ಬೆಳಗಾವಿ- ಸವದತ್ತಿ ತಾಲೂಕಿನ ಸಿಂದೋಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಅನಸೂಯಾ ಶಂಕರಪ್ಪ ಮದನಬಾವಿಯವರಿಗೆ ಕರ್ನಾಟಕ ರಾಜ್ಯ ಮಹಿಳಾ ನೌಕರರ ಸಂಘದ ಆಶ್ರಯದಲ್ಲಿ ಕಲಬುರಗಿ ಯಲ್ಲಿ ಪೂಜ್ಯ ಡಾ ಬಸವರಾಜಪ್ಪ ಅಪ್ಪ ಮೆಮೋರಿಯಲ್ ಹಾಲ್ ನಲ್ಲಿ ಜರುಗಿದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ರಾಣಿ ಅಬ್ಬಕ್ಕ ದೇವಿ ಪ್ರಶಸ್ತಿಯನ್ನು ಗಣ್ಯರು ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ರಾದ ಶಶಿಲ್ ನಮೋಸಿ, ಕಲಬುರಗಿ ಅಕ್ಕಮಹಾದೇವಿ ಆಶ್ರಮದ ಮಾತೋಶ್ರಿ ಶ್ರೀ ಪ್ರಭು ತಾಯಿ, ರಾಜ್ಯ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ರಮಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ಡಾ. ಶೈಲಜಾ,, ಕಲಬುರಗಿ ಜಿಲ್ಲೆಯ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ನಂದಿನಿ ಸನಬಾಳ್ , ಬೆಳಗಾವಿ ಜಿಲ್ಲೆಯ ಶಿಕ್ಷಕ ಸಾಹಿತಿ ವಾಯ್.ಬಿ.ಕಡಕೋಳ, ಮದನಬಾವಿಯವರ ಪತಿ ರಾಜು ಈರಪ್ಪ ಹಟ್ಟಿ, ಸಹೋದರನಾದ ಸಮಾಜ ಸೇವಕ ಸೋಮಲಿಂಗ ಮದನಬಾವಿ,ಆಕಾಶವಾಣಿ ಕಾರ್ಯ ಕ್ರಮ ನಿರ್ವಹಣಾಧಿಕಾರಿ ಸದಾನಂದ ಪೆರ್ಲ, ಜಿಲ್ಲಾ, ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಯ್ಯ ಗುತ್ತೇದಾರ, ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳುಂಡಗಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ್ ತೇಗಲತಿಪ್ಪಿ, ಡಾ.ರವಿಕಾಂತಿ ಕ್ಯಾತನಾಳ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ಪ್ರಜಾವಾಣಿ ಪತ್ರಿಕೆಯ ಉಪಸಂಪಾದಕರಾದ ರಶ್ಮಿ ಹಾಗೂ ಕಲಬುರಗಿ ಜಿಲ್ಲೆಯ ಜಿಲ್ಲಾ ಆಪರ ಸರಕಾರಿ ವಕೀಲರಾದ ಶರಣಮ್ಮ ಪಾಟೀಲ ಉಪನ್ಯಾಸ ನೀಡಿದರು.
ನಾಗರತ್ನ ಹಾಗೂ ರೇಣುಕಾ ನಿರೂಪಣೆ ಮಾಡಿದರು.ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ಡಾ. ಶೈಲಜಾ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ರಮಾ ಮಹಿಳಾ ಸಂಘಟನೆ ಬೆಳವಣಿಗೆ ಮಹತ್ವ ಕುರಿತು ಮಾತನಾಡಿದರು. ಜಮುನಾ ಟಿಳೆ ವಂದಿಸಿದರು