ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಪಟ್ಟಣ ಪ್ರದೇಶ ಮುನವಳ್ಳಿ. ಇದು ದೇವಗಿರಿ ಯಾದವರ ಆಳ್ವಿಕೆಯ ಇತಿಹಾಸವನ್ನು ಹೊಂದಿದೆ, ಇಲ್ಲಿಯ ಪಂಚಲಿ0ಗೇಶ್ವರ ದೇವಾಲಯ ಮತ್ತು ಯಾದವರ ಕಾಲದ ಕೋಟೆ. ಅಲ್ಲಿನ ಉಡಚಮ್ಮ ದೇವಾಲಯ, ಹನುಮಾನ ಮಂದಿರ, ಅಲ್ಲಿಯ ಶಾಸನಗಳು ಚರಿತ್ರೆಯ ಪುಟವನ್ನು ತೆರೆದಿಟ್ಟಿವೆ. ತಾಲೂಕ ಕೇಂದ್ರದಿ0ದ ಹದಿನಾರು ಕಿಲೋ ಮೀಟರ್ ಅಂತರದಲ್ಲಿರುವ ಮುನವಳ್ಳಿ. ಮಲಪ್ರಭಾ ನದಿ ದಡದಲ್ಲಿನ ಪಟ್ಟಣ.
ಮುನವಳ್ಳಿಯಿಂದ ಪ್ರತಿ ವರ್ಷ ಗುಡ್ಡಾಪುರ ದಾನಮ್ಮದೇವಿಗೆ ಭಕ್ತರು ಜಾತ್ರೆಯ ಸಂದರ್ಭದಲ್ಲಿ ಪಾದಯಾತ್ರೆಯ ಹೋಗುತ್ತಿದ್ದರು. ಅದು ಕ್ರಮೇಣ ಮುನವಳ್ಳಿಯಲ್ಲಿಯೇ ಒಂದು ದೇವಾಲಯದ ಸ್ಥಾಪನೆಗೆ ಕಾರಣೀಭೂತವಾಯಿತು. ದೇವಸ್ಥಾನ ನಿರ್ಮಾಣಗೊಂಡ ನಂತರ ಪ್ರತಿ ದಿನ ಗುಡ್ಡಾಪುರದಲ್ಲಿ ಜರುಗುವ ರೀತಿಯಲ್ಲಿಯೇ ಇಲ್ಲಿಯೂ ಪೂಜೆ ಪುನಸ್ಕಾರಗಳು ಜರುಗತೊಡಗಿದವು. ಜೊತೆಗೆ ಭಾರತ ಹುಣ್ಣಿಮೆ ಸಂದರ್ಭದಲ್ಲಿ ಪ್ರತಿವರ್ಷ ಜಾತ್ರಾಮಹೋತ್ಸವ ಮಹಿಳೆಯರಿಗೆ ಉಡಿ ತುಂಬುವುದು, ಕ0ಕಣ ಕಟ್ಟುವುದು ನಂತರ ಮಹಾಪ್ರಸಾದ ಜರುಗುತ್ತ ಬರುತ್ತಿದ್ದು ಇಂದು ಫೆ.12, ಬೆಳಗ್ಗೆಯಿಂದಲೇ ವಿಶೇಷ ಪೂಜೆ ಒಂಬತ್ತು ಗಂಟೆಯಿ0ದ ಮಹಿಳೆಯರಿಂದ ಉಡಿ ತುಂಬುವ ಕಾರ್ಯ ನಡೆಯಿತು. ಮಹಾಪ್ರಸಾದ ಕೂಡ ಮುನವಳ್ಳಿಯ ದಾನಮ್ಮದೇವಿ ದೇವಸ್ಥಾನ ಸಮೀತಿ ಯವರು ಏರ್ಪಡಿಸಿದ್ದು, ಭಾರತ ಹುಣ್ಣಿಮೆಯನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸಲಾಯಿತು.
ಮಹಿಳೆಯರು ತಮ್ಮ ಮನೆಯಲ್ಲಿ ತಯಾರಿಸಿದ ನೈವೇದ್ಯದೊಂದಿಗೆ ದೇವಾಲಯಕ್ಕೆ ಆಗಮಿಸಿ ಪಲ್ಲಕ್ಕಿಗೆ ಆರತಿಯನ್ನು ಬೆಳಗಿ, ಒಂದೆಡೆ ಕುಳಿತು ದೇವಾಲಯಕ್ಕೆ ಆಗಮಿಸುತ್ತಿರುವ ಮಹಿಳೆಯರಿಗೆ ಕಂಕಣ ಕಟ್ಟುವುದು ಮತ್ತು ಉಡಿ ತುಂಬುವ ಕಾರ್ಯವನ್ನು ಬಾಳಿ ಮನೆತನದ ಬಂಧುಗಳು ನೆರವೇರಿಸುತ್ತಿರುವ ದೃಶ್ಯ ಭಕ್ತಿಯ ವೈಭವವನ್ನು ಎತ್ತಿ ತೋರಿಸುತ್ತಿದೆ. ನಿಜಕ್ಕೂ ಭಕ್ತರ ವರದಾನಿ ಗುಡ್ಡಾಪುರ ದಾನಮ್ಮದೇವಿಯ ಸಕಲ ಸದ್ಭಕ್ತರು ಮುನವಳ್ಳಿಯಲ್ಲಿಯೂ ಕೂಡ ದೇವಾಲಯ ನಿರ್ಮಿಸುವ ಜೊತೆಗೆ ಗುಡ್ಡಾಪುರ ಮಾದರಿಯಲ್ಲಿಯೇ ಪೂಜೆ ಅನ್ನ ಸಂತರ್ಪಣೆ ವಿವಿಧ ಆಚರಣೆಗಳನ್ನು ನಡೆಸುತ್ತ ಬರುತ್ತಿರುವುದು ಹೆಮ್ಮೆಯ ಸಂಗತಿ.
ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಹಾದೇವಿ ಬಾಳಿ, ದೀಪಾ ಜಗತ್ತಿನ, ಅಶ್ವಿನಿ ಬಾಳಿ, ಗೀತಾ ಶೀಲವಂತ, ವಿದ್ಯಾ ಬಾಳಿ, ಶಿವಲೀಲಾ ಬಾಳಿ, ಸೀಮಾ ಬಾಳಿ, ಶಿವಲೀಲಾ ಕಡಕೋಳ ಮೊದಲಾದವರು ಪಾಲ್ಗೊಂಡು ಉಡಿ ತುಂಬುವ ಕಾರ್ಯ ನೆರವೇರಿಸಿದರು. ನಂತರ ಅನ್ನ ಪ್ರಸಾದ ಜರುಗಿತು
ವೈ ಬಿ ಕಡಕೋಳ
ಮುನವಳ್ಳಿ-೫೯೧೧೧೭