ಖಬ್ರಸ್ಥಾನ ಕುರಿತ ಶಾಸಕ ಸಂಧಾನ ಸ್ವಾಗತಾರ್ಹ – ಖತೀಬ

Must Read

ಸಿಂದಗಿ; ನಗರದ ಮುಸ್ಲಿಂ ಸುಮಾರು ೭ರಿಂದ ೮ ಸಾವಿರ ಜನಸಂಖ್ಯೆಯಿದ್ದು ೫ಎ೧೯ಗು ಖಬರಸ್ತಾನ್  ಜಾಗೆ ಖಬರಸ್ಥಾನವಾಗಿಯೇ ಉಳಿಯಲು ಹೋರಾಟ ನಡೆಯುತ್ತಿದ್ದು ಇದನ್ನು ಗಮನಿಸಿದ ಸ್ಥಳೀಯ ಶಾಸಕ ಅಶೋಕ್ ಮನಗೂಳಿ ಅವರು ಎರಡೂ ಬಣಗಳನ್ನು ಕರೆಯಿಸಿ ಸಂದಾನದ ಮೂಲಕ ಒಂದು ನಿರ್ಣಯಕ್ಕೆ ಬಂದು ಖಬ್ರಸ್ಥಾನ ಜಾಗ ಸುತ್ತಲು ಬಡ ಕಾರ್ಮಿಕರಿಗೆ ಯು ಆಕಾರದಲ್ಲಿ  ಪತರಾಸ್ ಶೆಡ್ಡಿನ ಮಳಿಗೆ ಮಾಡಿ ಎನ್ನುವ ಬಗ್ಗೆ ತಿಳಿಸಿದ್ದು ಸೂಕ್ತವಾಗಿದೆ ಎಂದು ಕರ್ನಾಟಕ ಮುಸ್ಲಿಂ  ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಎಂ.ಎ.ಖತೀಬ ಸ್ವಾಗತಿಸಿದರು.

ಈ ವಿಷಯದ ಕುರಿತು ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ಮಹಿಬೂಬ್ ಸಿಂದಗಿಕರ, ರಹಿಮ ದುದನಿ ಇವರು ಕೂಡಾ ಶಾಸಕರ ಜೊತೆ ಚರ್ಚೆ ಮಾಡಿದರು ಸುಮಾರು ವರ್ಷ ಗಳಿಂದ ಇಲ್ಲಿ ಬಡ ಜನರ ಅಂಗಡಿಗಳು ಇದ್ದು ಆ ಅಂಗಡಿಗಳನ್ನು ಕೊಡಲು ಒಂದು ಬಣದಿಂದ ಮೂರು ಜನ ಇನ್ನೊಂದು ಬಣದಿಂದ ಮೂರು ಜನ  ಸೇರಿ ಆರು ಜನರ ಸಮಿತಿ ರಚಿಸಿ ಇದರ ಉಸ್ತುವಾರಿ ಶಾಸಕರು ವಹಿಸಿಕೊಂಡು ಚರ್ಚೆ ಮಾಡಿದ್ದಾರೆ ಪಂದು ಬಣದಿಂದ  ಸಿಂದಗಿ ಅಂಜುಮನ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಜಾಕ್ ದುದನಿ, ಮಹಬೂಬ್ ನಾಟಿಕರ್, ಹಾಗೂ ಮಾಜಿ ಪುರಸಭೆ ಅಧ್ಯಕ್ಷ ಭಾಷಾಸಾಬ್ ತಾಂಬೊಳಿ ಹೆಸರುಗಳನ್ನು ಸೂಚಿಸಿದ್ದೇವೆ ಒಂದು ಸಮಿತಿ ಮಾಡಿ  ಶಾಸಕರ ಉಸ್ತುವಾರಿಯಲ್ಲಿ ಅಂಗಡಿ ಮಾಲೀಕರೇ ಸ್ವಂತ ಖರ್ಚಿನಿಂದ ಪತ್ರಾಸ್ ಶೆಡ್ಡುಗಳು ನಿರ್ಮಿಸಬೇಕು ಇದರ ಬಾಡಿಗೆಯನ್ನು ಸಂಬಂಧಪಟ್ಟಂತಹ ಕಮಿಟಿಗೆ ಜಮಾ ಮಾಡಬೇಕೆಂದು ಚರ್ಚಿಸಲಾಗಿದೆ ಎಂದು ಹೋರಾಟದಲ್ಲಿ ಕುಳಿತ ಸಮುದಾಯ ಜನರಿಗೆ ತಿಳಿಸಲಾಗಿದೆ ಕೆಲವರು ಸಹಮತ ಸೂಚಿಸಿದರೆ ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ ಇದನ್ನು ಶಾಸಕ ಅಶೋಕ ಮನಗೂಳಿ ಅವರ ಸಂದಾನದ ಮೂಲಕ ಇತ್ಯರ್ಥಗೊಳ್ಳುತ್ತದೆ ಎನ್ನುವ ಭರವಸೆ ನನ್ನಲ್ಲಿದೆ ಎಂದರು..

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group