ಕವನ : ಕವಿಯ ಕಾವ್ಯದಂಗಳ

Must Read

ಕವಿಯ ಕಾವ್ಯದಂಗಳ

ಕಾವ್ಯವೊಂದು ಅದ್ಭುತ ಜಗದ ಶ್ರವಣ
ಸಂಭ್ರಮಿಸುವ ಧಿಗ್ಭ್ರಮಿಸುವ ಸ್ಫುರಣ
ಕಣ್ಣಿಗೆ ಕಂಗೊಳಿಸುವ ದೃಶ್ಯಗಳಾಭರಣ
ಸೌಗಂಧ ಶ್ರೀಗಂಧ ಪರಿಸರದ ಅನಾವರಣ
ಸಂಪ್ರೀತಿ ಸಂತೃಪ್ತಿ ತಂದ ಹೃದಯದಂಗಣ
ಕವಿಯಲ್ಲಿ ಸಂಚರಿತ ಸ್ಪುರಣದ ಹೂರಣ

ಕಾವ್ಯ ಜೀವನದ ಅನುಭವಗಳ ಹಂದರ
ಕೆದಕಿ ಶೇಖರಿಸಿದ ಬಿತ್ತಣಿಕೆಯ ಸಂಚಾರ
ಬರವಣಿಗೆಯಲ್ಲಿ ಹರಿದ ಶಬ್ದಗಳ ಶರ
ಕವಿಯ ವರ್ಣನೆಯಲ್ಲಿ ಅರಳಿದ ಅಕ್ಷರ
ಓದುಗರ ಹೃದಯ ತಟ್ಟುವ ಭ್ರಮರ
ಕನ್ನಡಮ್ಮ ಹಾರೈಸುತ ನೀಡಿಹಳು ವರ

ಕವಿಯ ಕಲ್ಪನೆಯ ಶರಧಿಯ ಆಳ
ಅರಳಿ ಪುಟಿಪುಟಿದೇಳುವ ಸ್ವರತಾಳ
ಕಾವ್ಯ ಲಹರಿ ಸ್ಪಂದನೆಯ ಮಿಡಿತದಾಳ
ಮನದಿಂದ ಮನಕ್ಕೆ ಪೋಣಿಪುದು ಸರಳ
ವಿಶ್ವ ಕಾವ್ಯ ದಿನದೊಂದು ಈ ನನ್ನ ಕವನ
ತಲುಪಲಿ ಕವಿಗಳ ಕಾವ್ಯದ ಪ್ರಾಂಗಣ

ಶ್ರೀಮತಿ ಸುಲೋಚನಾ ಮಾಲಿಪಾಟೀಲ.

Latest News

ಮಹಿಳೆಯರ ಅಬಲೆಯರ ಅನಾಥರ ಆಶಾಕಿರಣ ಎಸ್. ಜಿ. ಸುಶೀಲಮ್ಮ

ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಸಮಸಮಾಜವನ್ನು ಕಟ್ಟ ಬಯಸಿದ ಅಣ್ಣ ಬಸವಣ್ಣನವರ ಆದರ್ಶ ವ್ಯಕ್ತಿತ್ವಗಳಿಗೆ ಮಾರು ಹೋಗಿ ತಮ್ಮ ಬದುಕಿನ ಆರು...

More Articles Like This

error: Content is protected !!
Join WhatsApp Group