ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ

Must Read
 ಮೈಸೂರು –  ಪರಮಪೂಜ್ಯ ಶ್ರೀವಿದ್ಯಾಶ್ರೀಶತೀರ್ಥಶ್ರೀಪಾದರು ಸ್ಥಾಪಿಸಿದ ಮೈಸೂರಿನ ಶ್ರೀವ್ಯಾಸತೀರ್ಥವಿದ್ಯಾಪೀಠವು ಅನೇಕ ಶಾಸ್ತ್ರಗಳನ್ನು ಪಾಠ ಮಾಡುವ ವ್ಯವಸ್ಥೆಯನ್ನು ಒಳಗೊಂಡಿದೆ.  ಈ ವ್ಯಾಸತೀರ್ಥವಿದ್ಯಾಪೀಠವು ವಿದ್ಯಾಕ್ಷೇತ್ರದಲ್ಲಿ ಅನೇಕ ಸಾಧನೆಗಳನ್ನು ಮಾಡುತ್ತಿದ್ದು ಈಗ ಮತ್ತೊಂದು ಸಾಧನೆಯನ್ನು ಮಾಡಿದೆ.
   ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ವಿದ್ಯಾಪೀಠದ ಮೂವರು ಬಹುಮಾನವನ್ನು ಪಡೆದು ಕರ್ನಾಟಕ ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದಾರೆ. ರಾಷ್ಟ್ರಾದ್ಯಂತ ಬರುವ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ. ಖ್ಯಾತನಾಮ ವಿದ್ವಾಂಸರು ಸ್ವತಃ ಪರೀಕ್ಷೆಯನ್ನು ಮಾಡಿ ನಿರ್ಣಯವನ್ನು ನೀಡಿರುತ್ತಾರೆ.
 ಈ ಹಿಂದೆಯೂ ಅನೇಕ ಬಾರಿ ರಾಜ್ಯಮಟ್ಟದ ಹಾಗು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಭಾಗವಹಿಸಿ ಸ್ವರ್ಣ-ರಜತ -ಕಂಚಿನ ಪದಕಗಳನ್ನು ತಂದಿರುವುದನ್ನು ಇಲ್ಲಿ ಸ್ಮರಿಸಬಹುದು.
  ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಖ್ಯಾತ ಯೋಗ ಗುರು ಬಾಬಾ ರಾಮದೇವ್, ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ ಶ್ರೀನಿವಾಸ ವರಖೇಡಿ ಮೊದಲಾದವರು ಉಪಸ್ಥಿತರಿದ್ದರು. ಬಹುಮಾನ ಪಡೆದವರು…
 ಡಿ. ಪ್ರಣವಾಚಾರ್ಯ – ನ್ಯಾಯಭಾಷಣ – ರಜತಪದಕ.
ಶ್ರೀಶಾಚಾರ್ಯ ಅಯಾಚಿತ – ಬೌದ್ಧಭಾಷಣ – ರಜತಪದಕ.                                                                 ಚಿ. ವಲ್ಲಭ – ಸಾಹಿತ್ಯ ಶಲಾಕಾ-ಕಂಚಿನ ಪದಕ.
ಬಹುಮಾನ ವಿಜೇತರೆಲ್ಲರನ್ನೂ ಶ್ರೀ ವ್ಯಾಸತೀರ್ಥ ವಿದ್ಯಾಪೀಠ ಮೈಸೂರು ಇದರ ಗೌರವಕಾರ್ಯದರ್ಶಿಗಳು
ಪ್ರಾಂಶುಪಾಲರು ಅಧ್ಯಾಪಕ ಮತ್ತು ವಿದ್ಯಾರ್ಥಿವೃಂದದವರು ಅಭಿನಂದಿಸಿದ್ದಾರೆ.
Latest News

ಮಹಿಳೆಯರ ಅಬಲೆಯರ ಅನಾಥರ ಆಶಾಕಿರಣ ಎಸ್. ಜಿ. ಸುಶೀಲಮ್ಮ

ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಸಮಸಮಾಜವನ್ನು ಕಟ್ಟ ಬಯಸಿದ ಅಣ್ಣ ಬಸವಣ್ಣನವರ ಆದರ್ಶ ವ್ಯಕ್ತಿತ್ವಗಳಿಗೆ ಮಾರು ಹೋಗಿ ತಮ್ಮ ಬದುಕಿನ ಆರು...

More Articles Like This

error: Content is protected !!
Join WhatsApp Group