ಕವನ : ಸೈತಾನನ ಸಂತತಿ !!

Must Read

ಸೈತಾನನ ಸಂತತಿ!!

ಬಟ್ಟೆಯ ಬಿಚ್ಚಿಸಿ ನೋಡಿದರೆ
ಧರ್ಮವು ಕಾಣುವುದೇ…!

ನಡೆ ನುಡಿ ಸಹೃದಯಗಳಲಿ
ಅಡಗಿದೆ ಮಾನವ ಧರ್ಮ…

ಧರ್ಮದ ಅಮಲು ನೆತ್ತಿಗೇರಿಸಿ
ನರ್ತನ ಮಾಡುವ ಅಧಮರೇ

ಕ್ರೂರ ಮನದ ಕೊಲೆಗಡುಕ
ಸೈತಾನನ ಸಂತತಿಯವರೇ…

ಅರ್ಥವಾಗದು ದುರುಳ ಜನಕೆ
ಕರುಳ ಸಂಬಂಧಗಳ ನೋವು

ಕಲಿಸುವುದು ಕಾಲವೇ ನಿಮಗೆ
ಕೊಳಕು ಮನದ ಕ್ರಿಮಿಗಳೇ…

ಪಹಲ್ಗಮ್ ನಲ್ಲಿ ನೆತ್ತರು ಸುರಿಸಿ
ಬಲಿದಾನವಾದ ಸಹೋದರರೇ

ಭಗವಂತ ಚಿರಶಾಂತಿ ನೀಡಲಿ
ನಿಮಗಿದೋ ಸಾವಿರ ನಮನ…

ಎ.ಎಸ್.ಗಡದವರ(ಅಡವೀಶ)
ಹಿ.ಪ್ರಾ.ಕ.ಹೆ.ಮ.ಆಶ್ರಮ ಶಾಲೆ
ದೇಶನೂರ – 591147
ತಾ:ಬೈಲಹೊಂಗಲ ಜಿ:ಬೆಳಗಾವಿ.

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...

More Articles Like This

error: Content is protected !!
Join WhatsApp Group