ಜಾತಿ ಸಂತಿ !
ಜಾತಿ ಹೆಂಗೈತಿ ಅಂದ್ರ
ನನ್ನ ಹೆಸರಿನಾಗ ಐತಿ
ವಾಸಿಸೋ ಮನೆಯಲ್ಲಿ ಐತಿ
ನಾ ಕುಡಿಯೋ ನೀರಾಗೈತಿ
ನಾ ತೊಡೋ ಬಟ್ಟೆಗೈತಿ
ಮತ್ತ ಅದ ರಾಡಿ
ಕಟ್ಟಬೇಕು ಯಾವಾಗ ವಸುದೇವ ಕುಟುಂಬದ ಜೋಡಿ !
ಮತ್ತ ನೀ ಕೇಳು
ಜಾತಿ ಹೆಂಗೈತಿ ,
ಹೆಂಗೈತಿ ಅಂದ್ರ
ನಾ ಹುಟ್ಟೋ ಗರ್ಭದಾಗೈತಿ
ನನ್ನೊಳಗ ಹರಿಯ ರಕ್ತದಗೈತಿ
ನಮ್ಮ ಮನೆಮಂದಿಯೊಳಗೈತಿ
ಯಾವುದೈತಿ ಅಂದ್ರ ಆದ ಜಾತಿ ಐತಿ.
ನನ್ನದಲ್ಲದ ಜಾತಿಯ ಲಗ್ನ ಅಂದ್ರ
ಊರ ಮಂದಿಗೆ ಬಾರೀ ಸಿಟ್ಟ
ಕೈಯಲ್ಲಿ ಮಚ್ಚು ಬಡಿಗಿ ಹಿಡಿದು,
ಲಗ್ನ ಆದವರ ತಲೆಯ ಕಡೆಯಕ ನಿಂತಾರ ಅವರವರ ಜಾತಿಮಂದಿ,
ಸತ್ತವರ ಹೆಣದ ಮುಂದ ಕಣ್ಣಿರಾ ಹಾಕತ್ತಾರ ಕೊನೆಗಾ ಜಾತಿ ಮರೆತಾ.
ಜಾತಿ ಎಲ್ಲಾದ್ರಾಗ ಐತಿ
ಯಾವಾದ್ರಗಿಲ್ಲಂದ್ರ
ದುಡ್ಡಿನ್ಯಾಗಿಲ್ಲ , ಕಾಮಂದಾಗಿಲ್ಲ
ಒಟ್ಟಿನ್ಯಾಗ ಹೆಣ್ಣಾಗಿಲ್ಲ ,
ಹೆಣ್ಣಿನ ಮನೆಯಗೈತಿ
ಗಂಡಿನ ಮನೆಯಗೈತಿ
ಗಂಡು ಹೆಣ್ಣ ಸೇರುವಾಗಿಲ್ಲದ ಜಾತಿ ,
ತಾಳಿ ಕಟ್ಟುವಾಗ ಬರುತೈತಿ ಜಾತಿ
ಹೆಂಗೋ ನಡೆಯಕತ್ತೈತಿ ಜಾತಿಯ ಕಾಂತಿ
ನಾ ನೀ ಸತ್ರು ಮುಗಿವಲ್ದು ಈ ಜಾತಿ ಸಂತಿ
ಒಟ್ಟಿನ್ಯಾಗ ನನ್ನ ಹೆಸರಲ್ಲಿ ಐತಿ ನನ್ನ ಜಾತಿ.
ಭೋವಿ ರಾಮಚಂದ್ರ
ಹರಪನಹಳ್ಳಿ
8861588118