ಸಿಂದಗಿ; ಸಿಂದಗಿಯ ಸಿರಿ ಶಾಂತವೀರ ಪಟ್ಟಾಧ್ಯಕ್ಷರ ೪೫ನೆಯ ಪುಣ್ಯ ಬಹುಳೋತ್ಸವದ ನಿಮಿತ್ತವಾಗಿ ಪೂಜ್ಯ ಗುರುಗಳ ಬೆಳ್ಳಿ ಮೂರ್ತಿಯ ಮೆರವಣಿಗೆ ಸಮಾರಂಭ ಶನಿವಾರ ನೆರವೇರಿತು.
ಈ ಸಂದರ್ಭದಲ್ಲಿ ಶಾಸಕ ಅಶೋಕ ಮನಗೂಳಿ ಮಾತನಾಡಿ, ಪರಮ ಪೂಜ್ಯಶ್ರೀ ಸಿಂದಗಿಯ ಪಟ್ಟಾಧ್ಯಕ್ಷರಾದ ಮ. ಘ. ಚ. ಶಾಂತವೀರ ಪಟ್ಟಾಧ್ಯಕ್ಷರು ಈ ಸಮಾಜದಲ್ಲಿ ಬಾಳಿ ಬೆಳಗಿದಂತ ಮಹಾಪುರುಷರು. ಜಾತ್ಯತೀತವಾಗಿ, ಧರ್ಮಾತೀತವಾಗಿ ಸಮಾಜವನ್ನು ಬೆಳಗಿದಂತವರು ಲಿಂಗಕ್ಕೆ ಶಾಂತವೀರ ಶ್ರೀಗಳು, ಅವರ ಬದುಕಿನದ್ದಕ್ಕೂ ಸಮಾಜವನ್ನ ಪ್ರೀತಿಸುವ, ಪ್ರೇಮಿಸುವ ಮತ್ತು ಔದಾರ್ಯ ಗುಣವನ್ನು ಹೊಂದಿರುವಂತಹ ಶ್ರೀಗಳು. ಶ್ರೀ ಮಠದ ಜೀರ್ಣೋದ್ಧಾರಕ್ಕೆ ರಾಜ್ಯ ಸರ್ಕಾರದಿಂದ ೧೦ ಲಕ್ಷ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ಮತ್ತು ನನ್ನ ವೈಯಕ್ತಿಕ ಅನುದಾನವನ್ನು ನೀಡುವ ಮೂಲಕ ಶ್ರೀಮಠವನ್ನು ಅಭಿವೃದ್ಧಿ ಪಡಿಸುವಲ್ಲಿ ನಾನು ಮುಂದಾಗುತ್ತೇನೆ ಎಂದು ಭರವಸೆ ನೀಡಿದರು.
ಪಲ್ಲಕ್ಕಿ ಉತ್ಸವ ಮೆರವಣಿಗೆಯಲ್ಲಿ ಸಿಂದಗಿಯ ಊರಿನ ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯರು, ಸಂಶಿಯ ವಿರಕ್ತ ಮಠದ ಪೂಜ್ಯಶ್ರೀ ಚನ್ನಬಸವ ದೇವರು, ರಟಕಲ್ಲ ಶ್ರೀಗಳು, ಕಲಬುರ್ಗಿಯ ರೋಜಾ ಹಿರೇಮಠದ ಶ್ರೀ ಕೆಂಚ ಬಸವೇಶ್ವರ ಶಿವಾಚಾರ್ಯರು, ನರೋಣ ಶ್ರೀಗಳು ಸೇರಿದಂತೆ ಹಲವಾರು ವಿವಿಧ ಮಠಾಧೀಶರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.