿತ್, ವಿದ್ಯಾರ್ಥಿ ಪ್ರತಿನಿಧಿ ಪೃತ್ವಿ ಪಿ.ಲೋಣಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರತಿನಿಧಿ ಶ್ರೀನಿಧಿ ಕುಲ ಕರಣಿ ಹೊಂದಿಸಿದರು. ಶಿಕ್ಷಕಿ ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.