- Advertisement -
ಅಮ್ಮ
ಅಮ್ಮ ನೀನು
ಹೆತ್ತು ಹೊತ್ತ
ಕಂದಮ್ಮ ನಾನು
ಇಂದೇಕೊ ನಿನ್ನ
ನೆನಪು ಕಾಡುತ್ತಿದೆ
ನೀನು ಲಂಗ ತೊಡಿಸಿ
ಹೆರಳು ಹಾಕಿ
ಮುಖಕ್ಕೆ ಪೌಡರ್ ಹಚ್ಚಿ
ಕಣ್ಣಿಗೆ ಕಾಡಿಗೆ ತೀಡಿ
ಹಣೆಗೆ ಮುತ್ತಿಕ್ಕಿದ ನೀನು
ಒಮ್ಮೆಲೆ ಹೇಳದೆ ಕೇಳದೆ
ಬಾರದ ಊರಿಗೆ
ಹೋದೆ ಅವ್ವಾ
ಬಿಕ್ಕಿ ಬಿಕ್ಕಿ ಅತ್ತೆ
ನೀನಿಲ್ಲದ ಬದುಕು
ಕಷ್ಟ ದುಃಖಗಳ ಜೀವನ
ಇಂದು ಮಹಿಳೆಯರ ದಿನ
ನಿನ್ನ ಪ್ರೀತಿ ಮಮತೆ
ನಾನು ನಿನ್ನ ಮಗಳು
ಎಂಬ ಹೆಮ್ಮೆ ಮಾತ್ರ ನನ್ನದು
_________________________
ದೀಪಾ ಪೂಜಾರಿ ಕುಶಾಲನಗರ