ಸೂರ್ಯಕಾನ್ – ಬೆಂಗಳೂರು ‘ಕರ್ನಾಟಕ 2025 ರ ಸೋಲಾರ್ ಅವಾರ್ಡಿಗೆ ಭಾಜನರಾದ ಬಾಲಚಂದ್ರ ಜಾಬಶೆಟ್ಟಿ

0
101

ಇಂಗಾಲದ ಹೆಜ್ಜೆಗಳನ್ನು ಅಳಿಸಲು ಕಂಕಣಬದ್ಧವಾಗಿರುವ ‘ಈಕ್ಯೂ ಅಂತರರಾಷ್ಟ್ರೀಯ’ ಇಂಗ್ಲೀಷ ಮಾಸಪತ್ರಿಕೆಯು ‘ಎಮ್ವಿ’, ನೋವಾಸಿಸ್, ಧಶ್ ಟೆಕ್ನಾಲಜೀಜ್ ಹಾಗೂ ಇಂಡಿಯನ್ ಸೋಲಾರ್ ಅಸೋಸಿಯೇಷನ್ ಗಳ ಸಹಯೋಗದಲ್ಲಿ, ಬೆಂಗಳೂರಿನ ಲಲಿತ ಅಶೋಕಾ ಹೊಟೇಲಿನಲ್ಲಿ ಆಯೋಜಿಸಲಾಗಿದ್ದ ಸೂರ್ಯಕಾನ್ ಬೆಂಗಳೂರು-2025 ರಡಿಯಲ್ಲಿ ಕೊಡಮಾಡುವ ‘ಕರ್ನಾಟಕ ಎನ್ಯುವಲ್ ಸೋಲಾರ್ ಅವಾರ್ಡ-2025’ ನ್ನು ರಾಮದುರ್ಗದ ಗ್ರೀನ್ ಲ್ಯಾಂಡ್ ಬಯೋಟೆಕ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಾಲಚಂದ್ರ ಜಾಬಶೆಟ್ಟಿಯವರಿಗೆ ನೀಡಲಾಗಿದೆ.

ಪ್ರಧಾನ ಮಂತ್ರಿ ಸೂರ್ಯಘರ ಯೋಜನೆಯಡಿಯಲ್ಲಿ ಮನೆ ಮೇಲ್ಛಾವಣಿ ಮೇಲೆ ಸೌರವಿದ್ಯುತ್ ಅಳವಡಿಸುವ ‘ಸ್ಟಾರ್ಟ ಅಪ್ ಇ.ಪಿ.ಸಿ.’ (ಇಂಜನೀಯರಿಂಗ್, ಪ್ರೊಕ್ಯುರ್ ಮೆಂಟ್ ಮತ್ತು ಕನ್ಸಟ್ರಕ್ಶನ್) ಕಂಪನಿ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಕ್ಕಾಗಿ ವರ್ಷದ ಅತ್ಯುತ್ತಮ ಕಂಪನಿ ಹಾಗೂ ವಾಣಿಜ್ಯ ಕ್ಷೇತ್ರದಲ್ಲಿ ಸೋಲಾರ ವಿದ್ಯುತ್ ಉತ್ಪಾದನಾ ಘಟಕ ಅಳವಡಿಕೆ ಈ ಎರಡ ಕ್ಷೇತ್ರದಲ್ಲಿ ಮಾಡಿದ ಗಣನೀಯ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಲೋಖಂಡೆ ಸ್ನೇಹಲ್ ಸುಧಾಕರ, ಆಯ್.ಎ.ಎಸ್, ಮ್ಯಾನೇಜಿಂಗ್ ಡೈರೆಕ್ಟರ್, ಪಾವರ್ ಕಂಪನಿ‌ ಆಫ್ ಕರ್ನಾಟಕ, ಬೆಂಗಳೂರು, ಸಿ.ನರಸಿಂಹನ್, ಮಾಜಿ ಸಂಸದರು ಹಾಗೂ ಅಧ್ಯಕ್ಷರು ಇಂಡಿಯನ್ ಸೋಲಾರ್ ಅಸೋಸಿಯೇಷನ್  ಇವರು ಪ್ರಶಸ್ತಿಯನ್ನು ಕೊಡಮಾಡಿದರು